SAGARA | ಶಿವಮೊಗ್ಗ (Shivamogga) ಜಿಲ್ಲೆಯ ಸಾಗರ – ಆನಂದಪುರದ ರಾಷ್ಟ್ರೀಯ ಹೆದ್ದಾರಿಯ ಉಳ್ಳೂರು ಸಮೀಪದ ಮಂಚಾಲೆ (Manchale) ಗ್ರಾಮದ ಬಳಿ ಮಾರುತಿ ಓಮ್ನಿ ಹಾಗೂ ಟಾಟಾ ಇಂಡಿಕಾ ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತನನ್ನು ಭದ್ರಾವತಿಯ ಅಜಯ್ (21) ಎಂದು ಗುರುತಿಸಲಾಗಿದೆ. ಸಾಗರದ ಟೌನ್ ನಿವಾಸಿ ಸೈಯದ್ ನೂರುಲ್ಲಾ ಎಂಬುವವನು ಮೊಟ್ಟೆ ಮಾರಾಟ ಮಾಡಿ ಉಳ್ಳೂರು ಗ್ರಾಮದ ಕಡೆಯಿಂದ ಸಾಗರ ಕಡೆಗೆ ತೆರಳುತ್ತಿದ್ದ ವೇಳೆ ಮಂಚಾಲೆ ಸಮೀಪದಲ್ಲಿ ಕಾರಿಗೆ ಮಾರುತಿ ಓಮ್ನಿ ವಾಹನ ಡಿಕ್ಕಿಯಾಗಿದೆ.
ಈ ಅಪಘಾತದಲ್ಲಿ ಮಾರುತಿ ಓಮ್ನಿಯಲ್ಲಿದ್ದ ಭದ್ರಾವತಿ ನಿವಾಸಿ ಅಜಯ್ ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಕಾರಿನಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಉಲ್ಲಾಸ್ ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು ಶಿವಮೊಗ್ಗ ಆಸ್ಪತ್ರೆಗೆ ರವಾನಿಸಲಾಗಿದೆ.
ಇಂಡಿಕಾ ಕಾರಿನಲ್ಲಿದ್ದ ಸೈಯದ್ ನೂರುಲ್ಲಾ ರವರಿಗೂ ತೀವ್ರ ಗಾಯಗಳಾಗಿದ್ದು ಅವರನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆನಂದಪುರ ಪೊಲೀಸರು ಸ್ಥಳಕ್ಕೆ ತೆರಳಿ ಮುಂದಿನ ತನಿಖೆ ಕೈಗೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Read More :ಕಾಲುಸಂಕ ನಿರ್ಮಾಣವಾದರೂ ಇಲ್ಲಿ ಹಳ್ಳ ದಾಟಲು ಮರದ ದಿಮ್ಮಿಯೇ ಗತಿ !

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.