ರಿಪ್ಪನ್‌ಪೇಟೆ ; ಅತಿಶಯ ಶ್ರೀಕ್ಷೇತ್ರದಲ್ಲಿ ರಾಜ್ಯ ಗೃಹರಕ್ಷಕ ದಳದವರ ವಾರ್ಷಿಕ ತರಬೇತಿ-ಮಾರ್ಗದರ್ಶನ ಶಿಬಿರವು ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಆಶೀರ್ವಾದದೊಂದಿಗೆ ಜೂ. 21ರಂದು ಉದ್ಘಾಟನೆಗೊಂಡಿತು.

ಸಾಗರ ಉಪವಿಭಾಗದ ಸಹಾಯಕ ಆಯುಕ್ತ ವೀರೇಶ್ ಕುಮಾರ್ “ಗೃಹ ರಕ್ಷಕ ದಳದವರು ಸಮಾಜದ ನಾಗರೀಕರ ಹಿತಚಿಂತಕರಾಗಿ, ಸುರಕ್ಷಿತತೆ, ಸಹಾಯ ಒದಗಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣವು ದೇಶದ ಕಾನೂನು ಸುವ್ಯವಸ್ಥೆಯ ಪ್ರಧಾನ ಸೇವೆ ಎಂದಾಗುತ್ತದೆ” ಎಂದು ಶುಭ ಕೋರಿದರು. ಗೃಹ ರಕ್ಷಕ ದಳದವರ ಕರ್ತವ್ಯ ನಿರ್ವಹಣೆ, ಕಾರ್ಯಕ್ಷಮತೆ ಬಗ್ಗೆ ಶ್ಲಾಘಿಸಿದರು.
ಶ್ರೀಕ್ಷೇತ್ರ ಹೊಂಬುಜ ಜೈನ ಮಠದ ಆಡಳಿತಾಧಿಕಾರಿ ಸಿ.ಡಿ. ಅಶೋಕ ಕುಮಾರ್ ಸಹಾಯಕ ಆಯುಕ್ತರವರನ್ನು ಗೌರವಿಸಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಠರಾದ ಡಾ. ಚೇತನ್ ಕುಮಾರ್ ಹೆಚ್.ಪಿ. ಡಿಪ್ಯೂಟಿ ಕಮಾಂಡೆಂಟ ಹಾಲಪ್ಪ ಎಸ್. ಜಿಲ್ಲಾ ಅಕಾಡೆಮಿ ಕಮಾಂಡೆಂಟ್ ಮತ್ತು ಪ್ಲಟೂನ್ ಕಮಾಂಡರ್ ಟಿ. ಶಶಿಧರ್ ಆಚಾರ್, ಸ್ಟಾಪ್ ಆಫೀಸರ್ ಹರೀಶ ಪಾಟೀಲ್ ಇನ್ನಿತರರು ಇದ್ದರು.

ಗೃಹರಕ್ಷಕದಳದ ಸದಸ್ಯರು ಹತ್ತು ದಿನಗಳ ಪರ್ಯಂತ ವಿವಿಧ ಮಾಹಿತಿಗಳನ್ನು ಸಂಪನ್ಮೂಲ ವ್ಯಕ್ತಿಗಳಿಂದ ಪಡೆಯಲಿದ್ದಾರೆಂದು ತಿಳಿಸಿದರು.
ಡಿಪ್ಯೂಟಿ ಕಮಾಂಡೆಂಟ್ ಹಾಲಪ್ಪರವರು ಸ್ವಾಗತಿಸಿದರು. ಪ್ರವೀಣ್ ಕಾರ್ಯಕ್ರವನ್ನು ನಿರೂಪಿಸಿ ಧನ್ಯವಾದವಿತ್ತರು. ಈ ಸಂದರ್ಭದಲ್ಲಿ 100 ಹೆಚ್ಚು ಶಿಬಿರಾರ್ಥಿಗಳು ಇದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.