ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಇಲ್ಲದೆ ಹೊಸನಗರದಲ್ಲಿ ಹೋಟೆಲ್‌ಗಳು ಬಂದ್ !

Written by Mahesha Hindlemane

Published on:

ಹೊಸನಗರ ; ಮಧ್ಯಪ್ರಾಚ್ಯದಲ್ಲಿ ಯುದ್ಧ ಪ್ರಾರಂಭವಾಗಿ ಸುಮಾರು 40 ದಿನಗಳು ಕಳೆದಿದೆ‌. ಆದರೆ ಹೊಸನಗರದ ಪ್ರತಿಷ್ಠಿತ ಕೆಲವು ಹೋಟೆಲ್‌ಗಳು ಹಂಗೋ-ಹಿಂಗೋ ಇಲ್ಲಿಯವರೆಗೆ ಹೋಟೆಲ್ ನಡೆಸಿಕೊಂಡು ಬಂದಿದ್ದರು ಹೊಸನಗರದ ಬಸ್‌ಸ್ಟ್ಯಾಂಡ್ ಹೋಟೆಲ್ ಬಾಗಿಲು ಹಾಕಿ 40 ದಿನಗಳು ಕಳೆದಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಗ್ಯಾಸ್ ಮಾಲೀಕರ ಸಿಬ್ಬಂದಿಗಳ ಹಾಗೂ ಹೊಸನಗರ ಆಹಾರ ನಿರೀಕ್ಷಕರ ಸಹಾಯಹಸ್ತದಿಂದ ಎಲ್ಲ ಹೋಟೆಲ್‌ಗಳು ಎಂದಿನಂತೆ ಬಾಗಿಲು ಓಪನ್ ಮಾಡಿಕೊಂಡು ವಹಿವಾಟು ನಡೆಸುತ್ತಿದ್ದವು.

ಆದರೆ ವಾಣಿಜ್ಯ ಗ್ಯಾಸ್ ಸಿಲಿಂಡರ್ ಇಲ್ಲದೆ ಇರುವುದರಿಂದ ಇಂದಿನಿಂದ ಬಸ್ ಸ್ಟ್ಯಾಂಡ್ ಸಮೀಪವಿರುವ ಪ್ರತಿಷ್ಠಿತ ಶೀತಲ್ ಹೋಟೆಲ್, ಶಬರಿ ಹೋಟೆಲ್ ಹಾಗೂ ಕೆಲವು ಹೋಟೆಲ್‌ಗಳು ಬಂದ್ ಮಾಡಲಾಗಿದ್ದು ಸಾಗರ-ಶಿವಮೊಗ್ಗ ಇತರೆ ಊರಿನಿಂದ ಬಂದು ಇಲ್ಲಿ ಸರ್ಕಾರಿ ಕಛೇರಿಯಲ್ಲಿ ಕೆಲಸ ಮಾಡುತ್ತಿರುವ ನೌಕರ ವರ್ಗ ಕಾಫಿ-ತಿಂಡಿ, ಊಟವಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Leave a Comment