ಶಿವಮೊಗ್ಗ : ಸರ್ಕಾರಿ ಬಸ್‌ಗಳಿಗೆ ಸ್ಟಿಕ್ಕರ್ ಹಚ್ಚಿ ಯುವ ಕಾಂಗ್ರೆಸ್ ಪ್ರತಿಭಟನೆ

Written by Koushik G K

Published on:

ಶಿವಮೊಗ್ಗ: ಮತಗಳ್ಳತನದ ವಿರುದ್ಧ ಜಿಲ್ಲಾ ಯುವ ಕಾಂಗ್ರೆಸ್‌ ಇಂದು ಶಿವಮೊಗ್ಗದಲ್ಲಿ ಭರ್ಜರಿ ಪ್ರತಿಭಟನೆ ನಡೆಸಿತು. ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಬಸ್‌ಗಳು, ಆಟೋ ರಿಕ್ಷಾಗಳು ಹಾಗೂ ಸಾರ್ವಜನಿಕ ಸ್ಥಳಗಳ ಗೋಡೆಗಳ ಮೇಲೆ ‘ಸ್ಟಾಪ್ ಮತಗಳ್ಳತನ’ ಎಂಬ ಶೀರ್ಷಿಕೆಯ ಸ್ಟಿಕ್ಕರ್‌ಗಳನ್ನು ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಶಿವಮೊಗ್ಗ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಗೋಡೆ, ಆಟೋ, ಬಸ್‌ಗಳಿಗೆ ‘ಸ್ಟಾಪ್ ಮತಗಳ್ಳತನ’ ಎಂಬ ಸ್ಟಿಕ್ಕರ್ ಅಂಟಿಸಿ ಪ್ರತಿಭಟಿಸಿದೆ.ಪ್ರಧಾನಿ ಮೋದಿ ವಿರುದ್ಧ ಮತ್ತು ಚುನಾವಣೆ ಆಯೋಗ ವಿರುದ್ಧ
ಘೋಷಣೆ ಕೂಗಲಾಯಿತು. ಚೋರ್ ನರೇಂದ್ರ ಮೋದಿಗೆ ದಿಕ್ಕಾರ,ಈ ವೇಳೆ ಚುನಾವಣಾ ಆಯೋಗದ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಲಾಯಿತು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷಿತ್ ಗೌಡ ಮಾತನಾಡಿ, “ಮತಗಳ್ಳತನವೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಚುನಾವಣೆ ಗೆಲುವಿನ ಮೂಲ. ಇದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಹಿರಂಗಪಡಿಸಿದ್ದಾರೆ. ಮೋದಿ ಅವರು ರಾಜೀನಾಮೆ ನೀಡಿ, ನೈತಿಕತೆ ಮೆರೆದು ಮರು ಚುನಾವಣೆ ಎದುರಿಸಬೇಕು” ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಮುಖಂಡರಾದ ಎಚ್.ಸಿ. ಯೋಗೀಶ್, ವಿಜಯಕುಮಾರ್, ಬಾಲಾಜಿ, ಚೇತನ್ ಗೌಡ ಹಾಗೂ ಅನೇಕ ಕಾರ್ಯಕರ್ತರು ಭಾಗವಹಿಸಿ ಜನಜಾಗೃತಿ ಮೂಡಿಸಿದರು.

Leave a Comment