ಹೊಸನಗರ ; ಸುಮಾರು ನಾಲ್ಕು ತಿಂಗಳಿಂದ ರಾಮಕೃಷ್ಣ ವಿದ್ಯಾಲಯದ ಎಸ್‌ಎಸ್‌ಎಲ್‌ಸಿ ಅಂಕ ಪಟ್ಟಿಗಾಗಿ ಸತ್ಯಕ್ಕಾಗಿ ಶಿಕ್ಷಣಾ ಇಲಾಖೆಯೊಂದಿಗೆ ಹೋರಾಟ, ನ್ಯಾಯಾಲಯದಲ್ಲಿ ಹೋರಾಟ ನಡೆಸಿದ್ದು ಹಗಲು-ರಾತ್ರಿ ಎನ್ನದೇ ಮಕ್ಕಳ ಭವಿಷ್ಯಕ್ಕಾಗಿ ಹೋರಾಟ ನಡೆಸಿ ಕೊನೆಗೂ ಸತ್ಯ ಮೇವ ಜಯತೆ ಎಂಬಂತೆ ನ್ಯಾಯ ಸಿಕ್ಕಿದ್ದು ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ರಾಮಕೃಷ್ಣ ವಿದ್ಯಾಲಯ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ದೇವರಾಜ್ ಹೇಳಿದರು.
ಇಲ್ಲಿನ ರಾಮಕೃಷ್ಣ ವಿದ್ಯಾ ಸಂಸ್ಥೆಯ ಆವರಣದಲ್ಲಿ ತಿದ್ದುಪಡಿಯಾಗಿ ಬಂದ ಎಸ್‌ಎಸ್‌ಎಲ್‌ಸಿ ಅಂಕ ಪಟ್ಟಿಯನ್ನು ಪೋಷಕರಿಗೆ ವಿತರಿಸಿ ಮಾತನಾಡಿದ ಅವರು, 2024-25ನೇ ಸಾಲಿನ ಶ್ರೀ ರಾಮಕೃಷ್ಣ ವಿದ್ಯಾಲಯ ಹೊಸನಗರದ 10ನೇ ತರಗತಿಯ ಪರೀಕ್ಷಾ ನೋಂದಣಿ ಮತ್ತು ಶುಲ್ಕ ಪಾವತಿಯು ಶ್ರೀ ರಾಮಕೃಷ್ಣ ವಿದ್ಯಾಲಯ ಹೊಸನಗರದ ಹೆಸರಿನಲ್ಲಿ ಆಗಿದ್ದು, ನಂತರ ವಿದ್ಯಾರ್ಥಿಗಳ ಪ್ರವೇಶ ಪತ್ರದಲ್ಲೂ ಶ್ರೀ ರಾಮಕೃಷ್ಣ ವಿದ್ಯಾಲಯ ಹೊಸನಗರದ ಹೆಸರಿದ್ದು, ತದನಂತರ ಪ್ರಸಕ್ತ ಸಾಲಿನ ಫಲಿತಾಂಶವು ಮೂಲ ಅಂಕಪಟ್ಟಿಯಲ್ಲಿ ಸರ್ಕಾರಿ ಪ್ರೌಢಶಾಲೆ ಹೆಸರಿನಲ್ಲಿ ನಮೂದಾಗಿದ್ದು, ತದನಂತರ ಸಂಸ್ಥೆಯ ಆಡಳಿತ ಮಂಡಳಿಯ ನಿರಂತರ ಮೂರು ತಿಂಗಳ ಪರಿಶ್ರಮದಿಂದ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಅಂಕಪಟ್ಟಿಯಲ್ಲಿ ಶ್ರೀ ರಾಮಕೃಷ್ಣ ವಿದ್ಯಾಲಯ ಹೊಸನಗರ ಹೆಸರು ನಮೂದಾಗಿದೆ. ಕರ್ನಾಟಕದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಕಾನೂನಾತ್ಮಕವಾಗಿ ತಿದ್ದುಪಡಿಯಾಗಿದ್ದು, ಇದು ಗಮನಾರ್ಹ ಸಾಧನೆಯಾಗಿದೆ ಎಂದು ತಿಳಿಸಿದರು.
