ಆನಂದಪುರ:ದಂಪತಿಗಳ ನಡುವೆ ನಡೆದ ಗಂಭೀರ ಕೌಟುಂಬಿಕ ಕಲಹ ದುರಂತದಲ್ಲಿ ಅಂತ್ಯ ಕಂಡಿದ್ದು, ಪತ್ನಿಯ ಸಾ*ವು ನಡೆದಿದೆ. ಆತ್ಮಹ*ತ್ಯೆಗೆ ಯತ್ನಿಸಿ 20 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಗುರುವಾರ ಕೊನೆಯುಸಿರೆಳೆದಿದ್ದು, ಘಟನೆಯ ಬಳಿಕ ಪತಿಯನ್ನ ಪೊಲೀಸರು ಬಂಧಿಸಿದ್ದಾರೆ
ಆಚಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಲಕ್ಕವಳ್ಳಿ ಗ್ರಾಮದ ನಿವಾಸಿ ಗಿರಿಜಾ (38) ಎಂಬವರು ಸಾ*ವಾಗಿದ್ದು, ಪತಿ ಶ್ರೀಕಾಂತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಗಿರಿಜಾ ಕಳೆದ 20 ದಿನಗಳ ಹಿಂದೆ ಮನೆಯಲ್ಲೇ ಡೀಸೆಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹ*ತ್ಯೆಗೆ ಯತ್ನಿಸಿದ್ದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಜು.17 ರಂದು ಸಾ*ವಿಗೀಡಾಗಿದ್ದಾರೆ .
ಅಂತ್ಯ ಸಂಸ್ಕಾರದ ನಂತರ, ಪತಿ ಶ್ರೀಕಾಂತ್ ಅವರನ್ನು ಆನಂದಪುರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.