ಮಕ್ಕಳನ್ನು ಅಪೌಷ್ಟಿಕತೆಯಿಂದ ದೂರವಿಡಲು ಜಂಕ್ ಫುಡ್‌ಗಳನ್ನು ತ್ಯಜಿಸಿ ಹಸಿರು ತರಕಾರಿಗಳನ್ನು ಬಳಸಲು ಕರೆ

0
798

ಹೊಸನಗರ : ಮಕ್ಕಳನ್ನು ಅಪೌಷ್ಟಿಕತೆಯಿಂದ ದೂರವಿರಲು ಜಂಕ್ ಫುಡ್ ಹಾಗೂ ಫ್ಯಾಕ್ಟರಿಗಳಲ್ಲಿ ದೊರಕುವ ಪದಾರ್ಥಗಳನ್ನು ದೂರವಿಟ್ಟು ಹಸಿರು ಸೊಪ್ಪು ತರಕಾರಿ ಪದಾರ್ಥಗಳನ್ನು ಹೆಚ್ಚಾಗಿ ಬಳಸುವ ಮೂಲಕ ಪೌಷ್ಟಿಕತೆ ಹೊಂದಬೇಕೆಂದು ವಿಜ್ಞಾನ ಶಿಕ್ಷಕ ಮಹಮದ್ ತಾಹಿರ್ ಕರೆ ನೀಡಿದರು.

ಸರ್ಕಾರಿ ಉರ್ದು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಪೋಷಣ್ ಅಭಿಯಾನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಕೊಬ್ಬಿನಾಂಶ ಕಡಿಮೆ ಇರುವ ಪದಾರ್ಥಗಳನ್ನು ಬಳಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಕರೆ ನೀಡಿ, ಮಕ್ಕಳ ಆರೋಗ್ಯ ರಕ್ಷಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಹಸ್ರಾರು ಕೋಟಿ ರೂ‌‌. ವೆಚ್ಚದಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನ ಕಾರ್ಯಕ್ರಮದ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳ ಅನುಷ್ಠಾನಗೊಳಿಸುವಲ್ಲಿ ಎಲ್ಲರೂ ಕಟಿಬದ್ಧರಾಗಬೇಕು ಎಂದರು.

ಒಮ್ಮೆ ಕಾಯಿಸಿದ ಎಣ್ಣೆಯನ್ನು ಪುನಃ ಕಾಯಿಸಿ ಸೇವಿಸಿದರೆ ಅನೇಕ ಕಾಯಿಲೆಗಳು ಬರುತ್ತದೆ ಹೆಚ್ಚಿನ ಪ್ರಮಾಣದಲ್ಲಿ ಹಾಲು ಹಣ್ಣು ತರಕಾರಿಗಳನ್ನು ಸೇವಿಸುವುದರಿಂದ ಪೌಷ್ಟಿಕಾಂಶ ದೇಹದಲ್ಲಿ ಉತ್ಪತಿಯಾಗಿ ಆರೋಗ್ಯವಂತರಾಗಿ ಜೀವನ ಸಾಗಿಸಬಹುದು ಹಾಗೂ ಹುಟ್ಟುವ ಮಕ್ಕಳು ಆರೋಗ್ಯವಂತರಾಗಿರುತ್ತಾರೆ ದೇಶದಲ್ಲಿ ಆರೋಗ್ಯವಂತ ಸಮಾಜ ನಿಮಾಣವನ್ನು ರೂಪಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು ಎಲ್ಲರೂ ಪೋಷ್ಟಿಕಾಂಶವಿರುವ ಪದಾರ್ಥವನ್ನು ಸೇವಿಸಿ ಬೀದಿಯಲ್ಲಿ ಸಿಗುವ ತಿಂಡಿಯನ್ನು ತಿರಸ್ಕರಿಸಿ ಎಂದರು.

ಉರ್ದು ಶಾಲೆಗೆ ಹೆಚ್.ಆರ್ ಅಬ್ದುಲ್ ಮಜೀದ್‌ರವರು ಸುಮಾರು 18ಸಾವಿರ ವೆಚ್ಚದಲ್ಲಿ ಜಾರು ಬಂಡಿಯನ್ನು ನಿರ್ಮಿಸಿದ್ದು ಅದರ ಉದ್ಘಾಟನೆಯನ್ನು ಹೆಚ್.ಆರ್ ಅಬ್ದುಲ್ ರಜಾಕ್‌ರವರು ಹಾಗೂ ಮಲ್ಪೆಯ ಅಬ್ದುಲ್ ಅಝೀಮ್‌ರವರು ಸುಮಾರು 12ಸಾವಿರ ರೂ. ವೆಚ್ಚದಲ್ಲಿ ಜಾರುಬಂಡಿ ಹಾಗೂ ಜೋಕಾಲಿಗಳನ್ನು ನಿರ್ಮಿಸಿಕೊಡಲಾಗಿದ್ದು ಉದ್ಘಾಟನೆಯನ್ನು ಅಬ್ದುಲ್ ಘನಿಸಾಬ್‌ರವರು ನೆರವೇರಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ ನಿಸಾರ್ ಅಧ್ಯಕ್ಷತೆ ವಹಿಸಿದ ಈ ಕಾರ್ಯಕ್ರಮದಲ್ಲಿ ಸಿ.ಆರ್.ಪಿ ಮಂಜುನಾಥ್, ಹರೀಶ್ ಉಪಾಧ್ಯಾಯ ಮಸೀದಿಯ ಧರ್ಮಗುರುಗಳು ಅಬ್ದುಲ್ ಗಫೂರ್ ಸಾಬ್ ಎಚ್.ಆರ್ ಅಬ್ದುಲ್ ರಜಾಕ್, ಶಾಬುದ್ದಿನ್ ಅಬ್ದುಲ್ ಘನಿ, ರೆಹಮಾನ್ ಸಾಬ್, ಅಸ್ಮಾ ಬಾನು, ಅನ್ವರ್ ಬಾಷಾ ಮೊದಲಾದವರು ಪಾಲ್ಗೊಂಡಿದ್ದರು.

ಸೈಯದ್ ಫಯಾರ್ ಪ್ರಾರ್ಥನೆ ನಂತರ ಪಟ್ಟಣ ಪಂಚಾಯತಿ ಸದಸ್ಯರಾದ ಶಾಹಿನಾ ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಕಿ ಗೀತಾ ಸುರೇಶ್ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಜಾವೇದ್ ಪಾಷಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸಾಜಿದಾ ಬೇಗಂ ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here