ಹೊಸ ಟ್ರ್ಯಾಕ್ಟರ್ ಖರೀದಿಸಿ ಮನೆಗೆ ತೆರಳುವಾಗ ನಡೆಯಿತು ದುರಂತ: ಯುವಕ ಸ್ಥಳದಲ್ಲೇ ಸಾವು !

0
84289

ಶಿವಮೊಗ್ಗ: ನಗರದ ಹೊರವಲಯದ ಹೊಸಕೊಪ್ಪ ರಸ್ತೆಯ ಚಾನೆಲ್ ಬಳಿ ಹೊಸ ಟ್ರ್ಯಾಕ್ಟರ್ ಮಗುಚಿ ಬಿದ್ದು ಯುವಕ ಮೃತಪಟ್ಟಿರುವ ಘಟನೆ ನಡೆದಿದೆ.

ಹೊಸ ಟ್ರ್ಯಾಕ್ಟರ್ ಕೊಂಡುಕೊಂಡ ಖುಷಿಯಲ್ಲಿ ಊರಿಗೆ ಮರಳುವಾಗ ಎದುರಿಗೆ ಬಂದ ವಾಹನವನ್ನು ತಪ್ಪಿಸುವ ಸಲುವಾಗಿ ರಸ್ತೆಯ ಅಂಚಿಗೆ ಟ್ರ್ಯಾಕ್ಟರ್ ಅನ್ನು ಚಾಲಕ ಚಲಾಯಿಸುವಾಗ ಆಯತಪ್ಪಿ ಮಗುಚಿ ಬಿದ್ದಿದೆ. ಮಗುಚಿ ಬಿದ್ದ ಟ್ರ್ಯಾಕ್ಟರ್ ನ ಅಡಿಯಲ್ಲಿ ಹೊಸಕೊಪ್ಪ ತಾಂಡಾದ ನಿವಾಸಿ ಶಶಿನಾಯ್ಕ ತಂದೆ ಪೀರ್ಯಾನಾಯ್ಕ ಎಂಬ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ತಕ್ಷಣವೇ ಸುತ್ತಮುತ್ತಲಿನ ಜನ ರೈತರು ಬಂದು ಟ್ರ್ಯಾಕ್ಟರ್ ಅನ್ನು ಎತ್ತಿದ್ದಾರೆ. ಅಷ್ಟರಲ್ಲಿ ಯುವಕ ಮೃತಪಟ್ಟಿರುವುದು ತಿಳಿದುಬಂದಿದೆ.

ಶವವನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದ್ದು, ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://youtu.be/GtyoVqYROl0
ಜಾಹಿರಾತು

LEAVE A REPLY

Please enter your comment!
Please enter your name here