ಶಿವಮೊಗ್ಗ:ಮಲೆನಾಡು ಜನತೆಗೆ ಸಂತಸದ ಸುದ್ದಿ. ಇದೀಗ ಬೆಂಗಳೂರಿನಿಂದ ಶಿವಮೊಗ್ಗದ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣ (RQY) ಗೆ ಇಂಡಿಗೋ ಕಂಪನಿಯ ವಿಮಾನ ಹಾರಾಟಗಳು ಪ್ರತಿ ದಿನ ಲಭ್ಯವಾಗಲಿವೆ. ಸೆಪ್ಟೆಂಬರ್ 21ರಿಂದ ಆರಂಭವಾಗುವ ಈ ಸೇವೆ, ಹಿಂದೆ ಇದ್ದಂತೆ ಪರ್ಯಾಯ ದಿನಗಳಲ್ಲಿ ಅಲ್ಲದೇ ಪ್ರತಿದಿನ ಲಭ್ಯವಿರುವುದು ವಿಶೇಷ.
ಹಾರಾಟದ ವೇಳಾಪಟ್ಟಿ
✈️ ಬೆಂಗಳೂರಿನಿಂದ ಶಿವಮೊಗ್ಗಕ್ಕೆ (6E 7731): ಬೆಳಿಗ್ಗೆ 9:35 ಕ್ಕೆ ಹೊರಟು, 10:45 ಕ್ಕೆ ಆಗಮನೆ
✈️ ಶಿವಮೊಗ್ಗದಿಂದ ಬೆಂಗಳೂರಿಗೆ (6E 7732): ಬೆಳಿಗ್ಗೆ 11:05 ಕ್ಕೆ ಹೊರಟು, 12:05 ಕ್ಕೆ ಆಗಮನೆ
ಮಲೆನಾಡಿನ ಅಭಿವೃದ್ಧಿಗೆ ಬಲ
ಈ ಹೊಸ ನಿರ್ಧಾರವು ಮಲೆನಾಡು ಪ್ರದೇಶದ ಸಂಪರ್ಕತೆ, ಆರ್ಥಿಕ ಚಟುವಟಿಕೆ, ಪ್ರವಾಸೋದ್ಯಮ ಹಾಗೂ ಉದ್ಯಮಗಳಿಗೆ ಮಹತ್ತರ ಬಲ ನೀಡಲಿದೆ. ಪ್ರತಿದಿನ ವಿಮಾನ ಸಂಚಾರ ಇರುವುದರಿಂದ ವಿದ್ಯಾರ್ಥಿಗಳು, ಉದ್ಯೋಗಸ್ಥರು, ಪ್ರವಾಸಿಗರು ಹಾಗೂ ವ್ಯಾಪಾರಿಗಳಿಗೆ ಹೆಚ್ಚು ಅನುಕೂಲವಾಗಲಿದೆ.
ಈ ಸೇವೆ ಸಾಧ್ಯವಾಗಲು ಮುಂದಾಗಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ಮೋಹನ್ ನಾಯ್ಡು, ಇಂಡಿಗೋ ಸಂಸ್ಥೆ ಹಾಗೂ ಭಾರತ ಸರ್ಕಾರಕ್ಕೆ ಸ್ಥಳೀಯರು ಕೃತಜ್ಞತೆ ಸಲ್ಲಿಸಿದ್ದಾರೆ. ಕರ್ನಾಟಕದ ಒಳನಾಡಿನಲ್ಲಿ ವಿಮಾನ ಸಂಚಾರವನ್ನು ಬಲಪಡಿಸುವಲ್ಲಿ ಇದು ಮಹತ್ತರ ಹೆಜ್ಜೆಯಾಗಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದ್ದಾರೆ .
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ DVOR ಅಳವಡಿಕೆ: 6.50 ಕೋಟಿ ರೂ.ಗೆ ಸರ್ಕಾರದ ಅನುಮೋದನೆ
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650