ಹೊಸನಗರ ; ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಾಫರವರು 1500 ವರ್ಷಗಳ ಹಿಂದೆ ಬಡವರ ಬಗ್ಗೆ ಅನುಕಂಪ ಕಾಳಜಿ ವಹಿಸುತ್ತಿದ್ದು ಬಡವರು ಹಾಗೂ ರೋಗಿಗಳನ್ನು ಕನಿಕರವುಳ್ಳವರಾಗಿ ನೋಡಿಕೊಳ್ಳುತ್ತಿದ್ದರು ಎಂದು ಮುಸ್ಲಿಂ ಧರ್ಮ ಗ್ರಂಥಗಳಲ್ಲಿ ಹೇಳಲಾಗಿದ್ದು ಅವರ 1500ನೇ ಜನ್ಮ ದಿನಾಚರಣೆಯ ಪ್ರಯುಕ್ತ ರೋಗಿಗಳೊಂದಿಗೆ ನಾವೆಲ್ಲರೂ ಸೇರಿ ಜನ್ಮ ದಿನಾಚರಣೆ ಆಚರಣೆ ಮಾಡುತ್ತಿದ್ದೇವೆ ಎಂದು ಎಸ್ವೈಎಸ್ ಹೊಸನಗರ ಝೋನ್ ಕಾರ್ಯದರ್ಶಿ ಯಾಸರ್ ಹೇಳಿದರು.
ಹೊಸನಗರ ಎಸ್ವೈಎಸ್ ಝೋನ್ ವತಿಯಿಂದ ಹೊಸನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳ ಹಾಗೂ ಹೊರ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿ ಮಾತನಾಡಿದರು.
ಈ ಜನ್ಮ ದಿನಾಚರಣೆಯನ್ನು ಯಾವುದೇ ಧರ್ಮ ಬೇಧವಿಲ್ಲದೇ ನಾವೆಲ್ಲರೂ ಹೊಸನಗರ ತಾಲ್ಲೂಕಿನಲ್ಲಿ ಅಣ್ಣ-ತಮ್ಮಂದಿರಂತೆ ಎಲ್ಲ ಹಬ್ಬವನ್ನು ಒಟ್ಟಾಗಿ ಆಚರಸಿಕೊಳ್ಳುವುದರ ಜೊತೆಗೆ ದೇಶಕ್ಕೆ ಮಾದರಿಯಾಗಿ ಬಾಳುತ್ತಿದ್ದೇವೆ ಆಸ್ಪತ್ರೆಯಲ್ಲಿರುವ ಎಲ್ಲ ರೋಗಿಗಳು ಶೀಘ್ರ ಗುಣಮುಖರಾಗಿ ತಮ್ಮ ಕುಟುಂಬವನ್ನು ಸೇರಿಕೊಳ್ಳಲಿ ಎಂದು ಆಸ್ಪತ್ರೆಯ ಸಿಬ್ಬಂದಿಗಳಿಗೆ ಹಾಗೂ ಬಂದಿರುವಂತಹ ಎಲ್ಲರಿಗೆ ಸಿಹಿ ಹಂಚಿ ಸಂಭ್ರಮದಿಂದ ಹಬ್ಬವನ್ನು ಆಚರಿಸಿಸೋಣ ಎಂದರು.
ಈ ಕಾರ್ಯಕ್ರಮದಲ್ಲಿ ಬದ್ರಿಯಾ ಜುಮ್ಮ ಮಸೀದಿಯ ಧರ್ಮಗುರುಗಳಾದ ಅನ್ವರ್ ಜಾಕಿ ಹಿಕಮಿ, ಎಸ್.ವೈಎಸ್ ದವಾ ಕಾರ್ಯದರ್ಶಿ ಬದುರುದ್ದೀನ್ ಜೋಹರಿ, ಬದ್ರಿಯಾ ಜುಮ್ಮ ಮಸೀದಿಯ ಅಧ್ಯಕ್ಷರಾದ ಇಸಾಕ್, ಕಾರ್ಯದರ್ಶಿ ನಾಸಿರ್, ಕಮಿಟಿಯ ಬಾಂಧವರಾದ ಸೈಯದಾಲಿ, ಸೈಯದ್, ಇಸ್ಮಾಯಿಲ್ ಕಬ್ಬಿನಮಕ್ಕಿ ಅಬ್ದುಲ್ ರಹೂಫ್, ಮೈಯದ್ದಿ, ಅಪ್ಸರ್, ಎಸ್ವೈಎಸ್ ಸಂಘಟನೆಯ ನಾಯಕರಾದ ಮಹಮ್ಮದ್ ಯಾಸಿರ್, ಸಿದ್ದೀಕ್, ಅಶ್ರಫ್ ಜಯನಗರ, ಆಸ್ವತ್ರೆಯ ವೈದ್ಯಾಧಿಕಾರಿ ಡಾ. ಲಿಂಗರಾಜ್, ಗಜೇಂದ್ರ, ಸಿಬ್ಬಂದಿಗಳು ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.