ಶಿಕಾರಿಪುರ: ಶ್ರೀಗಂಧ ಕಳ್ಳರ ಬಂಧನ

Written by Koushik G K

Published on:

ಶಿಕಾರಿಪುರ ವಲಯದ (ಸಾಗರ ವಿಭಾಗ) ಕೆಂಗಟ್ಟೆ ಶ್ರೀಗಂಧ ಮೀಸಲು ಪ್ರದೇಶದಲ್ಲಿ ಮರ ಕಳ್ಳತನಕ್ಕೆ ಯತ್ನಿಸಿದ ಆರೋಪಿಗಳ ಪತ್ತೆ ಹಚ್ಚಿ, ಒಬ್ಬನನ್ನು ಬಂಧಿಸುವಲ್ಲಿ RFO ರೇವಣಸಿದ್ಧಯ್ಯ ಬಿ. ಹಿರೇಮಠ್ ಹಾಗೂ ಅವರ ತಂಡ ಯಶಸ್ವಿಯಾಗಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಶಿವಮೊಗ್ಗ ತಾಲೂಕಿನ ಇಂದಿರಾನಗರ ಮೂಲದ ಆರು ಜನರು, ಮಳೆ ಬರುವ ಸಮಯವನ್ನು ಸದುಪಯೋಗ ಮಾಡಿಕೊಂಡು, ರಾತ್ರಿ ವೇಳೆ ಬೇಲಿಯನ್ನು ಕತ್ತರಿಸಿ ಅಕ್ರಮ ಪ್ರವೇಶ ಮಾಡಿದ್ದರು. ಇವರ ಪತ್ತೆಗೆ ವಿಶೇಷವಾಗಿ ಮುಧೋಳ ನಾಯಿ ಬಳಸಿರುವುದು ಗಮನಾರ್ಹ.

ಈ ಕಾರ್ಯಾಚರಣೆ DCF ಮೋಹನಕುಮಾರ್ (ಸಾಗರ) ಮತ್ತು ACF ವಿ. ಎಸ್. ರವೀಂದ್ರನಾಯ್ಕ್ ಅವರ ಮಾರ್ಗದರ್ಶನದಲ್ಲಿ ನಡೆದಿದೆ. ಕಾರ್ಯಾಚರಣೆಯಲ್ಲಿ KFDC ನೆಡುತೋಪು ಅಧೀಕ್ಷಕ ಅಶ್ವಿನ್, DRFO ಕುಮಾರನಾಯ್ಕ್, ಪ್ರಮೋದ್, ರಂಗನಾಥ್, ಕೊಟ್ರೇಶ್, ಸಚಿನ್, ಹಾಗೂ ಗಸ್ತು ವನಪಾಲಕರಾದ ಶಿವಪ್ಪ ರಾಠೋಡ್, ಬಸವರಾಜ್, ಸಂತೋಷ್, ಸುನಿಲ್, ಅಣ್ಣಪ್ಪ ಮೊದಲಾದವರು ಪಾಲ್ಗೊಂಡಿದ್ದರು.

ಆ. 13ರಂದು ಹೊಸನಗರದಲ್ಲಿ ಮಾಮ್‌ಕೋಸ್ ಷೇರುದಾರರ ಸಭೆ

Leave a Comment