ರಿಪ್ಪನ್ಪೇಟೆ ; ಮಹಾಶಿವರಾತ್ರಿಯ ಅಂಗವಾಗಿ ಇಲ್ಲಿನ ಬರುವೆ ಶ್ರೀಕಲಾನಾಥ ರಾಮೇಶ್ವರ ದೇವಸ್ಥಾನದಲ್ಲಿ ಕುಕ್ಕಳಲೆ ಕಾಶಿವಿಶ್ವನಾಥ ಸ್ವಾಮಿ ದೇವಸ್ಥಾನದಲ್ಲಿ ಹಾಗೂ ಬೈರಾಪುರ ಈಶ್ವರ ದೇವಸ್ಥಾನದಲ್ಲಿ ಗುಳುಗುಳಿ ಶಂಕರೇಶ್ವರ ದೇವಸ್ಥಾನ, ಹಾಲುಗುಡ್ಡೆ ನೆವಟೂರು ಈಶ್ವರ ದೇವಸ್ಥಾನ, ಕೊಳವಳ್ಳಿ, ಕಾರಗೋಡು ಈಶ್ವರ, ಕೋಡೂರು ಶ್ರೀ ಶಂಕರೇಶ್ವರ ದೇವಸ್ಥಾನಕ್ಕೆ ಇಂದು ಭಕ್ತ ಸಮೂಹ ತೆರಳಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶಿವನಾಮ ಸ್ಮರಣೆಯನ್ನು ಮಾಡುವ ಮೂಲಕ ಭಕ್ತಯ ಪರಕಾಷ್ಟತೆಯನ್ನು ಮೆರೆದರು.
ಮಹಿಳೆಯರು ಯುವತಿಯರು ಪುರುಷರು ಮುಂಜಾನೆಯಿಂದಲೇ ಉಪವಾಸವಿದ್ದು ಈಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆಯೊಂದಿಗೆ ಶಿವನಾಮವನ್ನು ಜಪಿಸುತ್ತಾ ಕುಳಿತ ದೃಶ್ಯ ಕಾಣಬಹುದಾಗಿತ್ತು.
ಸಂಭ್ರಮ ಸಡಗರದೊಂದಿಗೆ ಇಂದು ಮಹಾಶಿವರಾತ್ರಿಯ ಹಬ್ಬವನ್ನು ಪೂಜೆ ಭಜನೆ ಉಪವಾಸ ಆರ್ಚನೆಯೊಂದಿಗೆ ಈಶ್ವರನಿಗೆ ರುದ್ರಾಭಿಷೇಕ ಆಭಿಷೇಕ ಪೂಜೆ ನಂತರ ತೀರ್ಥಪ್ರಸಾದ ವಿತರಣೆ ನಂತರ ಬರುವೆ ಶ್ರೀಕಲಾನಾಥ ರಾಮೇಶ್ವರ ಮತ್ತು ಇತಿಹಾಸ ಪ್ರಸಿದ್ದ ಗುಳುಗುಳಿ ಶಂಕರೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಅನ್ನಸಂತರ್ಪಣೆ ಸಹ ನೆರವೇರಿತು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





