ಪುರುಷರ ನೆಟ್‌ಬಾಲ್ ಪಂದ್ಯಾವಳಿ ; ಬರುವೆಯ ಎಂ. ಗಣೇಶ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Written by Mahesha Hindlemane

Published on:

ಹೊಸನಗರ ; ಇದೇ 2026ರ ಮಾರ್ಚ್ 9 ರಿಂದ 13ರವರೆಗೆ ಮಧ್ಯಪ್ರದೇಶದ ಭೂಪಾಲ್ ನ ಎಸ್ಎಜಿಇ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಅಖಿಲ ಭಾರತ ರಾಷ್ಟ್ರೀಯ ಪುರುಷರ ನೆಟ್‌ಬಾಲ್ ಪಂದ್ಯಾವಳಿಗೆ ತಾಲೂಕಿನ ಕಿರೆತೋಡಿ (ಬರುವೆ) ವಾಸಿ ಗೇರುಪುರ ಮಂಜಪ್ಪ ಹಾಗೂ ರೇವತಿ ದಂಪತಿಗಳ ಪುತ್ರ ಎಂ.ಗಣೇಶ್ ಆಯ್ಕೆಯಾಗಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಸತತ ಮೂರನೇ ಬಾರಿಗೆ ರಾಷ್ಟ್ರೀಯ ನೆಟ್‌ಬಾಲ್ ಪಂದ್ಯಾವಳಿಯನ್ನು ಪ್ರತಿನಿಧಿಸುತ್ತಿರುವುದು ಇವರ ವಿಶೇಷ.

ಇವರು ಮಂಗಳೂರು ವಿಶ್ವವಿದ್ಯಾಲಯದ
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಅಂತಿಮ ವರ್ಷದ ಕಲಾ ವಿಭಾಗದ ಪದವಿ ವಿಧ್ಯಾರ್ಥಿ.

ಬಡತನದಲ್ಲೇ ಹುಟ್ಟಿ, ಬೆಳೆದು ಸತತ ತನ್ನ ಪರಿಶ್ರಮದ ಮೂಲಕ ನೆಟ್‌ಬಾಲ್ ಕ್ರೀಡೆಯಲ್ಲಿ ರಾಷ್ಟ್ರಮಟ್ಟದ ಭೂಪಾಲ್ ವರೆಗಿನ ಈತನ ಪಯಣ ಇತರೆ ಕ್ರೀಡಾಪಟುಗಳಿಗೆ ಮಾದರಿಯಾಗಿದೆ.

Leave a Comment