ಹೊಸನಗರ ತಾಲೂಕಿನಾದ್ಯಂತ ಮಳೆ ಚುರುಕು ; ಸಾಂಪ್ರದಾಯಿಕ ಭತ್ತದ ನಾಟಿ ಕಾರ್ಯಕ್ಕೆ ಮುಂದಾದ ರೈತ ಕಲ್ಲೂರು ಈರಣ್ಣ

Written by Mahesha Hindlemane

Published on:

ರಿಪ್ಪನ್‌ಪೇಟೆ : ಮಳೆ ನಂಬಿ ಬೆಳೆ ಹಾಕಬೇಡಿ ಎಂದು ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರೈತರಿಗೆ ಕರೆ ನೀಡಿರುವ ಬೆನ್ನಲ್ಲೇ ಮಲೆನಾಡಿನ ರೈತರು ಕಾಯಕವೇ ಕೈಲಾಸಯೆಂಬ ತತ್ವದಂತೆ ತಮ್ಮ ಸಾಂಪ್ರದಾಯಿಕ ಕೃಷಿ ಕಾಯಕವನ್ನು ಬಿಡದೆ ಅದರಲ್ಲೇ ನೆಮ್ಮದಿ ಕಂಡುಕೊಂಡಂತ ರೈತರು ಕಂಬಳಿ ಹಾಕಿ ಜೀವನ ಮಾಡುವವರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಪ್ರಕೃತಿ ಎಂದಿಗೂ ರೈತರ ಕೈ ಬಿಡುವುದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿರುವ ಇಲ್ಲಿನ ರೈತ. ತಾನು ಬೇಸಾಯವನ್ನು ನಂಬಿ ವರ್ಷದ ಕೂಳು ಮಾಡಿಕೊಳ್ಳುವುದು ನಮ್ಮ ಈ ಹಿಂದಿನ ಪೂರ್ವಿಕರ ಕಾಲದಿಂದಲೂ ನಡೆದುಕೊಂಡು ಬಂದಂತಹ ಸಾಂಪ್ರದಾಯಿಕ ಕೃಷಿ ಪದ್ದತಿಯನ್ನು ಇಂದಿಗೂ ಮುಂದುವರಿಸಿಕೊಂಡು ಮುಂದಿನ ತಲೆಮಾರಿಗೂ ಅನ್ವಯವಾಗುವಂತೆ ಯುವಪೀಳಿಗಗೆ ಜಾಗೃತಗೊಳಿಸುವ ಕಾಯಕವನ್ನು ನಾವು ಪಾಲಿಸಿರುವುದಾಗಿ ರೈತ ಕಲ್ಲೂರು ಈರಣ್ಣ ಮ.ಟೈ.ಗೆ ವಿವರಿಸಿದರು.

‘ದೇಶಕ್ಕೆ ಅನ್ನ ಕೊಡುವ ರೈತ’ ಎಂದು ಇಂದಿನ ರಾಜಕಾರಣಿಗಳು ಬರಿ ಬಾಯಿ ಮಾತಿನಲ್ಲಿ ಹೇಳುತ್ತಿದ್ದಾರೆಯೇ ಹೊರತು ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲದೆ ದುಬಾರಿ ಗೊಬ್ಬರ ಖರೀದಿಸಿ ವರ್ಷದಿಂದ ವರ್ಷಕ್ಕೆ ಕೂಲಿಯಾಳುಗಳ ಪಗಾರ ಸಹ ಹೆಚ್ಚಳವಾಗುತ್ತಿದ್ದು ಇಂದಿನ ಯಾಂತ್ರಿಕ ಯುಗದಲ್ಲಿಯೂ ನಮ್ಮ ಸಾಂಪ್ರದಾಯಿಕ ಬೇಸಾಯ ಕ್ರಮವನ್ನು ಅಳವಡಿಸಿಕೊಂಡು ಕೃಷಿ ಮಾಡುವುದೇ ಕಷ್ಟಕರವಾದರೂ ಕೂಡಾ ನಮ್ಮ ಪೂರ್ವಿಕರು ನಡೆಸಿಕೊಂಡು ಬಂದ ಪದ್ದತಿಯನ್ನು ಮುಂದುವರಿಸಿದ ಭೂತಾಯಿ ಎಂದಿಗೂ ನಮ್ಮ ಕೈಬಿಡದೆ ಶ್ರಮವಹಿಸಿದ ರೈತರ ಬೆವರಿಗೆ ಪ್ರತಿಫಲವನ್ನು ಕರುಣಿಸುವಳು ಎಂಬ ನಂಬಿಕೆ ವಿಶ್ವಾಸದ ಮೇಲೆ ಅವಲಂಬಿತರಾದ ರೈತರು ತಮ್ಮ ಕಾಯಕದಿಂದ ಬದುಕಿನಲ್ಲಿ ನೆಮ್ಮದಿಕಂಡವರಾಗಿದ್ದೇವೆ.

