ಹೊಸನಗರ ತಾಲ್ಲೂಕು ಕೋಟೆಗಾರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಶಶಿಧರ್‌ನಾಯ್ಕ್ ಆಯ್ಕೆ

Written by Mahesha Hindlemane

Updated on:

ಹೊಸನಗರ ; ತಾಲ್ಲೂಕು ಕೋಟೆಗಾರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಶಶಿಧರ್‌ನಾಯ್ಕ್ ರವರನ್ನು ಮುಂದಿನ ಮೂರು ವರ್ಷಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇವರು ಹಿಂದಿನ ಮೂರು ವರ್ಷಗಳಲ್ಲಿ ಸಾಕಷ್ಟು ಸಂಘದ ಅಭಿವೃದ್ಧಿ ಕೆಲಸಗಳ ಜೊತೆಗೆ ಸಮಾಜದ ಏಳಿಗೆಗಾಗಿ ಶ್ರಮಿಸಿದ್ದು ಇವರ ಮಹತ್ವಾಕಾಂಕ್ಷೆ ಕೆಲಸಗಳಾದ ವಿಧವಾ ವೇತನ, ವೃದ್ಧಾಪ್ಯ ವೇತನ, ಬಡವರ ಕಲ್ಯಾಣಕ್ಕಾಗಿ ಪ್ರತಿ ತಿಂಗಳು ಮಾಸಶನ ನೀಡುತ್ತಾ ಬರುತ್ತಿದ್ದಾರೆ‌. ಇದರ ಜೊತೆಗೆ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರತಿ ವರ್ಷ ಪ್ರತಿಭಾ ಪುರಸ್ಕಾರದ ರೂಪದಲ್ಲಿ ಸನ್ಮಾನ ಹಾಗೂ ಬೆಳ್ಳಿ ಪದಕವನ್ನು ನೀಡುತ್ತಿದ್ದಾರೆ.

ಸ್ವಜಾತಿಯಲ್ಲಿ ಯಾರಾದರೂ ಮೃತರಾದರೆ ಅವರ ಕುಟುಂಬಕ್ಕೆ ಶವ ಸಂಸ್ಕಾರಕ್ಕಾಗಿ 3 ಸಾವಿರ ಹಣವನ್ನು ನೀಡುತ್ತಿದ್ದಾರೆ. ಇದರ ಜೊತೆಗೆ ಪ್ರತಿ ವರ್ಷ ಗಣಪತಿ ಉತ್ಸವ, ದಸರಾ, ಚಂಡಿಕಾ ಹೋಮದಂತಹ ಕಾರ್ಯಕ್ರಮ ನಡೆಸಿ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಊರಿನ ಶ್ರೇಯಸ್ಸಿಗಾಗಿ ದೇವತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.

ಇವರ ಅಧ್ಯಕ್ಷತೆಯ ಅವಧಿಯಲ್ಲಿ ಸಂಘಕ್ಕೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮನಗಂಡ ಸಮಿತಿ ಇವರನ್ನು ಪುನಃ ಮೂರು ವರ್ಷಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

2026-2029ರ ಸಮಿತಿ ರಚನೆ ಮಾಡಲಾಗಿದ್ದು ಸಂಘದ ಗೌರವಾಧ್ಯಕ್ಷ ಪಿ.ಆರ್. ಸಂಜೀವ, ಉಪಾಧ್ಯಕ್ಷ ಡಾ|| ದಿನಮಣಿ, ಕೋಡಿ ಚಂದ್ರಶೇಖರ, ಹೆಚ್.ವಿ ಮಹಾಬಲ, ಪ್ರಧಾನ ಕಾರ್ಯದರ್ಶಿ ಹೆಚ್.ಆರ್. ಸುರೇಶ್, ಅನಿಲ್‌ಕುಮಾರ್ ಹಾಗೂ ಕೆ.ಜಿ. ನಾಗೇಶ್ ಹೆಚ್. ಶ್ರೀನಿವಾಸ್, ಸಹ ಕಾರ್ಯದರ್ಶಿಯಾಗಿ ಕಟ್ಟೆ ಸುರೇಶ್, ಲೆಕ್ಕ ಪರಶೋಧಕರಾಗಿ ಗೋವಿಂದರಾಯ, ಧಾರ್ಮಿಕ ಕಾರ್ಯದರ್ಶಿಯಾಗಿ ದ್ಯಾವರ್ಸ ಸುಬ್ರಹ್ಮಣ್ಯ, ವಿಠೋಬಾ ನಾಯ್ಕ, ನಿತ್ಯಾನಂದ, ನಿರ್ದೆಶಕರುಗಳಾಗಿ ಎಂ.ಪಿ.ಎಂ. ನಾರಾಯಣ, ಸುಬ್ಬಾರಾವ್, ಯುವಕ ಸಂಘದ ಅಧ್ಯಕ್ಷ ಮಾವಿನಕೊಪ್ಪ ಸತೀಶ್, ಮಹಿಳಾ ಸಂಘದ ಅಧ್ಯಕ್ಷೆ ಶ್ರೀದೇವಿ ಹನುಮಂತ್, ಪಿ. ಮನೋಹರ, ಮಾವಿನಕೊಪ್ಪ ಗಣೇಶ, ಮಾಧವ, ಎಂ.ಪಿ.ಎಂ ನಾರಾಯಣ, ಗಿರೀಶ್ ಹೆಚ್.ಎಸ್, ಸ್ವಾಮಿ, ಎಜೆಂಟ್ ನಾಗರಾಜ್, ಮಂಜುನಾಥ್, ಹರೀಶ, ಗೋವಿಂದಪ್ಪ, ಮಹಾಬಲ ಹೆಚ್.ಎಸ್, ಶಾಂತರಾಮ, ಸುವರ್ಣ, ವಾಸಂತಿ ಕೊತ್ವಾಲ್, ಸವಿತಾ ಗಜೇಂದ್ರರವರನ್ನು ಆಯ್ಕೆ ಮಾಡಿಕೊಳ್ಳಲಾಯಿತು.

Leave a Comment