ರಿಪ್ಪನ್‌ಪೇಟೆ ಹಿಂದು ಮಹಾಸಭಾ ಗಣೇಶೋತ್ಸವ ಸಮಾರಂಭದಲ್ಲಿ ಗಣಪತಿ ಪ್ರತಿಷ್ಟಾಪನಾ ಮಹೋತ್ಸವ ಮತ್ತು ವಿವಿಧ ಮನೋರಂಜನಾ ಸಾಂಸ್ಕೃತಿಕ ಕಾರ್ಯಕ್ರಮ

0 268

ರಿಪ್ಪನ್‌ಪೇಟೆ: ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸಮಿತಿಯ 56ನೇ ವರ್ಷದ 11 ದಿನಗಳ ಶ್ರೀವರಸಿದ್ದಿವಿನಾಯಕ ಸ್ವಾಮಿಯ ಪ್ರತಿಷ್ಟಾಪನಾ ಮಹೋತ್ಸವ  ಮತ್ತು ವಿವಿಧ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀಸಿದ್ದಿವಿನಾಯಕ ದೇವಸ್ಥಾನದ ಹಿಂಭಾಗದ ತಿಲಕ್ ಮಹಾಮಂಟಪದ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ನಾಗರಾಜ್ ಪವಾರ್ ಮತ್ತು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಬಳ್ಳಾರಿ ವಿವರಿಸಿದರು.

ಸೆಪ್ಟೆಂಬರ್ 18 ರಂದು ಸೋಮವಾರ ಮಧ್ಯಾಹ್ನ 12.30 ಕ್ಕೆ ಶ್ರೀವರಸಿದ್ದಿವಿನಾಯಕ ಸ್ವಾಮಿಯ ಪ್ರತಿಷ್ಟಾಪನಾ ಪೂಜೆ ಮತ್ತು ಪ್ರಸಾದ ವಿನಿಯೋಗ, ಸೆ.19 ರಂದು ಮಂಗಳವಾರ ರಾತ್ರಿ ಶ್ರೀಶಾರದಾ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸೆ.20 ರಂದು ಬುಧವಾರ ರಾತ್ರಿ 8 ಗಂಟೆಗೆ `ಸಂತೃಪ್ತಿ’ ಅಂಧಕಲಾವಿದರ ತಂಡ ಇವರಿಂದ ರಸಮಂಜರಿ ಕಾರ್ಯಕ್ರಮ.

ಸೆ.21 ರಂದು ಗುರುವಾರ ರಾತ್ರಿ 8 ಗಂಟೆಗೆ ಕೇಡಲಸರ ಶ್ರೀಮಹಾಗಣಪತಿ ವೀರಾಂಜನೇಯ ಕಲಾ ಪ್ರತಿಷ್ಠಾನ ಇವರಿಂದ `ರಾಜ ಉಗ್ರಸೇನಾ’ ಯಕ್ಷಗಾನ ಪ್ರದರ್ಶನ, ಸೆ.22 ರಂದು ಶುಕ್ರವಾರ ರಾತ್ರಿ 8 ಗಂಟೆಗೆ `ರಸಮಂಜರಿ’ಕಾರ್ಯಕ್ರಮ, ಸೆ.23 ರಂದು ಶನಿವಾರ ರಾತ್ರಿ 8 ಕ್ಕೆ ಶ್ರೀಶಾರದಾಂಬ ಸಾಂಸ್ಕೃತಿಕ ಕಲಾ ಕೇಂದ್ರ ಇವರಿಂದ “ಭರತನಾಟ್ಯ’ಪ್ರದರ್ಶನ, ಸೆ.24 ರಂದು ಭಾನುವಾರ ರಾತ್ರಿ 8 ಕ್ಕೆ ತೆಕ್ಕಟ್ಟೆಯ ಓಂಕಾರ ಕಲಾವಿದರಿಂದ `ಎಷ್ಟ್ ಹೇಳಿದ್ರೂ ಅಷ್ಟೆ’ ಎಂಬ ಹಾಸ್ಯಮಯ ನಾಟಕ ಪ್ರದರ್ಶನ.

ಸೆ.25 ರಂದು ಸೋಮವಾರ ರಾತ್ರಿ 8 ಕ್ಕೆ ಹೆಸರಾಂತ ಜಾನಪದ ಆಯ್ದ ಆಹ್ವಾನಿತ ತಂಡಗಳಿಂದ `ಬಳೆಕೋಲಾಟ’ ಸ್ಪರ್ಧೆ, ಸೆ.26 ರಂದು ಮಂಗಳವಾರ ರಾತ್ರಿ 8ಕ್ಕೆ ಶ್ರೀವಿನಾಯಕ ಮೆಲೋಡಿಸ್’ ತಂಡದವರಿಂದ ರಸಮಮಜರಿ ಕಾರ್ಯಕ್ರಮ, ಸೆ.27 ರಂದು ಬುಧವಾರ ರಾತ್ರಿ 8 ಕ್ಕೆ ರಿಪ್ಪನ್‌ಪೇಟೆ, ಕೊಪ್ಪ, ಹೊಸನಗರ ವಿದ್ಯಾರ್ಥಿಗಳಿಂದ `ಡೆಸ್ಟಿನಿ ಸ್ಕೂಲ್ ಆಫ್ ಡ್ಯಾನ್ಸ್’’ ಇವರಿಂದ ನೃತ್ಯ ರೂಪಕ.

ಸೆ.28 ರಂದು ಗುರುವಾರ ಮದ್ಯಾಹ್ನ 12.30 ಕ್ಕೆ ಶ್ರೀ ಸ್ವಾಮಿಯ ವಿಸರ್ಜನಾ ಪೂಜೆ ನಮತರ ಸಂಜೆ 4 ಗಂಟೆಗೆ ಶ್ರೀಸ್ವಾಮಿಯ ವಿಸರ್ಜನಾ ಮೆರವಣಿಗೆ ರಾಜಬೀದಿ ಉತ್ಸವ ಈ ರಾಜಬೀದಿ ಉತ್ಸವದಲ್ಲಿ ವಿಶೇಷ ವಾದ್ಯ ಡೊಳ್ಳುಕುಣಿತ ತಮಟೆ ಬಡಿತ ವಿವಿಧ ಗ್ರಾಮಗಳ ಜಾನಪದ ತಂಡದವರ ಭಜನೆ ಈ ವರ್ಷದ ವಿಶೇಷ ಅಕರ್ಷಣೆ ಭದ್ರಾವತಿ ಅರಕೆರೆ ವೀರಗಾಸೆ ಶಿಗ್ಗಾಂವ್ ಜಾಂಜಾ ಪಥಾಕ್, ಕೀಲುಕುದುರೆ, ಗೊಂಬೆಕುಣಿತ,ನಗಾರಿ ತಟ್ಟಿರಾಯ ತಂಡದವರ ಕಲಾ ಪ್ರದರ್ಶನಗೊಳ್ಳಲಿದೆ. ಇದರೊಂದಿಗೆ ರಾತ್ರಿ 10-30 ರಿಂದ ವಿನಾಯಕ ವೃತ್ತದಲ್ಲಿ ಶಿವಮೊಗ್ಗ `ಗೀತಾ ಅರ್ಕೇಸ್ಟ್ರಾ’ ತಂಡದವರ ಮನೋರಂಜನಾ ಕಾರ್ಯಕ್ರಮ ಆಯೋಜಿಸಲಾಗಿದ್ದು ಸಕಲ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾಮಿಯ ದರ್ಶನಾಶೀರ್ವಾದ ಪಡೆಯುವಂತೆ ಸಮಿತಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!