ಕಾನೂನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಕೆ. ರವಿಕುಮಾರ್

0
323

ರಿಪ್ಪನ್‌ಪೇಟೆ: ದೈನಂದಿನ ಬದುಕಿನಲ್ಲಿ ಕಟ್ಟುಪಾಡುಗಳನ್ನು ಅಳವಡಿಸಿಕೊಂಡು ಕಾನೂನಿನ ವ್ಯಾಪ್ತಿಯಲ್ಲಿ ಉತ್ತಮ ಭವಿಷ್ಯ ಹೊಂದುವುದು ಅತ್ಯಗತ್ಯ. 36 ಸಾವಿರ ಕಾನೂನುಗಳಿದ್ದು ಅದನ್ನು ಸ್ವಲ್ಪವಾದರು ಅರ್ಥಮಾಡಿಕೊಂಡು ಬದುಕುವವನೆ ನಿಜವಾದ ಮನುಷ್ಯ ಇಂದಿನ ಮೊಬೈಲ್ ಹಾವಳಿಯಿಂದಾಗಿ ಸಾಕಷ್ಟು ಕಾನೂನು ಉಲ್ಲಂಘನೆಯಾಗುತ್ತಿದ್ದು ಆದಷ್ಟು ಮಿತವಾಗಿ ಬಳಸುವ ಮೂಲಕ ಕಾನೂನಿನ ಚೌಕಟ್ಟಿನಲ್ಲಿ ಬದುಕುವಂತಾಗಬೇಕು ಎಂದು ಹೊಸನಗರ ತಾಲ್ಲೂಕು ಪ್ರಧಾನ ವ್ಯವಹಾರ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳಾದ ಕೆ.ರವಿಕುಮಾರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿ ಹೊಸನಗರ ನ್ಯಾಯಾಲಯದಿಂದ ಉಚಿತ ಕಾನೂನು ಅರಿವು ಸಪ್ತಾಹ ಕಾರ್ಯಗಾರವನ್ನು ಉದ್ಘಾಟಿಸಿ ಮಾತಾನಾಡಿ, ಪುಸ್ತಕವನ್ನು ತಲೆ ಬಗ್ಗಿಸಿ, ಓದಿದಲ್ಲಿ ಜೀವನದಲ್ಲಿ ತಲೆ ಎತ್ತಿ ನಿಲ್ಲುವಂತೆ ಮಾಡುತ್ತದೆ. ಮೊಬೈಲ್ ಬಳಕೆಯಿಂದ ಸದಾ ತಲೆ ತಗ್ಗಿಸುವಂತೆ ಮಾಡುತ್ತದೆ ಆದ್ದರಿಂದ ವಿದ್ಯಾರ್ಥಿಗಳು ಆದಷ್ಟು ಮೊಬೈಲ್ ಬಳಕೆಯಿಂದ ದೂರವಿರುವಂತೆ ಸಲಹೆ ನೀಡಿದ ಅವರು, ದ್ವಿಚಕ್ರ ವಾಹನವನ್ನು ಒಡಿಸುವ ಮುನ್ನ ಕಡ್ಡಾಯವಾಗಿ ಪರವಾನಿ ಹೊಂದಿರಬೇಕು ರಸ್ತೆಯಿರುವುದು ವಾಹನ ಓಡಾಟಕ್ಕೆ ಪುಟ್‌ಬಾತ್ ಇರುವುದು ಜನರ ಓಡಾಟಕ್ಕೆ ಸುರಕ್ಷತೆ ದೃಷ್ಟಿಯಿಂದ ವಿದ್ಯಾರ್ಥಿಗಳು ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದ್ದು ಜನರು ಕಾನೂನನ್ನು ಸದಾ ಗೌರವವಿಸುವಂತಾಗಬೇಕೆಂದರು.

ಸಂಪನ್ಮೂಲ ವ್ಯಕ್ತಿಯಾಗಿ ಸಾಗರದ ಹಿರಿಯ ವಕೀಲರಾದ ರವೀಶ್ ಮಾತಾನಾಡಿ ಕಾನೂನಿನ ಸರಪಳಿಗೆ ಸಿಲುಕದೆ ಜೀವನವನ್ನು ವ್ಯರ್ಥಗೊಳಿಸಿಕೊಳ್ಳದೆ ಸಾರ್ಥಕ ಬದುಕಿಗಾಗಿ ಸದಾ ಕಾನೂನು ಪರಿಪಾಲನೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದ ಅವರು ಬಾಲ್ಯವಿವಾಹ ಮತ್ತು ಇನ್ನಿತರ ಅಕ್ರಮ ವ್ಯವಹಾರಗಳಿಗೆ ಕಾನೂನಿನ ಮೂಲಕ ಕಡಿವಾಣ ಹಾಕುವುದು ಇಂದಿನ ವ್ಯವಸ್ಥೆಯಲ್ಲಿ ಕಠಿಣಗೊಳಿಸಲಾಗಿದೆ ಎಂದು ವಿದ್ಯಾರ್ಥಿಗಳಿಗೆ ಸವಿಸ್ಥಾರವಾಗಿ ಮಾಹಿತಿ ನೀಡಿದರು.

ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಪಿ.ಯು.ಕಾಲೇಜ್ ಪ್ರಾಚಾರ್ಯ ಮಂಜುನಾಥ್, ಎಸ್‌ಸಿ,ಎಸ್‌ಟಿ ಹಾಸ್ಟೆಲಿನ ಮೇಲ್ವಿಚಾರಕ ರಾಘವೇಂದ್ರ, ಪಿ.ಡಿ.ಒ ಜಿ ಚಂದ್ರಶೇಖರ್, ಉಪತಹಶೀಲ್ದಾರ್ ಹುಚ್ಚರಾಯಪ್ಪ, ರೆವಿನ್ಯೂ ಇನ್ಸ್‌ಪೆಕ್ಟರ್ ರಾಜಪ್ಪ, ಉಪಅರಣ್ಯ ಅಧಿಕಾರಿ ಮಹೇಶ್ ಇನ್ನಿತರ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಪಿ.ಡಿ.ಒ.ಜಿ ಚಂದ್ರಶೇಖರ್ ಸ್ವಾಗತಿಸಿದರು. ಉಪನ್ಯಾಸಕಿ ಅಂಬಿಕಾ ನಿರೂಪಿಸಿದರು. ಜನಾರ್ದನ್ ನಾಯಕ್ ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here