ಕಾಡಾನೆ ಹಾವಳಿಯಿಂದ ಕಂಗಾಲಾದ ರೈತರು | ಮರಿಯೊಂದಿಗೆ ಗ್ರಾಮಕ್ಕೆ ಲಗ್ಗೆ ಇಟ್ಟು ಬೆಳೆ ನಾಶ

0 535

ರಿಪ್ಪನ್‌ಪೇಟೆ: ಒಂದೆಡೆ ಮಳೆಯಿಲ್ಲದೇ ಕಂಗಾಲಾಗಿರುವ ರೈತರಿಗೆ ಮೊತ್ತೊಂದು ಕಂಟಕ ಎದುರಾಗಿದೆ. ಒಂದು ಕಡೆಯಲ್ಲಿ ಕೊಳವೆ ಬಾವಿಯ ನೀರು ಹರಿಸಿ ಭತ್ತ, ಅಡಿಕೆ, ತೆಂಗು ಇನ್ನಿತರ ಬೆಳೆ ಹಾಕಿದ ಫಸಲು ಬರುತ್ತದೋ ಇಲ್ಲವೋ ಎಂಬ ಭಯ. ಇನ್ನೊಂದು ಕಡೆಯಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ರಕ್ಷಣೆ ಮಾಡಿಕೊಳ್ಳುವುದೇ ದುಸ್ಥರವಾಗಿದೆ.

ಇಲ್ಲಿಗೆ ಸಮೀಪದ ಕೆಂಚನಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆಲವಳ್ಳಿ ಗ್ರಾಮದ ಮಜರೆ ಗ್ರಾಮಗಳಾದ ಗಾಳಿಬೈಲು ಮತ್ತು ಹೊರಬೈಲು ಮಸರೂರು ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಕಾಡಾನೆ ಮರಿಯೊಂದಿಗೆ ಕಾಣಿಸಿಕೊಂಡು ರೈತರು ಬೆಳೆದ ಭತ್ತದ ಗದ್ದೆ ಸಂಪೂರ್ಣವಾಗಿ ಕಾಲು ತುಳಿತದಿಂದಾಗಿ ನಾಶವಾಗಿದೆ.

‘ಆನೆ ನಡೆದಿದ್ದೆ ಹಾದಿ’ ಎಂಬ ಗಾದೆ ಮಾತಿನಂತೆ ಇಲ್ಲಿನ ಹೊರಬೈಲು ಗ್ರಾಮದ ರೈತರೊಬ್ಬರ ಭತ್ತದ ಗದ್ದೆಯಲ್ಲಿ ನಡೆದು ಹೋಗಿರುವ ಜಾಗ ಸಂಪೂರ್ಣವಾಗಿ ನಾಶಗೊಂಡಿದ್ದು ಇನ್ನೂ ಅಡಿಕೆ ಮತ್ತು ತೆಂಗಿನ ಗಿಡಗಳು ಸಹ ಅನೆ ಸೊಂಡಿಲಿನಿಂದ ಮುರಿದು ಹಾಕಿವೆ ಎಂದು ರೈತರು ತಮ್ಮ ನೋವನ್ನು ಮಾಧ್ಯಮದವರ ಬಳಿ ಹಂಚಿಕೊಂಡಿದ್ದು ಹೀಗೆ.

‘ಯಾರಿಗೆ ಹೇಳೊಂದು ಸ್ವಾಮಿ ನಮ್ಮ ಈ ಕಷ್ಟವನ್ನು ಒಂದು ಕಡೆ ಮಳೆಯಿಲ್ಲದೇ ಬೆಳೆ ರಕ್ಷಣೆ ಮಾಡಿಕೊಳ್ಳುವುದು, ಇನ್ನೊಂದು ಕಡೆ ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆ ಹೇಗೆ ಸ್ವಾಮಿ’ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಅರಣ್ಯಾಧಿಕಾರಿ ಕಛೇರಿ ಮುತ್ತಿಗೆಗೆ ನಿರ್ಧಾರ:
ಕಳೆದ ಎರಡು ದಿನಗಳಿಂದ ಕಾಣಿಸಿಕೊಂಡಿರುವ ಕಾಡಾನೆಗಳನ್ನು ತಕ್ಷಣ ಅರಣ್ಯ ಇಲಾಖೆಯವರು ಹಿಡಿಯದಿದ್ದರೆ ನಾವುಗಳು ಅರಣ್ಯಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕುವುದಾಗಿ ಕೆಂಚನಾಲ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ.ಎಸ್.ಉಮೇಶ್ ಎಚ್ಚರಿಕೆ ನೀಡಿದ್ದಾರೆ.

Leave A Reply

Your email address will not be published.