ಹೊಸನಗರ ತಾಲೂಕಿನ ಹಲವೆಡೆ ಗುಡುಗು ಸಹಿತ ಭಾರೀ ಮಳೆ ಜನಜೀವನ ಅಸ್ತವ್ಯಸ್ತ !

0
1664

ಹೊಸನಗರ: ಮಲೆನಾಡಿನ ತವರೂರು ಲಿಂಗನಮಕ್ಕಿ ಜಲಾಶಯಕ್ಕೆ ನೀರುಣಿಸುವ ಪ್ರಧಾನ ಜಲಾನಯನ ಪ್ರದೇಶವಾದ ಹೊಸನಗರ ತಾಲೂಕಿನಾದ್ಯಂತ ಹಸ್ತ ಮಳೆ ಜನರ ನಿದ್ದೆಗೆಡಿಸಿದೆ.

ಅನ್ನದಾತ ಬೆಳೆದ ಅಡಿಕೆ ಹಾಗೂ ಶುಂಠಿ ಬೆಳೆ ಎಡೆಬಿಡದೆ ಬೀಳುತ್ತಿರುವ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಅಡಿಕೆಗೆ ಎಲೆಚುಕ್ಕೆ, ಕೊಳೆರೋಗ ಹಬ್ಬುತ್ತಿದೆ ಇದರಿಂದ ಬೆಳೆಗಾರ ಕಂಗಾಲಾಗಿದ್ದಾನೆ.

ಈ ಭಾಗದಲ್ಲಿ ಪ್ರತಿದಿನ ರಾತ್ರಿ ಗುಡುಗು ಸಹಿತ ಮಳೆ ಬೀಳುತ್ತಿದ್ದು ಇಂದು ಸೋಮವಾರ ಸಂಜೆ ಐದು ಗಂಟೆಗೆ ದಟ್ಟ ಮೋಡ ಮುಸುಕಿ ಕತ್ತಲಾವರಿಸಿ ಧಾರಾಕಾರ ಮಳೆ ಸುರಿಯಲಾರಂಭಿಸಿ ರಭಸದ ಮಳೆ ಜೊತೆಗೆ ಗುಡುಗು-ಸಿಡಿಲು ಅಬ್ಬರ ಜೋರಾಗಿತ್ತು.

ಹೊಸನಗರ ತಾಲೂಕಿನ ಜನತೆಗೆ ಈ ಮಳೆ, ಗಾಳಿಯಿಂದಾಗಿ ವಿದ್ಯುತ್ ಕಾಣುವುದೇ ದುಸ್ತರವೆನಿಸಿದೆ.

ಜಾಹಿರಾತು

LEAVE A REPLY

Please enter your comment!
Please enter your name here