Hosanagara | ತಾಲ್ಲೂಕು ಪಶು ವೈದ್ಯ ಇಲಾಖೆಯಲ್ಲಿ 83 ಮಂಜೂರಾದ ಹುದ್ದೆಗಳಲ್ಲಿ 14 ಜನರು ಮಾತ್ರ ಸೇವೆ ! ತಾಲ್ಲೂಕಿನಲ್ಲಿ ಪಶುವೈದ್ಯ ಇಲಾಖೆ ಬಾಗಿಲು ಹಾಕುವುದೇ ಒಳಿತು !!?

0 799

ಹೊಸನಗರ: ಈ ವರ್ಷ ರಾಜ್ಯದ ಹೊಸನಗರ (Hosanagara) ತಾಲ್ಲೂಕು ಬರಪೀಡಿತ ಪ್ರದೇಶವಾಗಿದೆ ಪ್ರಾಣಿಗಳಿಗೆ ಆಹಾರವಿಲ್ಲದೇ ಪರದಾಟ ನಡೆಸುವ ಕಾಲವಾಗಿದೆ ಮನುಷ್ಯರಿಗೆ ಕಾಯಿಲೆ ಬಂದರೆ ಇನ್ನೊಬ್ಬರ ಹತ್ತಿರ ಹೇಳಿಕೊಂಡು ಹೊಸನಗರದಲ್ಲಿ ಡಾಕ್ಟರ್‌ಗಳಿಲ್ಲದಿದ್ದರೂ ಶಿವಮೊಗ್ಗ – ಸಾಗರ – ಮಣಿಪಾಲನಂತಹ ದೊಡ್ಡ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆದುಬರಬಹುದು ಆದರೇ ಪ್ರಾಣಿ-ಪಕ್ಷಿಗಳಿಗೆ ಕಾಯಿಲೆ ಬಂದರೆ ಯಾರ ಹತ್ತಿರ ಹೋಗಬೇಕು? ಸರ್ಕಾರಿ ಪಶು ವೈದ್ಯ ಇಲಾಖೆ ಬಿಟ್ಟರೆ ಖಾಸಗಿ ಆಸ್ಪತ್ರೆಗಳಿಲ್ಲ. ಹೊಸನಗರ ತಾಲ್ಲೂಕಿನ 31 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 83 ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರು ಕೇವಲ 14 ಜನ ಪಶುವೈದ್ಯ ಸಿಬ್ಬಂದಿಗಳು ಮಾತ್ರ ಕೆಲವು ಪಶುವೈದ್ಯ ಇಲಾಖೆ ಕಛೇರಿ ಬಾಗಿಲು ತೆಗೆಯಲು ಸಿಬ್ಬಂದಿಗಳಿಲ್ಲ ಮುಂದೇನು ಚಿಂತೆ ಪಶು ಸಾಗಣಿಕೆದಾರರಿಗಾಗಿದೆ.

