ಹೊಸನಗರ : ತೀರ್ಥಹಳ್ಳಿಯ ಮಂಜುಶ್ರೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಾಜ್ಯ ಮಟ್ಟದ ಓಪನ್ ರಾಪಿಟ್ ಚೆಸ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಮಂಜುಶ್ರೀ ಟ್ರಸ್ಟ್ ಅಧ್ಯಕ್ಷ ಹಾಗೂ ನಿವೃತ್ತ ಎಸಿಎಫ್ ಕೆ.ಎಸ್ ಮಂಜುನಾಥ್ ತಿಳಿಸಿದರು.
ಪಟ್ಟಣದ ಶ್ರೀರಾಮಚಂದ್ರ ಸಭಾಭವನದ ಆವರಣದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ, ಮಂಜುಶ್ರೀ ಚಾರಿಟೇಬಲ್ ಟ್ರಸ್ಟ್ ತನ್ನದೇ ಆದ ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮದಡಿಯಲ್ಲಿ ತೀರ್ಥಹಳ್ಳಿಯ ಗಾಯತ್ರಿ ಮಂದಿರದಲ್ಲಿ ರಾಜ್ಯ ಮಟ್ಟದ ಓಪನ್ ಚೆಸ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದ್ದು, ಈ ಕಾರ್ಯಕ್ರಮದ ಉದ್ಘಾಟನೆಯನ್ನು ತೀರ್ಥಹಳ್ಳಿಯ ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸಲಿದ್ದು ಇಂಟರ್ ನ್ಯಾಶನಲ್ ಚೆಸ್ ಆಟಗಾರ ಮತ್ತು ಏಕಲವ್ಯ ಗ್ರಾಂಡ್ ಮಾಸ್ಟರ್ ಸ್ಟ್ಯಾನಿ ಮತ್ತು ಟೂರ್ನಿಮೆಂಟ್ ಡೈರೆಕ್ಟರ್ ಡಾ. ಋತ್ವಿಕ್ ಹಾಗೂ ಕೃಷ್ಣ ಉಡುಪ ಅಧಿಕೃತ ಪಾನ್‌ಗಳನ್ನು ನಡೆಸುವ ಮೂಲಕ ಆಟಕ್ಕೆ ಚಾಲನೆ ನೀಡಲಿದ್ದಾರೆ.
ಮುಖ್ಯ ಅತಿಥಿಯಾಗಿ ತೀರ್ಥಹಳ್ಳಿ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ತುಬ್ರಮನೆ ಚಂದ್ರಶೇಖರ್, ಐ.ಎಪ್.ಎಸ್ ಉಪ ಅರಣ್ಯ ಸಂರಕ್ಷಣಾದಿಕಾರಿಗಳು ಹಾಗೂ ನಿರ್ದೇಶಕ ಅರಣ್ಯ ವಿಬಾಗದ ಎಂ.ಪಿ.ಎಂ. ಭದ್ರಾವತಿಯ ಶಿವಶಂಕರ್, ವಿಶ್ವ ರಾಮಕ್ಷತ್ರೀಯ ಸಂಘದ ಅಧ್ಯಕ್ಷ ಶಶಿಧರ್ ನಾಯ್ಕ್, ಇವರು ಆಗಮಿಸಲಿದ್ದಾರೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜುಶ್ರೀ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಮಂಜುನಾಥ್ ಕೆ.ಎನ್. ಇವರು ವಹಿಸಲಿದ್ದಾರೆ. ಟ್ರಸ್ಟ್‌ನ ಕಾರ್ಯದರ್ಶಿ ತಾಲ್ಲೂಕು ಪ್ರೌಢ ಶಾಲೆಯ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಇವರು ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳುತ್ತಾರೆ ಸೆ. 28ರಂದು ಚೆಸ್ ಸ್ಪರ್ದೆ ಮುಗಿದ ನಂತರ 1 ಗಂಟೆಯ ಜನಪದ ಹಾಗೂ ಹಳ್ಳಿ ಸೊಗಡಿನ ಡೊಳ್ಳು ಕುಣಿತ ಕೋಲಾಟ ಹಾಗೂ ಹಿಂದಿನ ರಾಜರ ಕಾಲದ ಪರಂಪರೆ ನೆನಪಿಸುವಂಥಹ ಮನರಂಜನೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅನಂತರ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಚೆಸ್ ಆಟಕ್ಕಾಗಿ ಸೇವೆ ಸಲ್ಲಿಸಿರುವ ಅಬ್ಬಾಸ್ ಕೋಣಂದೂರು, ಚಂದ್ರಕಾಂತ್ ಸರ್ಜಾ, ನಾಗರಾಜ್ ಶೆಟ್ಟಿಯನ್ನು ಸನ್ಮಾನಿಸಲಿದ್ದಾರೆ. ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ ತಾಲ್ಲೂಕು ಮಟ್ಟದಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದ ಎಲ್ಲ ಚೆಸ್ ಆಟಗಾರರನ್ನು ಸನ್ಮಾನಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ಪಟ್ಟಣ ಪಂಚಾಯತಿ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಮುಖ್ಯ ಅತಿಥಿಯಾಗಿರುತ್ತಾರೆ ರಾಮಕೃಷ್ಣ ಬಿಜೂರು, ಶ್ರೀಧರ ಮೂಡಬಿದರೆ, ಚಂದ್ರಶೇಖರ ಕೋಟೆಶ್ವರ, ಪ್ರಸಸ್ತಿ ವಿತರಣೆಯಲ್ಲಿ ಸಹಾಯ ಹಸ್ತ ನೀಡಲಿದ್ದಾರೆ.
ರಾಜ್ಯ ಮಟ್ಟದ ಚೆಸ್ ಪಂದ್ಯಾವತಿ ನಡೆಸಲು ಎಲ್‌ಎನ್‌ಆರ್ ಉಮೆಶ್ ಭದ್ರಾವತಿ, ಮುಖ್ಯ ತೀರ್ಪುಗಾರರಾದ ಪ್ರಾಣೇಶ್ ಯಾದವ್, ಸಚಿನ್, ರಾಜ್ಯ ಸಮಿತಿ, ವಿಲ್ಸನ್ ತರಬೇತುದಾರ ಉಪಸ್ಥಿತರಿರುತ್ತಾರೆ ಎಂದು ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ತಿಳಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.