ಇಲ್ಲಿ ಅಕ್ರಮ ಮರಳು ಸಾಗಾಟಕ್ಕೆ ಅರಣ್ಯ ಇಲಾಖೆಯೇ ಸಾಥ್ ! ಬೆಂಗಾವಲಾಗಿ ರಕ್ಷಣೆ ನೀಡಿರುವ ದೃಶ್ಯ ವೈರಲ್ !!

0
5927

ಮೂಡಿಗೆರೆ: ತಾಲ್ಲೂಕಿನ ಅಂಗಡಿ ಗ್ರಾಮ ಹಾಗೂ ಅಕ್ಕಪಕ್ಕದಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸಿ ಅರಣ್ಯ ಇಲಾಖೆಯ ಅಧಿಕಾರಿಗಳ ಸಾಮೀಲಿನೊಂದಿಗೆ ಸಾಗಾಟಕ್ಕೆ ಮಾಡುತ್ತಿರುವುದನ್ನು ಅಲ್ಲಿನ ಗ್ರಾಮಸ್ಥರ ತೀವ್ರ ಟೀಕೆಗೆ ಗುರಿಯಾಗಿದೆ. ಮರಳು ಸಾಗಾಟ ವೇಳೆ ಸಿಕ್ಕ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವೇಳೆ ಟ್ರ್ಯಾಕ್ಟರ್’ಗೆ ಅರಣ್ಯ ಇಲಾಖೆ ಅಧಿಕಾರಿಗಳೇ ತಮ್ಮ ವಾಹನದ ಮೂಲಕ ಬೆಂಗಾವಲಾಗಿ ರಕ್ಷಣೆ ನೀಡಿರುವ ದೃಶ್ಯ ವೈರಲ್ ಆಗಿದೆ.

ಮೂಡಿಗೆರೆ ಉಪವಲಯ ಅರಣ್ಯಾಧಿಕಾರಿ ರಮೇಶ್ ನೇತೃತ್ವದಲ್ಲಿ ಮರಳು ತೆಗೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಸ್ಥಳಿಯರು ವಿಡಿಯೋ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಬಗ್ಗೆ ಗಮನ ಹರಿಸಬೇಕದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಜಾಣ ಕುರುಡು ಪ್ರದರ್ಶಿಸುತ್ತಿದ್ದು, ಈವರೆಗೆ ಒಂದು ಹಿಡಿ ಮರಳನ್ನೂ ಹಿಡಿಯದ ಈ ಅಧಿಕಾರಿಗೆ ಕಳೆದ ಬಾರಿ ಸೇವಾ ಪ್ರಶಸ್ತಿಯನ್ನು ನೀಡಿ ಜಿಲ್ಲಾಡಳಿತ ಗೌರವಿಸಿದೆ ಎಂದು ವ್ಯಂಗ್ಯವಾಡಿದ್ದಾರೆ.

ಈ ಅಧಿಕಾರಿಗಳ ಬಗ್ಗೆ ಜಿಲ್ಲಾಡಳಿತ ಕಠಿಣ ಕ್ರಮವನ್ನು ವಿಧಿಸಬೇಕು ಎಂದು ಜನಸಾಮಾನ್ಯರು ಆಗ್ರಹಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here