ಆಗಸ್ಟ್‌ 24,25 : ನಟಮಿತ್ರರು ತಂಡದಿಂದ “ಆ ಊರು ಈ ಊರು” ನಾಟಕ

Written by Koushik G K

Published on:

ತೀರ್ಥಹಳ್ಳಿ: ನಟಮಿತ್ರರು ರಂಗ ತಂಡದಿಂದ ಆಗಸ್ಟ್   24 ಮತ್ತು 25 ರಂದು ಪಟ್ಟಣದ ಗೋಪಾಲಗೌಡ ರಂಗ ಮಂದಿರದಲ್ಲಿ ಸಂಜೆ 6:30 ಕ್ಕೆ “ಆ ಊರು ಈ ಊರು” ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ನಟಮಿತ್ರರು ತಂಡದ ಅಧ್ಯಕ್ಷ ಸಂದೇಶ್ ಜವಳಿ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

 ಪಟ್ಟಣದ ಗೋಪಾಲಗೌಡ ರಂಗ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ನಾಟಕದ ವಿಶೇಷವೆಂದರೆ 3 ವರ್ಷದ ಮಗುವಿನಿಂದ ಹಿಡಿದು 73 ವರ್ಷದವರೆಗಿನ ಎಲ್ಲರೂ ಇದ್ದರೆ, ನಾಟಕ ವೀಕ್ಷಣೆಗೆ ಕೇವಲ 300 ಜನರಿಗೆ ಮಾತ್ರ ಅವಕಾಶವಿರುತ್ತದೆ, ನಾಟಕದ ನಂತರ ಪ್ರೇಕ್ಷಕರ ಜೊತೆ ಸಂವಾದ ಕಾರ್ಯಕ್ರಮ ನಡೆಸಲಿದ್ದೇವೆ ಎಂದರು.

ನಾಟಕ ನಿರ್ದೇಶಕರಾದ ಹುಲುಗಪ್ಪ ಕಟ್ಟಿಮನಿ ಮಾತನಾಡಿ ಜಿ.ಬಿ.ಜೋಶಿಯವರು 1934 ರಲ್ಲಿ ಬಾಗಲಕೋಟೆಯಲ್ಲಿ ನಡೆದ ನೈಜ ಘಟನೆ ಆಧಾರಿಸಿ ಬರೆದ ಮೂಕ ಬಲಿ ಮುಖ್ಯ ನಾಟಕದ ಒಂದು ಭಾಗ ಆ ಊರು, ಈ ಊರು ನಾಟಕ ವಾಗಿದೆ ಎಂದರು.

ಈ ನಾಟಕ ಹಾಲಳ್ಳಿ ಹಾಗೂ ನಾಗರಕೋಟೆ ಅನ್ನೋ ಎರಡು ಊರುಗಳ ನಡುವೆ ಎರಡು ಬ್ರಾಹ್ಮಣ ಮನೆತನಗಳ ನಡುವೆ ನಡೆಯುವ ಸಾಂಸಾರಿಕ ಕಥನವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಾಟಕದ ನಿರ್ದೇಶಕರಾದ ಹುಲುಗಪ್ಪ ಕಟ್ಟಿಮನಿ, ಸಹ ನಿರ್ದೇಶಕ ಶಿವಕುಮಾ‌ರ್, ಕಲಾವಿದರಾದ ಆಶಾ ಡೇನಿಯಲ್, ಸುಬ್ರಹ್ಮಣ್ಯ, ನಿತಿನ್ ಹೆಗಡೆ, ನಿರಂಜನ್, ಮನೋಜ್ ಜಾದವ್, ಅದಿತ್ಯ , ನಿರೀಕ್ಷಾ ಶೆಟ್ಟಿ,ಚೇತನ್, ಕಾರ್ತೀಕ್ ಕುಮಾರ್ ಮುಂತಾದದವರಿದ್ದರು.

Leave a Comment