ಗ್ರಾಮೀಣ ಪ್ರದೇಶಗಳಲ್ಲಿ ನಿವೇಶನ, ಖಾಲಿಜಾಗ, ಮತ್ತು ಮನೆ ಹೊಂದಿರುವ ಪ್ರತಿಯೊಬ್ಬರು ತಮ್ಮ ಆಸ್ತಿಯ ಡಿಜಿಟಲ್ ದಾಖಲೆಯನ್ನು ಹೊಂದಿರಬೇಕು. ಪಂಚಾಯತ್ ರಾಜ್ ಇಲಾಖೆಯ ಇ-ಸ್ವತ್ತು(e-Swathu) ವೆಬ್ ಪೋರ್ಟಲ್ ಮೂಲಕ ಉಚಿತವಾಗಿ ಮಾಹಿತಿಯನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಬಹುದು. ಇ-ಸ್ವತ್ತು ಎಂಬುದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಖಾಸಗಿ ಆಸ್ತಿಗಳ ನೊಂದಣಿ, ಮಾಲೀಕತ್ವದ ವಿವರಗಳಾಗಿರುತ್ತವೆ.
ಈ ಇ-ಸ್ವತ್ತನ್ನು ಏಕೆ ಮಾಡಿಸಬೇಕೆಂದರೆ ಅಧಿಕೃತವಾಗಿ ನಿಮ್ಮ ಆಸ್ತಿಯ ದಾಖಲೆಗಳು
ಗ್ರಾಮಪಂಚಾಯಿತಿಯಲ್ಲಿ ನೊಂದಾವಣೆಯಾಗಿರಬೇಕು. ಇದರಿಂದ ಸರ್ಕಾರದಿಂದ ಹಲವಾರು ಅನುಕೂಲಗಳನ್ನು ಪಡೆಯಬಹುದು. ಬ್ಯಾಂಕ್ನಿಂದ ಲೋನ್, ಪಟಾ ದಾಖಲೆ ಮಾಡಿಸಲು, ಜಮೀನಿನಲ್ಲಿ ಮನೆ ನಿರ್ಮಾಣ ಮಾಡಲು, ಆಸ್ತಿಯನ್ನು ಮಾರಾಟ ಅಥವಾ ಖರೀದಿ ಮಾಡಲು ಮತ್ತು ಸರ್ಕಾರಿ ಸೌಲಭ್ಯ ಪಡೆಯಲು ಇ- ಸ್ವತ್ತು ಬಹಳ ಮುಖ್ಯವಾಗಿರುತ್ತದೆ ಮತ್ತು ನಿಮ್ಮ ಆಸ್ತಿ ಕಾನೂನುಬದ್ಧವಾಗಿದೆ ಎಂಬ ದೃಢತೆಗಾಗಿ ಇ-ಸ್ವತ್ತನ್ನು ಮಾಡಿಸಲೇಬೇಕಾಗುತ್ತದೆ. ಇಲ್ಲದಿದ್ದರೇ ಸರ್ಕಾರದ ಯೋಜನೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ ಆದ್ದರಿಂದ ಕಡ್ಡಾಯವಾಗಿ ಇ-ಸ್ವತ್ತನ್ನು ಮಾಡಿಸಿ ಸರ್ಕಾರದ ಯೋಜನೆಗಳಿಂದ ಲಾಭವನ್ನು ಪಡೆದುಕೊಂಡು ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಬಹುದು.ಗ್ರಾಮೀಣ ಪ್ರದೇಶದ ಜನರು ಯಾರ ಸಹಾಯವಿಲ್ಲದೇ ಉಚಿತವಾಗಿ ತಮ್ಮ ಆಸ್ತಿಯ ವಿವರಗಳನ್ನು ಪಡೆಯಬಹುದು.
ನಿಮ್ಮ ಮೊಬೈಲ್/ಕಂಪ್ಯೂಟರ್ ಬ್ರೌಸರ್ನಲ್ಲಿ ಈ ಲಿಂಕ್ ತೆರೆಯಿರಿ e-Swathu Property.
ಮುಖ್ಯಪುಟದಲ್ಲಿ ಆಸ್ತಿಗಳ ಶೋಧನೆ (Search Property) ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
Search By ವಿಭಾಗದಲ್ಲಿ ನೀವು ಹುಡುಕ ಬಯಸುವ ವಿವರದ ಪ್ರಕಾರ ಆಯ್ಕೆ ಮಾಡಿ, Form 9 (ಮಾಲೀಕತ್ವದ ದಾಖಲೆ) Form 11 (ಬಳಕೆ ವಿವರ) Survey Number
ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯತಿ, ಹಳ್ಳಿ ಆಯ್ಕೆ ಮಾಡಿ.
