Shivamogga | 6ನೇ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ನಗರ ಅಂಬ್ರಯ್ಯಮಠ ಆಯ್ಕೆ

0 162

ರಿಪ್ಪನ್‌ಪೇಟೆ: ಇದೇ ಅಕ್ಟೋಬರ್ 21-22 ಹೊಸನಗರ ತಾಲ್ಲೂಕು ಕುವೆಂಪು ವಿದ್ಯಾಲಯದ ಆವರಣದಲ್ಲಿ ನಡೆಯುವ ಶಿವಮೊಗ್ಗ ಜಿಲ್ಲಾ ಅಖಿಲ ಭಾರತ ಶರಣಸಾಹಿತ್ಯ ಪರಿಷತ್‌ನ ಶಿವಮೊಗ್ಗ ಜಿಲ್ಲೆಯ 6ನೇ ಶರಣ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ನಗರ ಹಿರಿಯ ಸಾಹಿತಿಗಳಾದ ಅಂಬ್ರಯ್ಯಮಠ ಬಿದನೂರು ನಗರ ಆಯ್ಕೆಯಾಗಿದ್ದಾರೆ.

ವ್ಯಕ್ತಿ ಪರಿಚಯ:
ಹಿರಿಯ ಸಾಹಿತಿ ಅಂಬ್ರಯ್ಯಮಠ ಇವರು ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಕೊಡಗಾನೂರಿನಲ್ಲಿ ತಂದೆ ಗಜದಂಡಯ್ಯ ಸ್ವಾಮಿ ಮತ್ತು ತಾಯಿ ಮಲ್ಲಮ್ಮ ಎಂಬುವರ ಪುತ್ರರಾಗಿ ಜನಿಸಿ ಪ್ರಥಮ ವಿದ್ಯಾಭ್ಯಾಸವನ್ನು ತಾಯಿ ಮಲ್ಲಮ್ಮ ಅಜ್ಜ ವೇದಮೂರ್ತಿ ಗುರುಲಿಂಗಯ್ಯ ಶಾಸ್ತ್ರಿಗಳು ನಂತರದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಕೊಡಗಾನೂರಿನಲ್ಲಿ ಪ್ರೌಢಶಿಕ್ಷಣವನ್ನು ಕಲಬುರ್ಗಿ ಜಿಲ್ಲೆಯ ಸುರಪುರ ತಾಲ್ಲೂಕಿನ ವಜ್ಜಲದಲ್ಲಿ ಕಾಲೇಜ್ ವ್ಯಾಸಂಗವನ್ನು ಗುಲ್ಬರ್ಗ ಧಾರವಾಡ ಮೈಸೂರುನಲ್ಲಿ ರಾಜ್ನೀತಿ ಶಾಸ್ತ್ರದಲ್ಲಿ ಹಾಗೂ ಕನ್ನಡ ಶಾಸ್ತ್ರಿಯ ಭಾಷೆಯಲ್ಲೆ ಸ್ನಾತಕೋತ್ತರ ಪದವಿ ಪತ್ರಿಕೋದ್ಯದಲ್ಲಿ ಡಿಪ್ಲೋಮಾ ನಂತರ ಉದ್ಯೋಗವನ್ನು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿ ಕಛೇರಿ ವ್ಯವಸ್ಥಾಪಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ 2013 ರಲ್ಲಿ ಸರ್ಕಾರಿ ನೌಕರಿಯಿಂದ ನಿವೃತ್ತಿ ಹೊಂದಿ ನಿವೃತ್ತಿಯ ಬದುಕಿನಲ್ಲಿ ಪತ್ರಕರ್ತನಾಗಿ, ಅಂಕಣಕಾರನಾಗಿ, ಲೇಖಕನಾಗಿ ಪ್ರಸಿದ್ಧ ಪತ್ರಿಕೆಗಳಲ್ಲಿ ಕಥೆಗಾರನಾಗಿ ಕಾದಂಬರಿಕಾರನಾಗಿ ಇತಿಹಾಸ ಸಂಶೋಧಕನಾಗಿ ಗುರುತಿಸಲ್ಲಟ್ಟಿದ್ದಾರೆ.
ಆಹಲ್ಯ ಅಂತರಂಗ ಹಾಗೂ ಅಂಬೆ ಕಾದಂಬರಿಗಳು ತರಂಗ ವಾರಪತ್ರಿಕೆಯಲ್ಲಿ ಜನಪ್ರಯ ಧಾರವಾಹಿಯಾಗಿ ಪ್ರಕಟಗೊಂಡಿವೆ. ಐತಿಹಾಸಿಕ ಹಾಗೂ ಸಾಮಾಜಿಕ ಕಥೆಗಳು ಸಂಶೋಧನಾತ್ಮಕ ವೈಚಾರಿಕ ಹಾಗೂ ರಾಜಕೀಯ ಲೇಖನಗಳು ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಉದಯವಾಣಿ, ಕರ್ಮವೀರ, ಸುಧಾ ಇನ್ನಿತರ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಪ್ರಕಟಿತ ಕೃತಿಗಳು:
ಒಲ್ಕೆೈಕೆ, ನಿಂತನೀರ ಕಲಕ ಬೇಡಿ, ಬಿದನೂರು ನಗರದ ಸಂಕ್ಷಿಪ್ತ ಇತಿಹಾಸ, ಹೊಸಂಗಡಿಯ ಮೇಲೆ ಹೊಸಬೆಳಕು, ಪಂಚಮುಖಿ ಆಂಜನೇಯ ಹಾಗೂ ಬಿದನೂರು ದರ್ಶನ,ಅಹಲ್ಯ ಅಂತರಂಗ, ಅಂಬೆ, ಬಿದನೂರು ರಾಣಿ ವೀರಮ್ಮಾಜಿ, ಕೆಳದಿ ಕುಲ ತಿಲಕ ಹಿರಿಯ ವೆಂಟಪ್ಪನಾಯಕ, ಪರಮನೀಚನ ಹೆಜ್ಜೆ ಗುರುತು, ಬೆಳ್ಳಿ ಬೆಳಕಿಂಡಿ, ಬಿದನೂರು ನಗರದ ಅವಶೇಷಗಳು, ಚಂಪಕ, ಗತರಾಜಧಾನಿಯ ಸುತ್ತಮುತ್ತು, ಶ್ರೀವೇದವ್ಯಾಸ ಬಸಿರನೋವಲ್ಲಿ ವಸರಿತು ಜೀವಜಲ, ಭಾಮತಿ, ಬ್ರಹ್ಮೋತ್ತರ ಖಂಡ, ಅಖಂಡೇಶ್ವರ ಹಾಗೂ ಸರ್ವಜ್ಞ ವಚನಗಳು ಯೇಸು ನಡೆದಾಡಿದ ನಾಡಲ್ಲಿ, ಅಶ್ವಘೋಷ ಬಹುಮುಖೀ, ಚಾಲುಕ್ಯ ಕುಳೇಶ್ವರಿ ಅಕ್ಕದೇವಿ, ಇತಿಹಾಸ ಮುಂತಾದವು, ಒಂದೊಮ್ಮೆ ಜಾರಿದಾಂಗೆ ಕಥೆಯು ಇಂಗ್ಲಿಷ್ ಹಾಗೂ ಹಿಂದಿಗೆ ಭಾಷಾಂತರಗೊಂಡಿದೆ. ಭಾನುಮತಿ ಕಥೆಯು ಪಂಜಾಬಿ ಭಾಷೆಗೆ ಭಾಷಾಂತರಗೊಂಡಿದ್ದು ಇದು ನಾಟಕವಾಗಿ ರಾಷ್ಟ್ರೀಯ ಮಟ್ಟದಲ್ಲಿ ಬಹುಮಾನ ಪಡೆದಿದೆ.

ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ ಅವರಿಂದ ಜಿ.ಆರ್.ರೇವಯ್ಯ ದತ್ತಿ ಪ್ರಶಸ್ತಿ, ಕರ್ನಾಟಕ ವಿದ್ಯತ್ತ ನಿಗಮವು ನೀಡಿದ ಸಾಹಿತ್ಯ ಪ್ರಶಸ್ತಿ,ನಾದವೈಭವಂ ಸಂಗೀತಶಿಕ್ಷಣ ಸಂಸ್ಥೆ ನಾದವೈಭವಂ, ಜೀವಮಾನ ಸಾಧಕ ರಾಷ್ಟ್ರೀಯ ಪ್ರಶಸ್ತಿ,ರಾಷ್ಟ್ರೋತ್ಥಾನ ಬಳಗದಿಂದ ಸಾಹಿತ್ಯ ರತ್ನ ಹೀಗೆ ಹತ್ತು ಹಲವು ಸಂಸ್ಥೆಗಳವರಿಂದ ಕೊಡ ಮಾಡುವ ಪ್ರಶಸ್ತಿಗಳನ್ನು ಪಡೆದಿರುವ ಹಿರಿಯ ಸಾಹಿತಿ ಅಂಬ್ರಯ್ಯಮಠವರನ್ನು ಹೊಸನಗರ ತಾಲ್ಲೂಕ್ ಕನ್ನಡ ಸಾಹಿತ್ಯ ಪರಿಷತ್ ಇವರ ಸಾರಸ್ವತ ಸೇವೆಯನ್ನು ಗುರುತಿಸಿ 7ನೇ ತಾಲ್ಲೂಕ್ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನವನ್ನು ನೀಡಿ ಸನ್ಮಾನಿಸಿದ್ದು ಇದರ ಬೆನ್ನಲೇ ಇದೇ ಅಕ್ಟೋಬರ್ 21 ಮತ್ತು 22 ರಂದು ಹೊಸನಗರ ಕುವೆಂಪು ವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿರುವ ಶಿವಮೊಗ್ಗ ಜಿಲ್ಲಾ ಅಖಿಲಭಾರತ ಶರಣಸಾಹಿತ್ಯ ಪರಿಷತ್‌ನ ಶಿವಮೊಗ್ಗ ಜಿಲ್ಲೆಯ 6ನೇ ಶರಣ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ನಗರದ ಹಿರಿಯ ಸಾಹಿತಿಗಳಾದ ಅಂಬ್ರಯ್ಯ ಮಠರವರನ್ನು ಅವರ ಅಭಿಮಾನಿ ಬಳಗ ಅಭಿನಂದಿಸಿದೆ.

Leave A Reply

Your email address will not be published.

error: Content is protected !!