ಸೆಪ್ಟೆಂಬರ್ 13ರಂದು ಶಿವಮೊಗ್ಗದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

Written by Koushik G K

Published on:

ಶಿವಮೊಗ್ಗ: ನಗರದ ವಿಭಿನ್ನ ಭಾಗಗಳಲ್ಲಿ ವಿದ್ಯುತ್ ಲೈನ್ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 13ರಂದು ಅನೇಕ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

WhatsApp Group Join Now
Telegram Group Join Now
Instagram Group Join Now

ಶಂಕರಮಠ ಮಾರ್ಗದಲ್ಲಿ 11 ಕೆವಿ ಲೈನ್ ಕಾಮಗಾರಿ

📢 Stay Updated! Join our WhatsApp Channel Now →

ನಗರ ಉಪವಿಭಾಗ–1, ಘಟಕ–1 ವ್ಯಾಪ್ತಿಯ ಶಂಕರಮಠ ಮಾರ್ಗದಲ್ಲಿ 11 ಕೆವಿ ವಿದ್ಯುತ್ ಮಾರ್ಗದ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಇದರ ಹಿನ್ನೆಲೆಯಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ:

  • ವಿದ್ಯಾನಗರ
  • ಶಾಂತಮ್ಮ ಲೇಔಟ್
  • ಚಿಕ್ಕಲ್
  • ಸಿದ್ದೇಶ್ವರನಗರ
  • ಇಂದಿರಾ ಬಡಾವಣೆ
  • ಗುರುಗಪುರ
  • ಮಂಜುನಾಥ ಬಡಾವಣೆ
  • ವೆಂಕಟೇಶನಗರ
  • ಪುರಲೆ
  • ಅಪೂರ್ವ ಲೇಔಟ್
  • ಬಿ.ಹೆಚ್. ರಸ್ತೆ ಮತ್ತು ಮೀನಾಕ್ಷಿ ಭವನ ಸುತ್ತಮುತ್ತ
  • ಬಾಪೂಜಿನಗರ
  • ಟಿ.ಜಿ.ಎನ್. ಲೇಔಟ್
  • ಜೋಸೆಫ್ ನಗರ
  • ಚರ್ಚ್ ಕಾಂಪೌಂಡ್
  • ಕಾನ್ವೆಂಟ್ ರಸ್ತೆ
  • ಲೂರ್ದ್ ನಗರ
  • ಸರ್. ಎಂ.ವಿ. ರಸ್ತೆ
  • ವೀರಭದ್ರೇಶ್ವರ ಚಿತ್ರಮಂದಿರ ಸುತ್ತಮುತ್ತ
  • ಡಿವಿ.ಎಸ್. ಹಾಗೂ ಎನ್‌ಇಎಸ್ ಸಂಸ್ಥೆಗಳು
  • ಕುವೆಂಪು ರಂಗಮಂದಿರ
  • ಗಾಂಧಿ ಪಾರ್ಕ್
  • ಮಹಾನಗರ ಪಾಲಿಕೆ ಕಚೇರಿ
  • ನೆಹರು ರಸ್ತೆ
  • ಪಾರ್ಕ್ ಬಡಾವಣೆ
  • ದುರ್ಗಿಗುಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು

ಊರುಗಡೂರು 11 ಕೆವಿ ಮಾರ್ಗ ಕಾಮಗಾರಿ

ಅದೇ ದಿನ ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಊರುಗಡೂರು 11 ಕೆವಿ ಮಾರ್ಗದಲ್ಲಿ ಕಾಮಗಾರಿ ನಡೆಯಲಿದ್ದು, ಈ ಅವಧಿಯಲ್ಲಿ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ:

  • ವಾದಿ ಎ ಹುದಾ
  • ಮೆಹಬೂಬ್ ನಗರ
  • ಮದಾರಿಪಾಳ್ಯ
  • ರತ್ನಮ್ಮ ಲೇಔಟ್
  • ಸೂಳೆಬೈಲು
  • ನಿಸರ್ಗ ಲೇಔಟ್
  • ಬೈಪಾಸ್ ರಸ್ತೆ
  • ಇಂದಿರಾನಗರ
  • ಮಳಲಿಕೊಪ್ಪ
  • ಪುಟ್ಟಪ್ಪ ಕ್ಯಾಂಪ್
  • ಕ್ರಷರ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು

ಮೆಸ್ಕಾಂದ ಮನವಿ

ನಿಗದಿತ ಸಮಯದಲ್ಲಿ ವಿದ್ಯುತ್ ವ್ಯತ್ಯಯವಾಗಲಿರುವುದರಿಂದ ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ವಿದ್ಯುತ್ ಸರಬರಾಜು ಪುನಃ ಪ್ರಾರಂಭವಾಗಲಿದೆ ಎಂದು ತಿಳಿಸಲಾಗಿದೆ.

ಕೊಪ್ಪಳ ಜಿಲ್ಲೆಯ ಅಧ್ಯಯನ ತಂಡದಿಂದ ನೀರೇರಿ ಶಾಲೆ ಭೇಟಿ

Leave a Comment