ಬಿರುಬೇಸಿಗೆಯಲ್ಲಿಯೂ ತುಂಬಿ ಹರಿಯುವ ಕಳಸೆ ಗೌರಿಹೊಂಡ !

0 488

ರಿಪ್ಪನ್‌ಪೇಟೆ: ಕಳೆದ 10 ತಿಂಗಳಿಂದ ಮಳೆಯಿಲ್ಲದೆ ಹಳ್ಳ-ಕೊಳ್ಳಗಳು ಬತ್ತಿ ಅಂತರ್ಜಲ ಸಹ ಇಲ್ಲದೆ ತೆರೆದ, ಕೊಳವೆಗಳಲ್ಲಿ ನೀರಿಲ್ಲದೇ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದ್ದರೂ ಕೂಡಾ ಹೊಸನಗರ ತಾಲ್ಲೂಕಿನ ಬೆಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಳಸೆ ಗ್ರಾಮದ ಗೌರಿಹೊಂಡ ಮಾತ್ರ ವರ್ಷದ 365 ದಿನವೂ ನಿರಂತರವಾಗಿ ಹರಿಯುತ್ತಿರುವುದು ವಿಶೇಷವಾಗಿದೆ.

ಮಳೆ, ಚಳಿ, ಬೇಸಿಗೆ ಬರಲಿ ಇಲ್ಲಿನ ಸಹ್ಯಾದ್ರಿಯ ಪರ್ವತ ಶ್ರೇಣಿಯ ಕಳಸೆ ಗ್ರಾಮದ ಗೌರಿ ಹೊಂಡದಲ್ಲಿನ ತಿಳಿ ಸಿಹಿ ನೀರಿಗೆ ಮಾತ್ರ ಬರವಿಲ್ಲ.

ಶ್ರಾವಣ ಮಾಸದಲ್ಲಿ ಗೌರಿಹಬ್ಬದೊಂದು ಮುತ್ತೈದೆಯರು ಈ ಗೌರಿಹೊಂಡದಲ್ಲಿ ಗೌರಿ ಪೂಜೆಯೊಂದಿಗೆ ಬಾಗಿನ ಆರ್ಪಿಸುವುದು ಇಲ್ಲಿನ ವಿಶೇಷ. ಅದರಲ್ಲೂ ಸಂತಾನ ಭಾಗ್ಯವಿಲ್ಲದವರು ಮತ್ತು ವಿವಾಹವಾಗದವರು ಈ ಗೌರಿ ಹೊಂಡದ ಗೌರಮ್ಮಳಿಗೆ ಹರಕೆ ಮಾಡಿಕೊಂಡರೆ ಬರುವ ವರ್ಷದೊಳಗೆ ಇಷ್ಟಾರ್ಥವನ್ನು ಈಡೇರಿಸುವಂತಹ ಕರುಣಾಳು ತಾಯಿ ಗೌರಮ್ಮ‌. ತಾಯಿಗೆ ಬಾಗಿನವೇ ಶ್ರೇಷ್ಟವಾಗಿದ್ದು ಇಷ್ಟಾರ್ಥ ನೆರವೇರಿಸುವಂತೆ ಮೂರು, ಐದು, ಏಳು, ಒಂಬತ್ತು, ಹನ್ನೊಂದು, ಹದಿಮೂರು ಹೀಗೆ ತಮ್ಮ ಆರ್ಥಿಕ ಶಕ್ತಿಗನುಗುಣವಾಗಿ ಹರಕೆ ಮಾಡಿಕೊಳ್ಳುವ ಭಕ್ತರ ಇಷ್ಟಾರ್ಥವನ್ನು ಈಡೇರಿಸುವ ಕಳಸೆ ಗೌರಿಹೊಂಡದ ಗೌರಮ್ಮ ಪವಾಡವೇ ಸಾಕ್ಷಿಯಾಗಿದೆ.

ಜಾತಿ ಭೇದ ಭಾವನೆಯನ್ನು ತೋರದೆ ಊರಿನವರು ಹೊರ ಊರಿನವರು ಮದುವೆ ಮಾಡಿಕೊಂಡ ನಮ್ಮೂರಿನ ಮಹಿಳೆಯರು ಗೌರಿ ಹಬ್ಬದಲ್ಲಿ ಅಮ್ಮನವರಿಗೆ ಉಡಿ ತುಂಬಿ ಬಾಗಿನ ಸಮರ್ಪಿಸಲು ತವರು ಮನೆಗೆ ಬರುವುದೇ ಇಲ್ಲಿನ ವಿಶೇಷವೆಂದು ಹಲವರು ಮಾಧ್ಯಮದವರ ಮುಂದೆ ಹೇಳಿಕೊಂಡಿದ್ದು ಹೀಗೆ.

ಒಟ್ಟಾರೆಯಾಗಿ ಈ ಗೌರಿ ಹೊಂಡದ ಬಳಿಯ ಜಮೀನಿಗೂ ನೀರು ಮಳೆಗಾಲದಲ್ಲಿ ಮತ್ತು ಬೇಸಿಗೆಯಲ್ಲಿ ಬೆಳೆಗಳಿಗೆ ನೀರು ನಿರಂತರವಾಗಿ ಹರಿದು ಹೋಗುತ್ತಿದ್ದು ಬೆಳೆಗಳು ಸಹ ಪ್ರಕೃತಿ ಮಾತೆಯ ಇಂತಹ ಶುದ್ದ ನೀರಿನಿಂದ ಸಂವೃದ್ಧವಾಗಿ ಬೆಳೆಯಲು ಸಹಕಾರಿಯಾಗಿದೆ.

Leave A Reply

Your email address will not be published.

error: Content is protected !!