ತೀರ್ಥಹಳ್ಳಿ ; ಚಲಿಸುತ್ತಿದ್ದ ಬೈಕ್ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಯುವ ಯಕ್ಷಗಾನ ಕಲಾವಿದ ಸಾವನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಸಂಭವಿಸಿದೆ.
ಬ್ರಹ್ಮಾವರ ತಾಲ್ಲೂಕಿನ ವಡ್ಡರ್ಸೆ ಸಮೀಪದ ಕುದುರೆಮನೆಬೆಟ್ಟು ಗ್ರಾಮದ ಸೂರಾಲು ಯಕ್ಷಗಾನ ಮೇಳದ ಕಲಾವಿದ ರಂಜಿತ್ ಬನ್ನಾಡಿ (20) ಮೃತ ವ್ಯಕ್ತಿ.
ನಿನ್ನೆ ತೀರ್ಥಹಳ್ಳಿಯ ಕೊಪ್ಪ ಸಮೀಪದ ಕವಡೆಕಟ್ಟೆ ಬಳಿ ಸೂರಾಲು ಮೇಳದ ಯಕ್ಷಗಾನ ನಡೆಯಬೇಕಿತ್ತು. ಆದರೆ ಮಳೆಯಿಂದಾಗಿ ರದ್ದಾಗಿದ್ದರಿಂದ ಯಕ್ಷಗಾನ ಕಲಾವಿದರಾದ ರಂಜಿತ್ ಬನ್ನಾಡಿ ಹಾಗೂ ವಿನೋದ್ ರಾಜ್ ಬೈಕಿನಲ್ಲಿ ಹೋಗುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದ ಮೇಲೆ ವಿದ್ಯುತ್ ಕಂಬದ ತಂತಿಯೊಂದು ಬಿದ್ದು ಕಲಾವಿದ ರಂಜಿತ್ ಬನ್ನಾಡಿ ಸಾವನ್ನಪ್ಪಿದರೆ, ವಿನೋದ್ ರಾಜ್ ಎಂಬುವರಿಗೆ ಗಾಯವಾಗಿದೆ.
ಗಾಯಾಳುವನ್ನು ಉಡುಪಿಯ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.