ಹೊಸನಗರ ; ಯಾವುದೇ ಸಂಘ-ಸಂಸ್ಥೆಗಳಾಗಿರಲಿ ಅಥವಾ ಸರ್ಕಾರಗಳೇ ಆಗಿರಲಿ ಪ್ರತಿಭಾವಂತ ಮಕ್ಕಳನ್ನು ಗುರುತಿಸುವುದರಿಂದ ಮಕ್ಕಳ ಭವಿಷ್ಯ ಉಜ್ವಲವಾಗುವುದರ ಜೊತೆಗೆ ಸಮಾಜದ ವಿಕಾಸ ಹಾಗೂ ಅಭಿವೃದ್ಧಿಯ ಸಂಕೇತ ಎಂದು ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘದ (ಮಾಮ್ಕೋಸ್) ನಿರ್ದೇಶಕ ಕೆ.ವಿ. ಕೃಷಮೂರ್ತಿ ಹೇಳಿದರು.
ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ಹೊಸನಗರ ಶಾಖೆಯ ಆವರಣದಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರದ ಪ್ರಶಸ್ತಿ ಪತ್ರ, ನಗದು ಪುರಸ್ಕಾರ ಹಾಗೂ ಅಭಿನಂದನಾ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ನಮ್ಮ ಸಂಸ್ಥೆಯು ಸದಸ್ಯರ ಮಕ್ಕಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ವಿದ್ಯಾರ್ಥಿಗಳ ಭವಿಷ್ಯವೇ ನಮ್ಮ ಸಂಸ್ಥೆಯ ಗುರಿಯಾಗಿರುತ್ತದೆ. ಸಂಘದ ಸದಸ್ಯರಿಗೆ ವಿವಿಧ ಸೌಲಭ್ಯಗಳಾದ ಅಡಿಕೆ ಆಧಾರಿತ ಸಾಲ, ಕಟಾವು ಸಾಲ, ಕೊಳೆರೋಗದ ಸಾಲ, ನಿಗದಿತ ಹಾಗೂ ಠೇವಣಿ ಯೋಜನೆಗಳು ಗುಂಪು ವಿಮಾ ಯೋಜನೆ ವೈದ್ಯಕೀಯ ಸೌಲಭ್ಯ ಹಾಗೂ ಮರಣೋತ್ತರ ನಿಧಿ ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡುತ್ತಿದೆ. ಮುಂದಿನ ದಿನಗಳಲ್ಲಿ ಸಂಘದ ಸದಸ್ಯರ ಮಕ್ಕಳಿಗಾಗಿ ವಿಶೇಷ ಯೋಜನೆ ಜಾರಿಗೆ ತರಬೇಕೆಂದು ನಮ್ಮ ಸಂಸ್ಥೆ ಚಿಂತಿಸುತ್ತಿದೆ ಅಡಿಕೆ ಬೆಳೆಗಾರರು ನಮ್ಮ ಸಂಸ್ಥೆಯೊಂದಿಗೆ ವ್ಯವಹಾರಿಸಬೇಕೆಂದು ಈ ಮೂಲಕ ಕೇಳಿಕೊಂಡರು.
ಪ್ರತಿಭಾ ಪುರಸ್ಕಾರ ನಡೆಯುವ ಸಂದರ್ಭದಲ್ಲಿ ನಿರ್ದೇಶಕ ಧರ್ಮೇಂದ್ರ, ಶಾಖಾ ವ್ಯವಸ್ಥಾಪಕ ಗಣಪತಿ ಎಸ್.ಕೆ, ಕಿರಿಯ ಸಹಾಯಕ ಮಧುಸೂದನ್, ವಿದ್ಯಾಶ್ರೀ, ದಿವ್ಯಾ, ಲೀಲಾವತಿ, ದಯಾನಂದ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





