ಹೊಸನಗರದಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಳೆ! ಭೋರ್ಗರೆಯುತ್ತಿದೆ ಜೋಗ್ ಜಲಪಾತ

0
2516

ಹೊಸನಗರ : ಮಲೆನಾಡಿನ ತವರೂರಾದ ಹೊಸನಗರದಲ್ಲಿ ಇಂದು ಸಹ ಧಾರಾಕಾರ ಮಳೆ ಮುಂದುವರೆದಿದ್ದು ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲೇ ಅತ್ಯಧಿಕ 178.6 ಮಿ.ಮೀ. ಮಳೆ ದಾಖಲಾಗಿದೆ. ಇದರಿಂದ ಶರಾವತಿ ನದಿ ತುಂಬಿ ಹರಿಯುತ್ತಿರುವುದರಿಂದ ಜಗದ್ವಿಖ್ಯಾತ ಜೋಗಜಲಪಾತ ಭೋರ್ಗರೆಯುತ್ತಾ ತನ್ನ ವೈಭವ ಹೊರಸೂಸುತ್ತಿದೆ.

ಉಳಿದಂತೆ ಮಾಸ್ತಿಕಟ್ಟೆಯಲ್ಲಿ 136, ಹುಲಿಕಲ್ಲಿನಲ್ಲಿ 124, ಸಾವೆಹಕ್ಲು ಹಾಗೂ ಯಡೂರಿನಲ್ಲಿ 120, ಮಾಣಿಯಲ್ಲಿ 112 ಮತ್ತು ಲಿಂಗನಮಕ್ಕಿಯಲ್ಲಿ 82.8 ಮಿಲಿ ಮೀಟರ್ ಮಳೆ ದಾಖಲಾಗಿದೆ.

1819 ಅಡಿ ಗರಿಷ್ಠಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಇಂದು ಬೆಳಿಗ್ಗೆ 8:00 ಗಂಟೆಗೆ 1815.25 ಅಡಿ ತಲುಪಿದ್ದು ಕಳೆದ ವರ್ಷ ಇದೇ ಅವಧಿಗೆ 1808.90 ದಾಖಲಾಗಿತ್ತು.

ತಾಲೂಕಿನ ಉಳಿದ ಜಲಾಶಯಗಳ ಇಂದಿನ ನೀರಿನ ಮಟ್ಟ:

ಮಾಣಿ ಡ್ಯಾಂ 587.38 ಮೀ.

ಪಿಕಪ್ ಡ್ಯಾಂ 562.66 ಮೀ.

ಚಕ್ರಾ ಡ್ಯಾಂ 569.72 ಮೀ.

ಸಾವೆಹಕ್ಲು ಡ್ಯಾಂ 577.54 ಮೀ.

ಜಾಹಿರಾತು

LEAVE A REPLY

Please enter your comment!
Please enter your name here