ಅಂಬಿಗರ ಚೌಡಯ್ಯನವರು ಎಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವಚನಕಾರರು ; ತಹಶೀಲ್ದಾರ್ ರಶ್ಮಿ ಹೆಚ್.ಜೆ.

0 319

ಹೊಸನಗರ: 12ನೇ ಶತಮಾನದಲ್ಲಿ ಜೀವಿಸಿದ ಶಿವಶರಣ ಹಾಗೂ ವಚನಕಾರರು ಉಳಿದ್ದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇರುವವರು. ವೃತ್ತಿಯಲ್ಲಿ ಅಂಬಿಗ ಪ್ರವೃತ್ತಿಯಲ್ಲಿ ಅನುಭಾವಿ ನೇರ ನಿರ್ಭಿತ ನುಡಿಗಳಿಂದ ವಚನಗಳನ್ನು ಬರೆದಿರುವುದು ಗೋಚರಿಸುತ್ತದೆ ಎಂದು ಹೊಸನಗರ ತಹಶೀಲ್ದಾರ್ ಹೆಚ್.ಜೆ ರಶ್ಮಿ ಹೇಳಿದರು.

ಇಲ್ಲಿನ ತಾಲ್ಲೂಕು ಕಛೇರಿಯ ಆವರಣದಲ್ಲಿ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಬಸವಣ್ಣನವರ ಅನುಭವ ಮಂಟಪದಲ್ಲಿ ಸಮಾನ ಭೂಮಿಕೆಯ ಸಮ್ಮೇಳನದಲ್ಲಿ ಸೇರಿಕೊಂಡವ ತನ್ನ ಕಾಯಕ ಅಥವಾ ವ್ಯಕ್ತಿನಾಮ ಅಂಬಿಗರ ಚೌಡಯ್ಯ ಎಂಬುದೇ ಈತನ ವಚನಗಳ ಅಂಕಿತವಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ನಾಡ ಹಬ್ಬಗಳ ಸಮಿತಿಯ ಸದಸ್ಯರಾದ ಎನ್. ಶ್ರೀಧರ ಉಡುಪ, ತಾಲ್ಲೂಕು ಕಛೇರಿಯ ಪ್ರಥಮ ದರ್ಜೆ ಗುಮಾಸ್ಥರಾದ ಚಿರಾಗ್, ರೆವಿನ್ಯೋ ಇನ್ಸ್‌ಪೆಕ್ಟರ್ ರೇಣುಕಯ್ಯ, ಗ್ರಾಮ ಲೆಕ್ಕಾಧಿಕಾರಿ ಕೌಶಿಕ್, ನವೀನ್, ಅಶೋಕ, ಗಣೇಶ್, ಪೈಗಂಬರ್, ಶಿವಪ್ಪ, ನಾಗರಾಜ್ ಕಿಣಿ, ತಾಲ್ಲೂಕು ಗಂಗಾಮತಸ್ಥ ಸಮಾಜದ ಅಧ್ಯಕ್ಷರಾದ ಉಮೇಶ್ ಕೆ.ವೈ, ಗಂಗಾಧರ, ದಿನೇಶ ಜಿ, ಪ್ರಧಾನ ಕಾರ್ಯದರ್ಶಿ ಲೋಹಿತ್, ರುಕ್ರೇಶ್ ಪಾಂಡುರಂಗ, ನಾಗೇಶ ಚಂದಳ್ಳಿ, ಮಂಜುನಾಥ್ ಬ್ಯಾಣದ್, ನೀಲಾವತಿ, ರಾಘವೇಂದ್ರ, ಶ್ರೀಧರ, ಉಮೇಶ್ ಹೂವಿನಕೋಣೆ, ಧರ್ಮರಾಜ್ ಶೇಡಿಗ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!