ಶೋಧನೆ (Search) ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಗ್ರಾಮದಲ್ಲಿನ ಆಸ್ತಿಗಳ ಪಟ್ಟಿ (e- Swathu ID, ಮಾಲೀಕರ ಹೆಸರು ಇತ್ಯಾದಿ) ತೋರಿಸಲಿದೆ.
ಇಲ್ಲಿ ನಿಮ್ಮ ಆಸ್ತಿ ಸಂಬಂಧಿತ ದಾಖಲೆಗಳನ್ನು ಕ್ಲಿಕ್ ಮಾಡಿ ಡೌನ್ಲೋಡ್ ಮಾಡಬಹುದು ಅಥವಾ ಪ್ರಿಂಟ್ ತೆಗೆದುಕೊಳ್ಳಬಹುದು.
ಮೇಲಿನ ವಿಧಾನವನ್ನು ಅನುಸರಿಸಿ ನಿಮ್ಮ ಆಸ್ತಿಯ ವಿವರಗಳನ್ನು ಚೆಕ್ ಮಾಡಿದಾಗ ಆಸ್ತಿಯ ಡಿಜಿಟಲ್ ವಿವರ ಲಭ್ಯವಾಗದೇ ಇದ್ದರೇ ನಿಮ್ಮ ಆಸ್ತಿಯ ಇ-ಸ್ವತ್ತು ಆಗಿರುವುದಿಲ್ಲ ಎಂದರ್ಥ. ಇದನ್ನು ಪಡೆಯಲು ಅಗತ್ಯ ದಾಖಲೆಗಳ ಸಹಿತ ನಿಮ್ಮ ಗ್ರಾಮ ಪಂಚಾಯತಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯನ್ನು ಸಲ್ಲಿಸುವಾಗ ಬೇಕಾಗುವ ದಾಖಲೆಗಳು ಯಾವುವು ಎಂದರೆ ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ, ಆಸ್ತಿಯ ಜೊತೆಗೆ ನಿಂತಿರುವ ಅರ್ಜಿದಾರರ ಚಿತ್ರ,ಆಸ್ತಿ ತೆರಿಗೆ ಪಾವತಿ ರಶೀದಿ, ಇತ್ತೀಚಿನ ವಿದ್ಯುತ್ ಬಿಲ್, ಜಂಟಿ ಮಾಲೀಕರ ಆಧಾರ್ ಕಾರ್ಡ್, ಪಾಸ್ಪೋರ್ಟ್ ಅಳತೆಯ ಫೋಟೋ ವನ್ನು ಲಗತ್ತಿಸಬೇಕು. ನಿಮ್ಮ ಆಸ್ತಿ ಇ-ಸ್ವತ್ತು ದಾಖಲಾತಿಗೆ ಅರ್ಹವಾಗಿದ್ದರೆ ಗ್ರಾಮಪಂಚಾಯತಿ ಅಧಿಕಾರಿಗಳು ಪರಿಶೀಲನೆ ನಡೆಸಿ ನಿಮಗೆ e-Swathu ವೆಬ್ಸೈಟ್ನಲ್ಲಿ ನಿಮ್ಮ ಆಸ್ತಿ ವಿವರಗಳನ್ನು ಪಡೆಯಬಹುದು.
Read More
ಎಸ್ಎಸ್ಎಲ್ಸಿ ಪಾಸಾದವರಿಗೆ ಪ್ರತೀ ತಿಂಗಳು 3500 ರೂ ಸ್ಕಾಲರ್ಶಿಪ್ !
ರೈತರಿಗೆ ಮಿನಿ ಟ್ರ್ಯಾಕ್ಟರ್, ಪಾಲಿಹೌಸ್, ಹನಿ ನೀರಾವರಿ ಸಹಾಯಧನಕ್ಕೆ ಅರ್ಜಿ ಆಹ್ವಾನ!
ರೈತರಿಗೋಸ್ಕರ ಬರೋಬ್ಬರಿ ಶೇ 90ರಷ್ಟು ಸಬ್ಸಿಡಿಯಲ್ಲಿ ಡೀಸೆಲ್ ಪಂಪ್ಸೆಟ್ ವಿತರಣೆ!ಇಂದೇ ಅಪ್ಲೈ ಮಾಡಿ
MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.