ಗ್ರಾಮ ದೇವರುಗಳಿಗೆ ಕುರಿ, ಕೋಳಿ, ಹಂದಿಗಳ ಹರಕೆ ಬಲಿ ; ಮಲೆನಾಡಿನಲ್ಲಿ ದೀಪಾವಳಿ ನೋನಿ ಜೋರು

0 2,634

ರಿಪ್ಪನ್‌ಪೇಟೆ: ಗ್ರಾಮೀಣ ಪ್ರದೇಶದಲ್ಲಿ ದೀಪಾವಳಿ ಹಬ್ಬ ಬಂತೆಂದರೇ ಸಾಕು ಕೋಳಿ, ಕುರಿ, ಹಂದಿಗಳನ್ನು ಗ್ರಾಮ ದೇವರಿಗೆ ಬಲಿ ನೀಡಿ ಭಕ್ತಿಯ ಸಮರ್ಪಣೆ ಸೇವೆ ಸಲ್ಲಿಸುವುದು ಮಲೆನಾಡಿನ ಪದ್ದತಿ.

ಇಂದು ಜಂಬಳ್ಳಿ, ಕುಕ್ಕಳಲೇ, ಮಾವಿನಸರ, ತಾರಿಗ, ನಂದಿಗ, ಈಚಲುಕೊಪ್ಪ ಗ್ರಾಮದಲ್ಲಿ ಗ್ರಾಮದ ಭೂತಪ್ಪ, ದೋಣ್ಣೆ ಭೂತಪ್ಪ ಹಾಗೂ ವಡ್ಡೆರಭೂತಪ್ಪ ದೇವರು ಸೇರಿದಂತೆ ಸುತ್ತಮುತ್ತಲಿನ ಪರಿವಾರ ಚೌಡಿ ಭೂತಪ್ಪ, ಯಕ್ಷಿ, ರಣ ದೇವರುಗಳಿಗೆ ದೀಪಾವಳಿ ಹಬ್ಬದಲ್ಲಿ ವಿಶೇಷ ಪೂಜೆ ನೆರವೇರಿಸಿ ಗ್ರಾಮದ ದೇವರಿಗೆ ಹಣ್ಣು-ಕಾಯಿ ಅರ್ಪಿಸಿದರೆ ದೊಣ್ಣೆ ಭೂತಪ್ಪಗೆ ಹಣ್ಣು-ಕಾಯಿ, ಕುರಿ-ಕೋಳಿಗಳ ಬಲಿ ನೀಡಿದರೆ ವಡ್ಡರಭೂತಪ್ಪನಿಗೆ ಹಣ್ಣು-ಕಾಯಿಯೊಂದಿಗೆ 18 ಹಂದಿಗಳ ಬಲಿ ನೀಡಿ ಭಕ್ತಿ ಸಮರ್ಪಿಸಿದರು.

ಕೆಲವರು ತಮ್ಮ ಮನೆಯಲ್ಲಿ ಜಮೀನಿನಲ್ಲಿ ಹೀಗೆ ಯಾರಾದರು ತೊಂದರೆ ಮಾಡಿದರೆ ವಡ್ಡರ್ ಭೂತಪ್ಪನಿಗೆ ಇಲ್ಲವೇ ದೊಣ್ಣೆ ಭೂತಪ್ಪಗೆ ಹರಕೆ ಪ್ರಾರ್ಥನೆ ಮಾಡಿಕೊಂಡರೆ ಸಾಕು ಕೇವಲ ಆರೇಳು ತಿಂಗಳಲ್ಲಿ ಪತ್ತೆಯಾಗುವುದು ಎಂಬ ನಂಬಿಕೆಯೊಂದಿಗೆ ಹರಕೆ ಮಾಡಿಕೊಂಡು ಈಡೇರಿಸಿದ ಪರಿಣಾಮದಿಂದಾಗಿ ದೀಪಾವಳಿ ಅಮಾವಾಸ್ಯೆಗೆ ಮುನ್ನವೇ ಗ್ರಾಮ ದೇವರುಗಳಿಗೆ ಪೂಜೆ ಸಲ್ಲಿಸುವುದು ಇಲ್ಲಿನ ಮಲೆನಾಡಿ ರೈತಾಪಿ ವರ್ಗದವರ ವಿಶೇಷ ಹಬ್ಬವಾಗಿದೆ.

ಜಾತಿ, ಭೇದ-ಭಾವನೆಗಳಿಲ್ಲದೇ ಊರಿನವರಲ್ಲ ಸೇರಿಕೊಂಡು ಗ್ರಾಮದೇವರಿಗೆ ಲಿಂಗಾಯತ ಜನಾಂಗ ಮತ್ತು ಪರಿಶಿಷ್ಟ ವರ್ಗದವರು ಮತ್ತು ಮಡಿವಾಳ ಜನಾಂಗದವರುಗಳೇ ಪೂಜಿಸುವ ಸಂಪ್ರದಾಯದ ಪರಂಪರಾಗತವಾಗಿ ಈ ಪದ್ದತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಗ್ರಾಮಸ್ಥರು ವಿವರಿಸಿದರು.

Leave A Reply

Your email address will not be published.

error: Content is protected !!