ಇತ್ತೀಚಿನ ವರ್ಷಗಳಲ್ಲಿ ರೈತರು ತಮ್ಮ ಜಮೀನಿನಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯುವತ್ತ ಹೆಚ್ಚು ಆಕರ್ಷಿತರಾಗಿದ್ದು ಭತ್ತ ಬೆಳೆಯುವ ಜಮೀನಿನಲ್ಲಿ ಅಡಿಕೆ, ಶುಂಠಿ, ಮೆಕ್ಕೆಜೋಳದತ್ತ ಮುಖ ಮಾಡಿರುವ ಕಾಲದಲ್ಲಿ ತಮ್ಮ 10 ಎಕರೆ ತರಿ ಭೂಮಿಯಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಭತ್ತದ ನಾಟಿ ಮಾಡುವ ಕಾರ್ಯದಲ್ಲಿ ಗಮನ ಸೆಳೆದಿದ್ದಾರೆ.

ಮಲೆನಾಡಿನಲ್ಲಿ ಮಳೆ ಕುಂಠಿತವಾದರೂ ಕೂಡಾ ಸಕಾಲದಲ್ಲಿ ನಾಟಿ ಕಾರ್ಯ ಮಾಡಬೇಕು ಎಂಬ ಈ ಹಿಂದಿನ ಪದ್ದತಿಯನ್ನು ಮುಂದುವರಿಸಿಕೊಂಡು ಬಂದಿರುವ ಕಲ್ಲೂರು ಈರಣ್ಣ ತಮ್ಮ ಜಮೀನಿನಲ್ಲಿ ಬೋರ್‌ವೆಲ್ ಮತ್ತು ಬಾವಿಯ ನೀರು ಹರಿಸಿ ಸಸಿ ಮಡಿ ಸಿದ್ದಪಡಿಸಿಕೊಂಡಿದ್ದು ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜಮೀನಿನಲ್ಲಿ ಪವರ್ ಟಿಲ್ಲರ್ ಮೂಲಕ ಸಾಗುವಳಿ ಮಾಡಿ ಪವರ್ ಟಿಲ್ಲರ್ ಹಾಗೂ ಜೋಡೆತ್ತುಗಳೊಂದಿಗೆ ರಂಟೆ ಹೂಟಿ ನಡೆಸಿ ಕೂಲಿ ಕಾರ್ಮಿಕ ಮಹಿಳೆಯರಾದ ವೇದಾವತಿ, ಶಾರದಮ್ಮ, ಆಕಾಶ್, ಅರುಣಾಕ್ಷಿ, ನಿರ್ಮಲಮ್ಮ, ಕೆಂಪಮ್ಮ, ಸುಶೀಲ, ಗೀತಮ್ಮ, ಸುಶೀಲಮ್ಮ, ವಿಶಾಲಾಕ್ಷಿ, ಚಿತ್ರ, ಸೌಭಾಗ್ಯ, ಶಶಿಕಲಾ, ಸುಲೋಚನಮ್ಮ, ಭಾಗ್ಯವತಿ, ಸುಧಮ್ಮ, ಇವರು ಮಲೆನಾಡಿ ಅಪರೂಪದ ಸೋಬಾನೆ ಜಾನಪದ ಹಾಡುಗಳ ಹಾಡಿನೊಂದಿಗೆ ಸಾಂಪ್ರದಾಯಿಕ ಕೃಷಿ ಸಂಸ್ಕೃತಿಯನ್ನು ಜೀವಂತ ಪರಂಪರೆಗೆ ಜೀವಕಳೆ ತುಂಬಿದರು.

