ಫೆ.2 ರಿಂದ ರಂಭಾಪುರಿ ಜಗದ್ಗುರುಗಳ 33ನೇ ವರ್ಷದ ಪೀಠಾರೋಹಣ ವರ್ಧಂತಿ ಮಹೋತ್ಸವ

0 459

ಶಿಕಾರಿಪುರ: ಮಳೆಮಲ್ಲೇಶ್ವರ ಜಾಗೃತ ಸ್ಥಳ ಕಡೇನಂದಿಹಳ್ಳಿ ತಪೋ ಕ್ಷೇತ್ರದಲ್ಲಿ ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳ 33ನೇ ವರ್ಷದ ಪೀಠಾರೋಹಣ ವರ್ಧಂತಿ ಮಹೊತ್ಸವ, ಶಿವಾನುಷ್ಠಾನ ದ್ಯಾನ ಮಂದಿರ, ಶಿಲಾಮಂಟಪ, ಶ್ರೀ ಜಗದ್ಗುರು ರೇಣುಕಾಚಾರ್ಯರ 36 ಅಡಿ ಎತ್ತರದ ಮೂರ್ತಿ ಲೋಕಾರ್ಪಣೆ, ಮಹಾಮಸ್ತಕಾಭಿಷೇಕ, ಸರ್ವವಿಧಿ ಪುಷ್ಪಾರ್ಚನೆ, ಶ್ರೀ ಜಗದ್ಗುರು ರೇಣುಕಾಚಾರ್ಯ ಪುರಾಣ ಪ್ರವಚನ ಸೇವೆ,ಶ್ರೀ ರಂಭಾಪುರಿ ಜಗದ್ಗುರು ರೇವಣಸಿದ್ದೇಶ್ವರ ಪ್ರಶಸ್ತಿ ಪ್ರಧಾನ ಹಾಗೂ ವಿವಿಧ ಸಾಮಾಜಿಕ ಧಾರ್ಮಿಕ ಸಮಾರಂಭವನ್ನು ನಡೆಸಲಾಗುವುದು ಎಂದು ಸುಕ್ಷೇತ್ರ ದುಗ್ಲಿ ಮತ್ತು ತಪೋಕ್ಷೇತ್ರ ಕಡೇನಂದಿಹಳ್ಳಿ ಗುರುಗಳಾದ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.

ಪಟ್ಟಣದ ಸುದ್ದಿಮನೆಯಲ್ಲಿ ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿ ಮತ್ತು ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ತಾಲ್ಲೂಕಿನ ಕಡೇನಂದಿಹಳ್ಳಿ ಗ್ರಾಮದ ಬೆಟ್ಟಗಳ ಮದ್ಯದಲ್ಲಿರುವ ಶ್ರೀ ಮಳೆಮಲ್ಲೇಶ್ವರ ಸ್ವಾಮಿಯ ಜಾಗೃತ ಸ್ಥಳವು ತಪೋಕ್ಷೇತ್ರವಾಗಿದ್ದು, ಈ ಕ್ಷೇತ್ರವು ಸಾವಿರಾರು ವರ್ಗಗಳ ಇತಿಹಾಸವಿರುವ ಪವಿತ್ರ ತಾಣವಾಗಿದೆ. ಇಂತಹಾ ಪವಿತ್ರ ಕ್ಷೇತ್ರದಲ್ಲಿ ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳ 33ನೇ ವರ್ಷದ ಪೀಠಾರೋಹಣ ವರ್ಧಂತಿ ಮಹೊತ್ಸವ, ಶಿವಾನುಷ್ಠಾನ ಧ್ಯಾನ ಮಂದಿರ, ಶಿಲಾಮಂಟಪ, ಶ್ರೀ ಜಗದ್ಗುರು ರೇಣುಕಾಚಾರ್ಯರ 36 ಅಡಿ ಎತ್ತರದ ಮೂರ್ತಿ ಲೋಕಾರ್ಪಣೆ, ಮಹಾಮಸ್ತಕಾಭಿಷೇಕ, ಸರ್ವವಿಧಿ ಪುಷ್ಪಾರ್ಚನೆ, ಶ್ರೀ ಜಗದ್ಗುರು ರೇಣುಕಾಚಾರ್ಯ ಪುರಾಣ ಪ್ರವಚನ ಸೇವೆ,ಶ್ರೀ ರಂಭಾಪುರಿ ಜಗದ್ಗುರು ರೇವಣಸಿದ್ದೇಶ್ವರ ಪ್ರಶಸ್ತಿ ಪ್ರಧಾನ ಹಾಗೂ ವಿವಿಧ ಸಾಮಾಜಿಕ ಧಾರ್ಮಿಕ ಸಮಾರಂಭವನ್ನು ಫೆ 02 ರ ಶುಕ್ರವಾರದಿಂದ ಫೆ. 13ರ ಮಂಗಳವಾರದವರೆಗೆ ಧರ್ಮ ಚಿಂತನೆ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಫೆ. 02 ರ ಶುಕ್ರವಾರದ ಸಂಜೆ 4 ಗಂಟೆಗೆ ಶ್ರೀಶೈಲ ಹಾಗೂ ಕಾಶಿ ನೂತನ ಜಗದ್ಗುರುಗಳವರಿಗೆ ಅಡ್ಡಪಲ್ಲಕ್ಕಿ ಮೂಲಕ ಪುರ ಪ್ರವೇಶ, ಸಂಜೆ 6 ಗಂಟೆಗೆ ಶ್ರೀ ಜಗದ್ಗುರು ಪಂಚಾಚಾರ್ಯರ ಧ್ವಜಾರೋಹಣ, 7 ಗಂಟೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಪುರಾಣ ಪ್ರವಚನ ಉದ್ಘಾಟನೆ ನಡೆಯುವುದರಿಂದ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು.

