ರಿಪ್ಪನ್‌ಪೇಟೆ ವಿವಿಧೆಡೆ 79ನೇ ಸ್ವಾತಂತ್ರ್ಯ ಸಂಭ್ರಮ | ದೇಶದೆಲ್ಲಡೆ ಶಾಂತಿ ಮೇಳೈಸಲಿ ಹೊಂಬುಜ ಶ್ರೀಗಳ ಅಭಿಮತ

Written by Mahesha Hindlemane

Updated on:

ರಿಪ್ಪನ್‌ಪೇಟೆ ; ದೇಶದಲ್ಲಿ ಶಾಂತಿ ಸೌಹಾರ್ದತೆ ಸಹಮತದ ಜೀವನ ವರ್ತಮಾನದ ಅಗತ್ಯವಾಗಿದ್ದು. ಧಾರ್ಮಿಕ ಕ್ಷೇತ್ರವನ್ನು ಬೆಂಬಿಡದೆ ಕಾಡುತ್ತಿರುವ ಮತೀಯ ಶಕ್ತಿಗಳಲ್ಲಿ ಸದ್ಬುದ್ದಿ ದೊರೆತು ಜಗತ್ತಿನಲ್ಲಿ ಶಾಂತಿ ಮೇಳೈಸುವಂತಾಗಲಿ ಎಂದು ಹೊಂಬುಜ ಜೈನಮಠದ ಪೀಠಾಧಿಕಾರಿ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಶ್ರೀಕ್ಷೇತ್ರದ ಅವರಣದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ, ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸುವ ಹುನ್ನಾರ ಅವ್ಯಾಹತವಾಗಿ ನಡೆಯುತ್ತಿದ್ದು ದೇಶದ ವಿಭಜನೆಯ ಹಾದಿಯತ್ತ ಸಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ದುಷ್ಟ ಶಕ್ತಿಗಳನ್ನು ಧಮನ ಮಾಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಟ್ಟಿ ನಿಲುವು ತಾಳಬೇಕು ಎಂದರು.

ರಿಪ್ಪನ್‌ಪೇಟೆ ವಿವಿಧೆಡೆ 79ನೇ ಸ್ವಾತಂತ್ಯ ಸಂಭ್ರಮ

79ನೇ ಸ್ವಾತಂತ್ಯ್ಯೋತ್ಸವ ಸಂಭ್ರಮ ಸಡಗರದೊಂದಿಗೆ ರಿಪ್ಪನ್‌ಪೇಟೆ ವಿವಿಧೆಡೆಯಲ್ಲಿ ಜರುಗಿತು.

ಗ್ರಾಮ ಪಂಚಾಯ್ತಿಯಲ್ಲಿ ಗ್ರಾಮಾಧ್ಯಕ್ಷೆ ಧನಲಕ್ಷ್ಮಿ ಧ್ವಜಾರೋಹಣ ನೆರವೇರಿಸಿದರು. ಪೊಲೀಸ್‌ ಠಾಣೆಯಲ್ಲಿ ಪಿಎಸ್‌ಐ ರಾಜುರೆಡ್ಡಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಮಂಜಪ್ಪ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾ.ಅಂಜನಯ್ಯ, ನಾಡಕಛೇರಿಯಲ್ಲಿ ಉಪತಹಶೀಲ್ದಾರ್ ಗೌತಮ್, ಬಿ.ಸಿ.ಎಂ ವಸತಿ ನಿಲಯದಲ್ಲಿ ಮೇಲ್ವಿಚಾರಕಿ ಸುಮಿತ್ರಬಾಯಿ, ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿ ಸಂತೋಷ, ಬರುವೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಎಸ್.ಸಿ,ಎಸ್.ಟಿ. ವಸತಿ ಶಾಲೆಯಲ್ಲಿ ಮೇಲ್ವಿಚಾರಕ ರಾಘವೇಂದ್ರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಪ್ರಾಚಾರ್ಯ ಪ್ರೋ.ವೀರೂಪಾಕ್ಷಪ್ಪ, ಸರ್ಕಾರಿ ಪದವಿ ಪೂರ್ವ ಕಾಲೇಜ್ ಪ್ರಾಚಾರ್ಯ ಕೃಷ್ಣಮೂರ್ತಿ, ಸರ್ಕಾರಿ ಪ್ರೌಢಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ಚಂದ್ರಪ್ಪ ಡಿ, ಪಶು ಆಸ್ಪತ್ರೆಯಲ್ಲಿ ಹೊಸನಗರ ತಾಲ್ಲೂಕು ಸಹಾಯಕ ನಿರ್ದೇಶಕ ಡಾ.ಕೆ.ಎಂ.ನಾಗರಾಜ್, ಮೇರಿಮಾತಾ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕಿ ಪಾತಿಮಾ, ಗುಡ್ ಶಫಡ್ ಚರ್ಚ್‌ನಲ್ಲಿ ಜೆಸ್ಮಿನ್, ಶ್ರೀಬಸವೇಶ್ವರ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಮಳಕೊಪ್ಪ ಈಶ್ವರ ಮತ್ತು ಹೇಮರಾಜ್, ರೋಟರಿ ಕ್ಲಬ್ ಅಧ್ಯಕ್ಷ ಎಂ.ಕೃಷ್ಣರಾಜ್, ಮಸೀದಿಯಲ್ಲಿ ಅಧ್ಯಕ್ಷ ಹಸನಬ್, ಧ್ವಜಾರೋಹಣ ನೆರವೇರಿಸಿದರು
ನಂತರ ಶಾಲಾ ಮಕ್ಕಳ ಪಥಸಂಚಲನವು ಸುರಿವ ಮಳೆಯಲ್ಲಿಯೂ ಯಶಸ್ವಿಯಾಗಿ ಜರುಗಿತು.

ಸುಮಾರು 100 ಅಡಿ ಅಳತೆಯ ಬೃಹತ್ ಗಾತ್ರದ ತಿರಂಗಾ ಧ್ವಜವನ್ನು ಹಿಡಿದು ಶಾಲಾ ಮಕ್ಕಳು ಮಳೆಯನ್ನು ಲೆಕ್ಕಿಸದೆ ಪಥಸಂಚಲನ ಜನಾರ್ಕಷಣೆಗೊಂಡಿತು.

ಕೋಡೂರು ಗ್ರಾಪಂ ಕಚೇರಿಯಲ್ಲಿ ಗ್ರಾಪಂ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಪಂನ ಎಲ್ಲಾ ಸದಸ್ಯರು, ಪಿಡಿಒ ನಾಗರಾಜ್, ಸಿಬ್ಬಂದಿ ವರ್ಗ, ಕೋಡೂರು ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಇದ್ದರು.

Leave a Comment