ಹೊಸನಗರ ; ಬೃಹತ್ ಪ್ರಮಾಣದ ಕೃಷಿ ಆಧಾರಿತ ಆರ್ಥಿಕತೆ ಇದ್ದು ಕೈಗಾರಿಕೆಗಳನ್ನು ಯೂರೋಪಿನ ಶಕ್ತಿಗಳು ನಿಯಂತ್ರಣ ಮಾಡುತ್ತಿದ್ದರು ಇವುಗಳ ಪರಿಣಾಮವಾಗಿ ದೇಶದ ಆರ್ಥಿಕತೆ ಹೆಚ್ಚು ಸೀಮಿತವಾಗಿದ್ದರೂ ಸ್ವಾತಂತ್ರ್ಯ ಪೂರ್ವದಲ್ಲಿ ಆರ್ಥಿಕ ಶಕ್ತಿಯಲ್ಲಿ ಬಲ ಹೊಂದಿದ್ದರೂ ಭಾರತದ ಜನತೆಗೆ ಮೂಲ ಸೌಕರ್ಯಗಳಿಲ್ಲದೇ ಆರ್ಥಿಕ ಸ್ಥಿತಿ ಶೋಚನೀಯ ಸ್ಥಿತಿಯಲ್ಲಿತ್ತು ಎಂದು ಹೊಸನಗರದ ತಹಸೀಲ್ದಾರ್ ರಶ್ಮಿ ಹಾಲೇಶ್ ಹೇಳಿದರು.
ಇಲ್ಲಿನ ನೆಹರು ಮೈದಾನದ ಆವರಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಭಾರತವು ಮತ್ತು ಭಾರತೀಯರು ಬ್ರಿಟಿಷ್ ಆಡಳಿತದ ವ್ಯಾಪ್ತಿಯಲ್ಲಿದ್ದು ಆರ್ಥಿಕವಾಗಿ ರಾಜಕೀಯವಾಗಿ ಹೆಚ್ಚು ನಿಯಂತ್ರಣವನ್ನು ಬ್ರಿಟಿಷರು ಮಾಡುತ್ತಿದ್ದರು.
ಆ ಸಂದರ್ಭದಲ್ಲಿ ಮೂಲಕ ಸೌಕರ್ಯಗಳ ಅಭಾವ, ಕೈಗಾರಿಕಾ ಅಭಿವೃದ್ಧಿಯ ಕೊರತೆ, ಸಾಮಾಜಿಕ ಅನ್ಯಾಯಗಳು ಬಡತನ, ಆಹಾರ ಕೊರತೆಗಳು ಕಂಡು ಬಂದಿದ್ದು ಸ್ವಾತಂತ್ರ್ಯದ ನಂತರ ಭಾರತವು ಸ್ವಾಯತ್ತವಾದ ದೇಶವಾಗಿ ರೂಪುಗೊಂಡು ಆರ್ಥಿಕ ವಿಸ್ತರಣೆ ತಂತ್ರಜ್ಞಾನ ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಹೆಚ್ಚು ಬೆಳೆವಣಿಗೆಯನ್ನು ಕಂಡಿದೆ.
ಈ ಸ್ವಾತಂತ್ರ್ಯ ದಿನದಂದು ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣ ಅರ್ಪಿಸಿದವರಿಗೆ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸಿದಂತಹ ಮಹಾತ್ಮ ಗಾಂಧೀಜಿ, ಭಗತ್ ಸಿಂಗ್, ಸುಭಾಷ್ ಚಂದ್ರ ಭೋಸ್, ಸರೋಜಿನಿ ನಾಯ್ಡು ಬಾಲಗಂಗಾಧರ ತಿಲಕ್ ಡಾ|| ರಾಜೇಂದ್ರ ಪ್ರಸಾದ್, ಸರ್ದಾರ್ ವಲ್ಲಬಾಬಾಯಿ ಪಟೇಲ್, ಲಾಲ್ ಬಹುದ್ದೂರು ಶಾಸ್ತ್ರಿ, ಡಾ|| ಬಿ.ಆರ್ ಅಂಬೇಡ್ಕರ್ ಆದಿಯಾಗಿ ಎಲ್ಲರಿಗೂ ಸಮರ್ಪಣೆ ಅರ್ಪಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ನಾವೆಲ್ಲರೂ ಶ್ರೇಷ್ಠ ಪ್ರಜಾಪ್ರಭುತ್ವದ ಭಾಗಿಯಾಗಿದ್ದೇವೆ ಭಾರತ ದೇಶದ ಪ್ರಜೆಗಳಾದ ನಮಗೆ ನಮ್ಮೆಲ್ಲರಿಗೂ ಹಲವಾರು ಗುರುತುಗಳಿವೆ ಅಂದರೆ ಜಾತಿ ಧರ್ಮ, ಭಾಷೆ ಹಾಗೂ ನಾವು ವಾಸಿಸುವ ಪ್ರದೇಶಗಳು ಇವುಗಳನ್ನು ನಾವು ನಮ್ಮ ಕುಟುಂಬಗಳು-ವೃತ್ತಿಗಳೊಂದಿಗೆ ಗುರುತಿಸಿಕೊಳ್ಳುತ್ತೇವೆ. ಆದರೆ ಅದೆಲ್ಲಕ್ಕಿಂತ ಮಿಗಿಲಾಗಿ ನಮಗೆ ಒಂದು ಗುರುತು ಇದೆ ಅದೇ ನಾವು ಭಾರತೀಯರು ಎಂಬ ಹೆಗ್ಗಳಿಕೆ ಎಂದರು.