ಹೊಸನಗರ ತಾಲ್ಲೂಕಿನಲ್ಲಿ 83 ಹುದ್ದೆಯಲ್ಲಿ 14 ಜನ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ
ಹೊಸನಗರ ತಾಲ್ಲೂಕು ಕೇಂದ್ರದಲ್ಲಿ ಮುಖ್ಯವೈದ್ಯಾಧಿಕಾರಿಗಳೆ (ಆಡಳಿತ) ನಡೆಸುವ ಯಂತ್ರವೇ ಇಲ್ಲವೆಂದರೆ ಹೇಗೆ? ಎಂಬುದು ಪಶು ಸಾಗಣಿಕೆದಾರರ ಚಿಂತೆಯಾಗಿದ್ದು ತಾಲ್ಲೂಕು ಪಶುವೈದ್ಯ ಆಸ್ಪತ್ರೆ ಬಸ್ಸ್ ಸ್ಟ್ಯಾಂಡ್ ಎದುರಿನಲ್ಲಿದ್ದು ಈ ಪಶು ಆಸ್ಪತ್ರೆಯಲ್ಲಿ ಮುಖ್ಯವೈದ್ಯಾಧಿಕಾರಿಗಳ ಸಂಖ್ಯೆ 2 ಮಂಜೂರಾಗಿದ್ದು ಎರಡು ಖಾಲಿ ಇದೆ. ಹಿರಿಯ ಪಶು ವೈದ್ಯಕೀಯ ಪರೀಕ್ಷಕರ ಹುದ್ದೆ ಒಂದು ಇದ್ದು ಅದು ಖಾಲಿ ಇದೆ, ಕಿರಿಯ ಪಶುವೈದ್ಯಕೀಯ ಪರೀಕ್ಷಕರ ಸಂಖ್ಯೆ 3ಹುದ್ದೆ ಇದ್ದು ಅದು ಖಾಲಿ ಇದೆ. ವಾಹನ ಚಾಲಕರಿಲ್ಲ, ಡಿ ದರ್ಜೆ ನೌಕರರಿಲ್ಲ, ಕಛೇರಿಯಲ್ಲಿ ಕಾರ್ಯನಿರ್ವಹಿಸುವವರಿಲ್ಲ. ಒಟ್ಟಾರೇ 12 ತಾಲ್ಲೂಕು ಕೇಂದ್ರದಲ್ಲಿ ಸೇವೆ ಸಲ್ಲಿಸಬೇಕಾದವರು ಕೇವಲ 2 ಜನ ಮಾತ್ರ ಹೊಸನಗರ ತಾಲ್ಲೂಕು ಕೇಂದ್ರ ಕಛೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರೆ ಜನಪ್ರತಿನಿಧಿಗಳು ತಲೆ ತಂಗಿಸುವಂತಾಗಿದೆ.

83 ಹುದ್ದೆಗಳಲ್ಲಿ ಕೇವಲ 14 ಸಿಬ್ಬಂದಿಗಳು ಮಾತ್ರ ಸೇವೆ:
ಹೊಸನಗರ ತಾಲ್ಲೂಕಿನಲ್ಲಿ ಮಲೆನಾಡು ಪ್ರದೇಶವಾಗಿರುವುದರಿಂದ ಹಾಗೂ ರೈತರು ಹಾಲಿಗಾಗಿ ಹಾಗೂ ಹೈನುಗಾರಿಕೆ ನಡೆಸುವ ಉದ್ದೇಶದಿಂದ ಎಮ್ಮೆ-ದನ-ಕುರಿ ಸಾಗಾಣಿಕೆದಾರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ ಹೆಚ್ಚು-ಕಡಿಮೆ ಪ್ರತಿಯೊಬ್ಬರ ಮನೆಯಲ್ಲಿಯು ಒಂದೊಂದು ಪ್ರಾಣಿಗಳನ್ನು ಸಾಕುತ್ತಿದ್ದಾರೆ ಇವುಗಳಿಗೆ ಕಾಯಿಲೆ ಬಂದರೆ ಪಶುವೈದ್ಯ ಸಿಬ್ಬಂದಿಗಳಿಲ್ಲದಂತಾಗಿದೆ ಔಷಧಿ ನೀಡುವ ಸೇವಕರು ಇಲ್ಲವಾದ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲ್ಲೂಕಿನಲ್ಲಿ ಒಟ್ಟು 83 ಹುದ್ದೆಗಳಿದ್ದು ಅದರಲ್ಲಿ ಕೇವಲ 14ಜನರು ಸೇವೆ ಸಲ್ಲಿಸುತ್ತಿದ್ದಾರೆ ಅವರು ಯಾವ ರೀತಿ ಸೇವೆ ಸಲ್ಲಿಸುತ್ತಿರಬಹುದು ಕಷ್ಟಕರ ವಾತಾವರಣದಲ್ಲಿಯೂ ಪ್ರಾಣಿಗಳ ಸೇವೆ ಮಾಡುತ್ತಿದ್ದಾರೆ. ಎರಡು-ಮೂರು ತಿಂಗಳಲ್ಲಿ ಎರಡು ಜನ ಸಿಬ್ಬಂದಿ ವಯೋನಿವೃತ್ತಿ ಪಡೆಯಲಿದ್ದು ತಾಲ್ಲೂಕಿನ ಪಶುವೈದ್ಯ ಇಲಾಖೆಯ ಕಥೆಯೇನು? ಎಂಬ ಚಿಂತೆ ಸಾಗಾಣಿಕೆದಾರರದ್ದಾಗಿದ್ದು ದುಂದುವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸಿದರೇ ಸಾಲದು ಸರ್ಕಾರದಿಂದ ಔಷಧಿಗಳನ್ನು ನೀಡಿದರೆ ಸಾಲದು ಸಿಬ್ಬಂದಿಗಳನ್ನು ನೀಡುವುದು ಸರ್ಕಾರ ಹಾಗೂ ಜನಪ್ರತಿನಿಧಿಗಳ ಕರ್ತವ್ಯವಾಗಿದೆ.

