ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆಗೆ ಕೇಸರಿ ಧ್ವಜ, ಬಂಟಿಂಗ್ಸ್ ಹಾಕಲು ಪೊಲೀಸ್ ಇಲಾಖೆ ಯಾವುದೇ ನಿರ್ಬಂಧ ವಿಧಿಸಿಲ್ಲ ; ಎಸ್‌ಪಿ ಸ್ಪಷ್ಟನೆ

0 101

ಶಿವಮೊಗ್ಗ: ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆಗೆ ಕೇಸರಿ ಧ್ವಜ, ಬಂಟಿಂಗ್ಸ್ ಹಾಕಲು ಪೊಲೀಸ್ ಇಲಾಖೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‌ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಗಣಪತಿ ಮೂರ್ತಿಯನ್ನು ದೇವಸ್ಥಾನಗಳಲ್ಲಿ ಮಾತ್ರ ಪ್ರತಿಷ್ಠಾಪಿಸಬೇಕು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಬಾರದು ಎಂದು ಪೊಲೀಸ್ ಇಲಾಖೆಯಿಂದ ನಿರ್ಬಂಧಗಳಿವೆ ಎಂಬ ವದಂತಿ ಹರಡಲಾಗುತ್ತಿದೆ. ಆದರೆ ಅದು ತಪ್ಪು. ಪ್ರತಿಷ್ಠಾಪನೆಯ ಸ್ಥಳಗಳ ಬಗ್ಗೆ ಪೊಲೀಸ್ ಇಲಾಖೆಯಿಂದ ಯಾವುದೇ ನಿರ್ಬಂಧಗಳನ್ನು ವಿಧಿಸಲಾಗಿಲ್ಲ. ಕಳೆದ ವರ್ಷದವರೆಗೆ ಅನುಸರಿಸಿದ್ದನ್ನು ಈ ವರ್ಷವೂ ಮಾಡಲಾಗುತ್ತದೆ. ಕಳೆದ ವರ್ಷ ಎಲ್ಲೆಲ್ಲಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತೋ ಅದನ್ನು ಮುಂದುವರಿಸಲು ಸಂಘಟಕರು ಬಯಸಿದಲ್ಲಿ ಮುಂದುವರಿಸಲಾಗುವುದು ಪೊಲೀಸ್ ಇಲಾಖೆಯಿಂದ ಯಾವುದೇ ನಿರ್ಬಂಧವಿಲ್ಲ ಎಂದರು.

ಮಂಗಳ ವಾದ್ಯ ಬಳಸಲು ಅಡ್ಡಿ ಇಲ್ಲ. ಪೊಲೀಸ್ ಇಲಾಖೆಯಿಂದ ಅಂತಹ ಯಾವುದೇ ನಿರ್ಬಂಧಗಳನ್ನು ವಿಧಿಸಲಾಗಿಲ್ಲ. ಅಲ್ಲದೆ ಎಲ್ಲಾ ಪ್ರಮುಖ ನಾಯಕರು ಮತ್ತು ಸಮಿತಿಯ ಮುಖಂಡರು, ಹಿಂದೂ ಮುಖಂಡರು ಮತ್ತು ಮುಸ್ಲಿಂ ಮುಖಂಡರನ್ನು ಶಾಂತಿ ಸಮಿತಿ ಸಭೆಗಳಿಗೆ ಆಹ್ವಾನಿಸಲಾಗಿದೆ ಎಂದಿದ್ದಾರೆ.

ಯಾವುದೇ ಸುಳ್ಳು ಮಾಹಿತಿಯನ್ನು ಹರಡಬಾರದು.. ಯಾವುದೇ ಸ್ಪಷ್ಟೀಕರಣಗಳನ್ನು ಮಾಡಬೇಕಾದರೆ, ನ್ಯಾಯವ್ಯಾಪ್ತಿಯ ಠಾಣೆಗಳು, ಇನ್ಸ್ಪೆಕ್ಟರ್‌ಗಳು ಅಥವಾ ಡಿವೈಎಸ್ಪಿ ಅಥವಾ ತಮ್ಮನ್ನು ವೈಯಕ್ತಿಕವಾಗಿ ಸಂಪರ್ಕಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!