ರಿಪ್ಪನ್‌ಪೇಟೆ : ಪರಸ್ಪರ ವಾತ್ಸಲ್ಯ ಮಯ ಜೀವನ ನಿರ್ವಹಣೆಯ ಮೂಲಕ ವಿಶ್ವಮೈತ್ರಿ ಸಹೋದರತ್ವ ವರ್ಧಿಸಲಿ, ಆ ನಿಟ್ಟಿನಲ್ಲಿ ಅಹಿಂಸಾ ಭಾವವು ಮಾನವೀಯ ಮೌಲ್ಯಗಳನ್ನು ಉದ್ದೀಪನ ಬೇಕು ಎಂದು ಹೊಂಬುಜ ಮಠದ ಪೀಠಾಧಿಕಾರಿ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಸದಾಶಯ ವ್ಯಕ್ತಪಡಿಸಿದರು.

ಅವರು ಅಮೇರಿಕಾದ ಚಿಕಾಗೋ ನಗರದಲ್ಲಿ ಜುಲೈ 03 ರಿಂದ 06ರವರೆಗೆ ಆಯೋಜಿಸಿದ್ದ ‘ವಿಶ್ವ ಜೈನಧರ್ಮ ಸಮ್ಮೇಳನ’ದಲ್ಲಿ ಭಾಗವಹಿಸಿ ಜೈನ ಧರ್ಮದ ಸಂದೇಶ ಸಾರಿದರು.

ವಿಶ್ವ ಶಾಂತಿಯನ್ನು ಬಯಸುವ ಜೈನ ಧರ್ಮದ ಉಪದೇಶಗಳು ಸರ್ವಕಾಲಕ್ಕೂ ಪ್ರಸ್ತುತ ಸೇವಾ ಮನೋಧ ರ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ನವ ಸಮಾಜದಲ್ಲಿ ಸುಖ ಸಂತಸ ಉಂಟಾಗುವುದು. ದೇಶ ದೇಶಗಳು ಅನ್ಯೋನ್ಯತೆಯಿಂದಿರಬೇಕಲ್ಲದೇ, ವೈರತ್ವ ಬೆಳೆಸಬಾರದು ಎಂದರು.

ಹಿಂದಿನಿಂದಲೂ ಹೊಂಬುಜ ಮಠದ ಪೂರ್ವ ಭಟ್ಟಾರಕರಾಗಿದ್ದ ಕೀರ್ತಿಶೇಷ ಸ್ವಸ್ತಿಶ್ರೀ ಹೇಮರತ್ನ ಸಾಗರ, ದೇವೇಂದ್ರಕೀರ್ತಿ ಭಟ್ಟಾರಕರು ಅಮೇರಿಕಾ ದೇಶದಲ್ಲಿ ಅನೇಕ ಪ್ರವಚನಗಳನ್ನು ನೀಡಿ, ಜೈನಧರ್ಮ ಪ್ರಸಾರ, ಪ್ರಭಾವನೆ ಮಾಡಿರುವುದನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಗುರು ಆಚಾರ್ಯ ಡಾ. ಲೋಕೇಶ್ ಮುನಿ, ಧರ್ಮಸ್ಥಳದ ಸುರೇಂದ್ರ ಕುಮಾರ್ ಅನಿತಾ ಸುರೇಂದ್ರ ಕುಮಾರ್ ಇದ್ದರು.


ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.