ಎಲ್ಲಿಯವರೆಗೆ ಪ್ರಜೆಗಳಿಗೆ ಸ್ವಾತಂತ್ರ್ಯ ಇರುತ್ತದೂ ಯಾವ ದೇಶದ ಪ್ರಜೆಗಳು ಸ್ವಾತಂತ್ರ್ಯರಾಗಿರುತ್ತಾರೂ ಅಲ್ಲಿಯವರೆಗೆ ದೇಶದ ಅಭಿವೃದ್ಧಿ ಪ್ರಜೆಗಳ ಅಭಿವೃದ್ಧಿ ನಾಡಿನ ಅಭಿವೃದ್ಧಿ ಒಂದು ಕುಟುಂಬದ ಅಭಿವೃದ್ಧಿ ನಿರಂತರವಾಗಿ ಸಾಗುತ್ತಿರುತ್ತದೆ ಇದಕ್ಕೆ ಇಂದಿನ ಭಾರತವೇ ಸಾಕ್ಷಿ ಇಡೀ ಪ್ರಪಂಚದಲ್ಲಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಜೊತೆಗೆ ನಮ್ಮ ದೇಶದಲ್ಲಿ ಎಲ್ಲ ಜಾತಿ ಧರ್ಮದವರು ಇದ್ದು ಎಲ್ಲರೂ ನಾವೆಲ್ಲರೂ ಭಾರತೀಯರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇವೆ ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ಭಾರತವು ಮ್ಮತ್ತು ಭಾರತೀಯರು ಬ್ರಿಟಿಷ ಆಡಳಿತದ ವ್ಯಾಪ್ತಿಯಲ್ಲಿದ್ದ , ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಹೆಚ್ಚು ನಿಯಂತ್ರಣದಲ್ಲಿದ್ದು ಮೂಲ ಸೌಕರ್ಯಗಳು ಅಭಾವ, ಕೈಗಾರಿಕಾ ಅಭಿವೃಧ್ಧಿಯ ಕೊರತೆ, ಸಾಮಾಜಿಕ ಅನ್ಯಾಯಗಳು ಬಡತನ ಆಹಾರದ ಕೊರತೆ ಸ್ವಾತಂತ್ರ್ಯ ನಂತರ ಭಾರತವು ಸ್ವಾಯತ್ತವಾದ ದೇಶವಾಗಿ ರೂಪುಗೊಂಡು ಆರ್ಥಿಕ ವಿಸ್ತರಣೆ, ತಂತ್ರಜ್ಞಾನ, ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಹೆಚ್ಚು ಬೆಳವಣಿಗೆಯನ್ನು ಕಂಡಿದ್ದು ಆರ್ಥಿಕ ಸ್ವಾಯತ್ತಿ ಸಾರ್ವಜನಿಕ ಸೌಕರ್ಯಗಳು, ಮಹಿಳೆಯರ ಸಬಲೀಕರಣ ಅಂತರಾಷ್ಟ್ರೀಯ ಸಂಬಂಧಗಳು ಒಪ್ಪಂದಗಳಿದ್ದ ಭಾರತ ದೇಶ ವಿಶ್ವದಲ್ಲಿಯೇ 4ನೇ ಆರ್ಥಿಕ ಶಕ್ತಿಯಾಗಿ ರೂಪುಗೊಂಡಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್, ಅಬಕಾರಿ ಇನ್ಸ್ಪೆಕ್ಟರ್ ನಾಗರಾಜ್, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎಂ.ಎನ್, ಹರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಚೇತನಾ ಆರ್.ಪಿ, ಸಬ್ ಇನ್ಸ್ಪೆಕ್ಟರ್ ಶಂಕರ ಗೌಡ ಪಾಟೀಲ್, ದೈಹಿಕ ಪರೀವಿಕ್ಷಕರಾದ ವಿನಯ್ ಹೆಗಡೆ, ಪಟ್ಟಣ ಪಂಚಾಯತಿ ಅಧ್ಯಕ್ಷ ನಾಗಪ್ಪ, ಉಪಾಧ್ಯಕ್ಷೆ ಚಂದ್ರಕಲಾ, ನಾಡ ಹಬ್ಬಗಳ ಸಮಿತಿಯ ಸದಸ್ಯರಾದ ಎನ್ ಶ್ರೀಧರ ಉಡುಪ, ಶ್ರೀನಿವಾಸ್ ಕಾಮತ್, ರಾಜಮೂರ್ತಿ, ಶಿಕ್ಷಕರಾದ ಧನಂಜಯ, ಸುಹಾಸ್, ವರ್ತಕರ ಸಂಘದ ಅಧ್ಯಕ್ಷರಾದ ವಿಜೇಂದ್ರ ಶೇಟ್, ಪಟ್ಟಣ ಪಂಚಾಯತಿ ಸದಸ್ಯರುಗಳು ತಾಲ್ಲೂಕು ಕಛೇರಿಯ ಸಿಬ್ಬಂದಿಗಳಾದ ಮಂಜುನಾಥ್ ಕಟ್ಟೆ ಚಿರಾಗ್, ರೇಣುಕಯ್ಯ, ಲೋಹಿತ್, ಬಾಲಚಂದ್ರ, ನಾಗಪ್ಪ, ಅಶೋಕ, ನಾಗರಾಜ್, ನವೀನ್ ಹೊಸನಗರದ ಎಲ್ಲ ಸರ್ಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ತಾಲ್ಲೂಕಿನಲ್ಲಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ದೇಶ ಭಕ್ತಿ ಗೀತೆಗಳನ್ನು ಹಾಡುವುದರ ಮೂಲಕ ವಿವಿಧ ಮನರಂಜನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಜೋರು ಮಳೆಯಲ್ಲಿಯೇ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗಿದ್ದು ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.