ಹೊಸನಗರ ಶ್ರೀ ರಾಮಕೃಷ್ಣ ವಿದ್ಯಾ ಸಂಸ್ಥೆ 1997ರಲ್ಲಿ ಪ್ರಾರಂಭಿಸಲಾಗಿದ್ದು ಹೊಸನಗರ ತಾಲ್ಲೂಕಿನಲ್ಲಿಯೇ ಇಂಗ್ಲಿಷ್ ಮೀಡಿಯಂ ಶಾಲೆ ಇರಲಿಲ್ಲ ಆ ಸಂದರ್ಭದಲ್ಲಿ ನಾವು ಇಂಗ್ಲಿಷ್ ಮೀಡಿಯಂ ಶಾಲೆ ತೆರೆದಿದ್ದೇವೆ. ಹಾಗೆಯೇ ಸುಮಾರು ಮೂವತ್ತು ವರ್ಷಗಳ ಕಾಲ ಶಾಲೆಯನ್ನು ನಡೆಸಿಕೊಂಡು ಬರುತ್ತಿದ್ದೇವೆ. ತದ ನಂತರ ಎಲ್ಲ ತಾಲ್ಲೂಕಿನಲ್ಲಿ ರಾಜ್ಯದಲ್ಲಿ ಇರುವಂತೆ ಸಿಬಿಎಸ್‌ಸಿ ಶಾಲೆಯನ್ನು ತೆರೆದಿದ್ದೇವೆ. ಕಾಣದ ಕೈಗಳು ಕೆಲಸದಿಂದ ಶಿವಮೊಗ್ಗ ಡಿಡಿಪಿಐಯವರಿಗೆ ಒಂದೇ ಶಾಲೆಯ ಕಟ್ಟಡದಲ್ಲಿ ಎರಡು ವಿಭಾಗದ ಶಾಲೆ ನಡೆಸುತ್ತಿದ್ದಾರೆ ಇವರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ಡಿಡಿಪಿಐ ಹಾಗೂ ಉನ್ನತ ಶಿಕ್ಷಣ ಇಲಾಖೆ ಸಿಬಿಎಸ್‌ಸಿ ಶಾಲೆಯನ್ನು ಹೊರತುಪಡಿಸಿ ಉಳಿದ ಭೋದಿಸುತ್ತಿರುವ ಇಂಗ್ಲಿಷ್ ಮೀಡಿಯಂ ಶಾಲೆಯ ಮಾನ್ಯತೆ ರದ್ದು ಪಡಿಸುವುದರ ಜೊತೆಗೆ 2024-25ನೇ ಸಾಲಿನ ಅಂಕಪಟ್ಟಿಯನ್ನು ಹೊಸನಗರದ ಸರ್ಕಾರಿ ಪ್ರೌಢ ಶಾಲೆಯ ವಿಳಾಸಕ್ಕೆ ನೀಡಿದ್ದಾರೆ ಎಂದರು.
ಪೋಷಕರಲ್ಲಿ ಆತಂಕ :
2024-25ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಮಕ್ಕಳ ಭವಿಷ್ಯ ಹಾಳಾಯಿತ್ತಲ್ಲ ಎಂಬ ಆತಂಕದೊಂದಿಗೆ ಪೋಷಕರು ಒಂದೆರಡು ಬಾರಿ ಶಾಲೆಗೆ ಮುತ್ತಿಗೆ ಹಾಕಿದ್ದು ಉಂಟು. ಆ ಸಂದರ್ಭದಲ್ಲಿ ಧೃತಿಗೆಡದ ವ್ಯವಸ್ಥಾಪಕ ದೇವರಾಜ್‌ರವರು ಪೋಷಕರಿಗೆ ಧೈರ್ಯ ತುಂಬಿ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಸರಿ ಮಾಡಿಸಿಕೊಡುತ್ತೇವೆ ಎಂದು ಪಣ ತೊಟ್ಟು ಹೈಕೋರ್ಟ್ ನ್ಯಾಯಾಲಯಕ್ಕೆ ಹೋಗಿ ರಾಮಕೃಷ್ಣ ಶಾಲೆಯ ಮಾನ್ಯತೆಯನ್ನು ಡಿಡಿಪಿಐರವರು ರದ್ದು ಪಡಿಸಿರುವುದು ಸರಿಯಾದ ಕ್ರಮವಲ್ಲವೆಂದು ವಾದಿಸಿ ಡಿಡಿಪಿಐ ಆದೇಶವನ್ನು ವಜಾ ಮಾಡಿ ಮತ್ತೆ ಮಾನ್ಯತೆ ನೀಡಿದ್ದಾರೆ ಎಂದು ಹೇಳಿದರು.
ಇನ್ನೂ ಮುಂದೆ ವಿದ್ಯಾರ್ಥಿಗಳ ಪೋಷಕರು ನಮ್ಮ ರಾಮಕೃಷ್ಣ ವಿದ್ಯಾಸಂಸ್ಥೆಯ ಬಗ್ಗೆ ಆತಂಕ ಪಡುವ ಅವಶ್ಯಕತೆಯಿಲ್ಲ ಮೂವತ್ತು ವರ್ಷಗಳಿಂದ ಹಾಗೇ ಸಂಸ್ಥೆ ನಡೆಯುತ್ತಿದೆಯೇ ಅದೇ ರೀತಿ ಮುಂದುವರೆಯುತ್ತದೆ ಎಂದು ಪೋಷಕರಿಗೆ ಭರವಸೆ ನೀಡಿದರು.

ಈ ಸತತ ನಾಲ್ಕು ತಿಂಗಳಿಂದ ಹೋರಾಟ ನಡೆಸುತ್ತಿದ್ದ ದೇವರಾಜ್‌ರವರನ್ನು ಶಾಲೆಯ ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ರಾಜೇಶ್, ಬಟ್ಟೆಮಲ್ಲಪ್ಪ ಶಾಲೆಯ ಮುಖ್ಯ ಶಿಕ್ಷಕರಾದ ಕರುಣಾಕರ, ಪೋಷಕರಾದ ಕೆ.ಎಸ್. ಗುರುರಾಜ್, ಟಿ.ಎಸ್, ಸುಬ್ರಹ್ಮಣ್ಯ, ಮಂಜಪ್ಪ, ಸುನೀಲ್ ಗುಬ್ಬಿಗಾ, ಧರ್ಮಪ್ಪ, ಶಾಲೆಯ ಆಡಳಿತ ಮಂಡಳಿಯ ಉಮೇಶ್, ಹೇಮಂತ್, ಕಲ್ಪನ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





