ಚಾಕೊಲೇಟ್ ಕೊಡಿಸುವುದಾಗಿ ಹೇಳಿ 76ರ ವೃದ್ದನಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ

0 888

ಶಿವಮೊಗ್ಗ : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ (Rape) ನಡೆದಿರುವ ಶಿವಮೊಗ್ಗ (Shivamogga) ಸಮೀಪದ ಗ್ರಾಮವೊಂದರಲ್ಲಿ (Village) ನಡೆದಿದ್ದು ಆರೋಪಿಯನ್ನು ಬಂಧಿಸಿ (Arrested) ಜೈಲಿಗೆ ಕಳುಹಿಸಲಾಗಿದೆ.

ಗ್ರಾಮದ ಸುಮಾರು 76 ವರ್ಷ ವಯಸ್ಸಿನ
ವ್ಯಕ್ತಿಯೋರ್ವ ಸುಮಾರು 10 ವರ್ಷ ವಯಸ್ಸಿನ 3ನೇ ತರಗತಿ ಬಾಲಕಿಯನ್ನು ಚಾಕೊಲೇಟ್ ಕೊಡಿಸುವುದಾಗಿ ಹೇಳಿ ಹೊಳೆ ಹತ್ತಿರ ಕರೆದುಕೊಂಡು ಹೋಗಿ ಅಲ್ಲಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ.

ನಂತರ ಮನೆಗೆ ಬಂದ ಬಾಲಕಿ ತನಗೆ ನೋವು ಆಗುತ್ತಿದೆ ಎಂದು ತಾಯಿ ಬಳಿ ಹೇಳಿಕೊಂಡಿದ್ದಾಳೆ.
ಆಹಾರದಲ್ಲಿ ವ್ಯತ್ಯಾಸ ಆಗಿದೆ ಎಂದು ಮನೆ ಮದ್ದು
ಮಾಡಿದ್ದಾರೆ. ಬಳಿಕ ರಕ್ತಸ್ರಾವದಿಂದ ನೋವು ಹೆಚ್ಚಾಗಿದ್ದರಿಂದ ಬಾಲಕಿಯನ್ನು ವಿಚಾರ ಮಾಡಿದಾಗ ನಡೆದ ಘಟನೆ ಬಗ್ಗೆ ತಿಳಿಸಿದ್ದಾಳೆ. ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರ ಹಿನ್ನಲೆಯಲ್ಲಿ ಆರೋಪಿಯನ್ನು ಬಂಧಿಸಿ ಪೋಕ್ಸೊ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Leave A Reply

Your email address will not be published.

error: Content is protected !!