ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 90 ಹೊಸ ‘ಸ್ವದೇಶಿ 4G’ ಟವರ್‌ಗಳ ಉದ್ಘಾಟನೆ

Written by Koushik G K

Updated on:

ಶಿವಮೊಗ್ಗ:ದೇಶೀಯವಾಗಿ ಅಭಿವೃದ್ಧಿಪಡಿಸಿದ ‘ಸ್ವದೇಶಿ 4ಜಿ’ ನೆಟ್‌ವರ್ಕ್‌ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದು, ಇದರ ಭಾಗವಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 90 ಹೊಸ ಬಿಎಸ್‌ಎನ್‌ಎಲ್ ಮೊಬೈಲ್‌ ಟವರ್‌ಗಳು ಸ್ಥಾಪನೆಯಾಗಿವೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಶನಿವಾರ ಒಡಿಶಾದ ಝಾರ್ಸುಗಢದಲ್ಲಿ ನಡೆದ ಭವ್ಯ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ 97,500 ಹೊಸ ಮೊಬೈಲ್‌ ಟವರ್‌ಗಳನ್ನು ಉದ್ಘಾಟಿಸಿದರು. ಇದರಲ್ಲಿ 92,600 ಟವರ್‌ಗಳು 4ಜಿ ನೆಟ್‌ವರ್ಕ್‌ಗೆ ಸೇರಿದ್ದು, ಸುಮಾರು 37 ಸಾವಿರ ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಜಾರಿಯಾಗಿದೆ.

ತಂತ್ರಜ್ಞಾನ ಮತ್ತು ಪ್ರಯೋಜನಗಳು

ಹೊಸ 4ಜಿ ಟವರ್‌ಗಳನ್ನು ಕ್ಲೌಡ್‌ ಆಧಾರಿತ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದ್ದು, ಭವಿಷ್ಯದಲ್ಲಿ 5ಜಿ ಸೇವೆಗೆ ಸರಾಗವಾಗಿ ಅಪ್‌ಗ್ರೇಡ್‌ ಮಾಡುವ ಸಾಮರ್ಥ್ಯ ಹೊಂದಿವೆ. ಸೌರಶಕ್ತಿ ಚಾಲಿತ ಈ ಸೌಲಭ್ಯಗಳು ಭಾರತದಲ್ಲಿ ಅತಿದೊಡ್ಡ ಹಸಿರು ಟೆಲಿಕಾಂ ಸೈಟ್‌ಗಳ ಸಮೂಹವಾಗಿ ರೂಪುಗೊಂಡಿವೆ.

ದೇಶದಾದ್ಯಂತ ಮೊಬೈಲ್‌ ನೆಟ್‌ವರ್ಕ್ ಇಲ್ಲದ 26,700ಕ್ಕೂ ಹೆಚ್ಚು ಹಳ್ಳಿಗಳಿಗೆ ಈಗ ದೂರಸಂಪರ್ಕ ಸೌಲಭ್ಯ ಒದಗಿಸಲಾಗಿದ್ದು, ಸುಮಾರು 20 ಲಕ್ಷಕ್ಕೂ ಹೆಚ್ಚು ಹೊಸ ಚಂದಾದಾರರು ಇದರ ಪ್ರಯೋಜನ ಪಡೆಯಲಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ವಿಶೇಷವಾಗಿ ಪಶ್ಚಿಮಘಟ್ಟದ ಕುಗ್ರಾಮಗಳಿಗೆ ಇದು ಬಹುಮುಖ್ಯ ಅನುಕೂಲವಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.

ತಾಲೂಕುವಾರು 4ಜಿ ಸ್ಯಾಚುರೇಶನ್ ಟವರ್‌ಗಳು

  • ಹೊಸನಗರ : 14
  • ಸಾಗರ : 26
  • ತೀರ್ಥಹಳ್ಳಿ : 16
  • ಶಿವಮೊಗ್ಗ : 05
  • ಶಿಕಾರಿಪುರ : 04
  • ಸೊರಬ : 01
  • ಭದ್ರಾವತಿ : 01
  • ಬೈಂದೂರು: 23
  • ಒಟ್ಟು : 90

ದೇಶೀಯ ತಂತ್ರಜ್ಞಾನದಲ್ಲಿ ಮಹತ್ವದ ಹೆಜ್ಜೆ

ಬಿಎಸ್‌ಎನ್‌ಎಲ್‌ ವತಿಯಿಂದ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಈ ಸ್ವದೇಶಿ 4ಜಿ ನೆಟ್‌ವರ್ಕ್‌ ಭಾರತವನ್ನು ಡೆನ್ಮಾರ್ಕ್, ಸ್ವೀಡನ್‌, ದಕ್ಷಿಣ ಕೊರಿಯಾ ಮತ್ತು ಚೀನಾ ಮಾದರಿಯಂತೆ ತನ್ನದೇ ದೂರಸಂಪರ್ಕ ಸಾಧನಗಳನ್ನು ತಯಾರಿಸಬಲ್ಲ ರಾಷ್ಟ್ರಗಳ ಸಾಲಿಗೆ ಸೇರಿಸಿದೆ.

ಈ ಸೇವೆಗಳು ಆನ್‌ಲೈನ್‌ ಶಿಕ್ಷಣ, ಇ-ಆಡಳಿತ, ಡಿಜಿಟಲ್‌ ಪಾವತಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ಸಹಕಾರಿಯಾಗಲಿವೆ. ‘‘ಸ್ವದೇಶಿ 4ಜಿ ಯೋಜನೆ ಆತ್ಮನಿರ್ಭರ ಭಾರತದ ದಾರಿಯಲ್ಲಿ ಪರಿವರ್ತನೆಯ ಹೆಜ್ಜೆಯಾಗಿದ್ದು, ಗ್ರಾಮೀಣ ಸಮುದಾಯಗಳನ್ನು ಸಬಲೀಕರಣಗೊಳಿಸುತ್ತದೆ’’ ಎಂದು ಪ್ರಧಾನಮಂತ್ರಿ ಮೋದಿ ತಮ್ಮ ಭಾಷಣದಲ್ಲಿ ಹೇಳಿದರು.

ಪ್ರವಾಸೋದ್ಯಮ ದಿನಾಚರಣೆ: “ಆಳಿದ ಮೇಲೂ ಉಳಿಯುವುದು ಸಾಧನೆ ಮಾತ್ರ” – ಸಚಿವ ಮಧು ಬಂಗಾರಪ್ಪ

Leave a Comment