ಹೊಸನಗರ ; ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹೊಸನಗರ ತಾಲೂಕು ಕಾರ್ಯಕಾರಿ ಸಮಿತಿಗೆ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಚುನಾವಣೆ ನಡೆದಿದ್ದು ಮಹಿಳಾ ಮೀಸಲು ಕ್ಷೇತ್ರಕ್ಕೆ ಗುಳ್ಳೆಕೊಪ್ಪ ಶಾಲೆಯ ಆರ್ ಮಂಜುಳಾ, ರಿಪ್ಪನ್ಪೇಟೆ ಶಾಲೆಯ ಹೆಚ್ ನೀಲಾವತಿ, ಹೊಸನಗರ ಪಿಎಂಶ್ರೀ ಶಾಲೆಯ ಗಾಯತ್ರಿ ಎನ್ ಪಟಗಾರ, ಹೊರಬೈಲು ಶಾಲೆಯ ಹೆಚ್ ಸಿ ಶಿವಪ್ಪ, ಹೆಬ್ಬಳ್ಳಿ ಶಾಲೆಯ ಎಂ ಎಸ್ ಶಿವಮೂರ್ತಿ, ಹಾರೋಹಿತ್ಲು ಶಾಲೆಯ ಎಂ ಮಾಲ್ತೇಶ್, ಜೇನಿ ಶಾಲೆಯ ಕೆ ಜಿ ಪುಟ್ಟಸ್ವಾಮಿ, ಅಮೃತ ಶಾಲೆಯ ಎಂ ಎಂ ಈಶ್ವರಪ್ಪ ಚುನಾಯಿತರಾಗಿದ್ದಾರೆ.
ಇವರುಗಳ ಆಯ್ಕೆಯನ್ನು ಚುನಾವಣಾ ಅಧಿಕಾರಿ ಹೆಚ್ ಎಮ್ ಸುಬ್ರಹ್ಮಣ್ಯ ಘೋಷಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