ಫೆ. 13 ರ ಮಂಗಳವಾರ ಬೆಳಿಗ್ಗೆ 7 ಗಂಟೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಮಹಾಮಸ್ತಕಾಭಿಷೇಕ ಸಂಜೆ 4 ಗಂಟೆಗೆ ಪುಷ್ಪಾರ್ಚನೆ ಪರಂಪರೆ ರಕ್ಷಣಾ ಧರ್ಮ ಸಮಾರಂಭದ ದಿವ್ಯ ಸಾನಿಧ್ಯವನ್ನು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ,ವೀರಸೋಮೇಶ್ವರ ರಾಜದೇಶೀ ಕೇಂದ್ರ ಶಿವಾಚಾರ್ಯರು ಬಾಳೆಹೊನ್ನೂರು ಇವರು ವಹಿಸಲಿದ್ದಾರೆ. ಅಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ಮೂರ್ತಿ ಲೋಕಾರ್ಪಣೆ ಮಾಡಲಿದ್ದು, ಸಮಾರಂಭದ ಉದ್ಘಾಟನೆಯನ್ನು ತಾಲ್ಲೂಕಿನ ಶಾಸಕರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ರವರು ನೆರವೇರಿಸಲಿದ್ದಾರೆ. ಈ ಸಮಾರಂಭದಲ್ಲಿ ಜಿಲ್ಲೆಯ ಸಂಸದ ಬಿ ವೈ ರಾಘವೇಂದ್ರರವರಿಗೆ, ಮಾಜಿ ಎಂಎಡಿಬಿ ಅದ್ಯಕ್ಷ ಕೆ ಎಸ್ ಗುರುಮೂರ್ತಿಯವರಿಗೆ, ಮಾಜಿ ಉಗ್ರಾಣ ನಿಗಮದ ಅದ್ಯಕ್ಷ ಹೆಚ್ ಟಿ ಬಳಿಗಾರ್ ಸೇರಿದಂತೆ ಅನೇಕ ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಗುವುದು ಎಂದು ಹೇಳಿದರು. 

ಗೋಷ್ಟಿಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ತಾಲ್ಲೂಕು ಘಟಕದ ಅದ್ಯಕ್ಷ ಎಸ್ ವಿ ಈರೇಶ್, ಟ್ರಸ್ಟಿ ಪಟ್ಟದಯ್ಯ, ದೇವೇಂದ್ರಪ್ಪ, ಈರಣ್ಣ ಇದ್ದರು.

Leave A Reply

Your email address will not be published.

error: Content is protected !!