ಶಾಸಕರೇ ಪಶು ಆಸ್ಪತ್ರೆ ಕಡೆಗೆ ಗಮನ ಹರಿಸಿ:
ಹೊಸನಗರ ತಾಲ್ಲೂಕಿನ ಎಲ್ಲ ಸರ್ಕಾರಿ ಕಛೇರಿಗಳಲ್ಲಿಯು ಸಿಬ್ಬಂದಿಗಳ ಕೊರತೆ ನೋಡುತ್ತಿದ್ದೇವೆ ಇದು ಇಂದಿನ ಕತೆಯಲ್ಲ ಸಾಕಷ್ಟು ವರ್ಷಗಳಿಂದಲೂ ಇದೆ ಕತೆಯಾಗಿದೆ ಹಿಂದಿನ ಮಾಜಿ ಶಾಸಕರಾದ ಹರತಾಳು ಹಾಲಪ್ಪನವರ ಗಮನಕ್ಕೂ ತರಲಾಗಿತ್ತು ಪ್ರಯೋಜನವಾಗಿಲ್ಲ ತಾವು ನೂತನ ಶಾಸಕರಾಗಿ ನಮ್ಮ ಕ್ಷೇತ್ರಕ್ಕೆ ಆಯ್ಕೆಯಾಗಿದ್ದಿರಿ ನಿಮ್ಮ ಬಗ್ಗೆ ಮತ ಹಾಕಿದ ಜನರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಲ್ಲ ಸರ್ಕಾರಿ ಕಛೇರಿಗೂ ಸಿಬ್ಬಂದಿಗಳನ್ನು ಭರ್ತಿ ಮಾಡಿ ಜನರ ಸೇವೆ ಭಾಗ್ಯ ಕಲ್ಪಿಸಿ ಹೊಸನಗರ ತಾಲ್ಲೂಕಿನ ಜನರ ಮತದಾರರ ಪುಣ್ಯ ಕಟ್ಟಿಕೊಳ್ಳಿ ಎಂದಷ್ಟೆ ನಾವು ಹೇಳಬಹುದು.

ಆಂಬುಲೆನ್ಸ್ ಸೇವೆ:
ಹೊಸನಗರ ನೂತನ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ಮೂರು ತಿಂಗಳ ಹಿಂದೆ ಪಶು ವೈದ್ಯ ಆಂಬುಲೆನ್ಸ್ ಉದ್ಘಾಟನೆ ಮಾಡಿದ್ದು ಅದರ ಸೇವೆ ಸದಾ ಸಿದ್ದವಿದೆ ಎಂದು ಆಂಬುಲೆನ್ಸ್ ವೈದ್ಯಾಧಿಕಾರಿ ಇಂಚರರವರು ತಿಳಿಸಿದ್ದು ಇದರ ಸೇವೆ ಪಡೆಯುವವರು ಪಟ್ಟಣದಿಂದ ಮೂರು ಕಿ.ಮೀ ದೂರದಲ್ಲಿರಬೇಕು ಹಾಗೂ 1962 ನಂಬರಿಗೆ ಕರೆ ಮಾಡಬೇಕೆಂದಿದ್ದು ಇದರ ಉಪಯೋಗವನ್ನು ಪಟ್ಟಣ ರಹಿತರು ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!