ಸಹಕಾರ ಸಂಘಗಳಲ್ಲಿ ಹೆಚ್ಚುವರಿ ಹೊಸ ಸಾಲವೂ ಇಲ್ಲ. ಎರಡು ವರ್ಷಗಳಿಂದ ರೈತರು ಬೆಳೆ ಹೆಚ್ಚುವರಿ ಸಾಲಕ್ಕಾಗಿ ಸಹಕಾರ ಬ್ಯಾಂಕ್‌ಗಳಿಗೆ ಅಲೆದಾಡಿದರೂ ಧೃತಿಗೆಡದೆ ಕೃಷಿಯನ್ನು ನಂಬಿಕೊಂಡವರೇ ಹೊರತು ಎಂದೂ ರಾಜಕಾರಣಿಗಳನ್ನು ನಂಬಿದವರಲ್ಲ.
– ಮಂಜುನಾಥ ಇ.ಡಿ., ರೈತ

ಹವಾಮಾನ ವೈಪರಿತ್ಯದಿಂದಾಗಿ ರೈತರ ಬದುಕು ಮೂರಾಬಟ್ಟೆಯಂತಾಗಿದ್ದರು ಕೂಡಾ ಕೂಲಿ ಕಾರ್ಮಿಕರ ಕೂಲಿ ಹೆಚ್ಚಾಗಿದ್ದು ಗೊಬ್ಬರ ಮತ್ತು ಬೇಸಾಯಕ್ಕೂ ಹೆಚ್ಚು ಹಣ ಕೊಟ್ಟು ಕೃಷಿ ಮಾಡುವುದೇ ಕಷ್ಟಕರವಾಗಿದೆ. ಸರ್ಕಾರ ಇನ್ನೂದರೂ ರೈತರು ಬೆಳೆದ ಭತ್ತಕ್ಕೆ ಬೆಂಬಲ ಬೆಲೆ ನೀಡುವ ಮೂಲಕ ಪ್ರೋತ್ಸಾಹಿಸುವಂತಾಗಬೇಕು ಎಂದು ರೈತ ರಾಜೇಂದ್ರ, ಮಾಲತೇಶ, ಹೂವಪ್ಪ, ಆಕಾಶ್ ಹೇಳಿದರು.

ರಾಜಕಾರಣಿಗಳು ಮತ್ತು ಸರ್ಕಾರಿ ನೌಕರರು ತಮ್ಮ ವೇತನ ಹೆಚ್ಚಳ ಮಾಡಿಕೊಳ್ಳಲು ಹೆಚ್ಚು ಆಸಕ್ತರಾಗುತ್ತಾರೆ. ಅದೇ ರೈತ ಮಳೆಯಿಲ್ಲದೆ ಬೆಳೆ ಬಾರದಿದ್ದರೂ ಧೃತಿಗೆಡದೆ ಧೈರ್ಯವಾಗಿ ಕೃಷಿಯಲ್ಲಿ ಪರ್ಯಾಯ ಬೆಳೆಯನ್ನು ಬೆಳೆಯಲಾಗದೆ ಪೂರ್ವಜರು ನಡೆಸಿಕೊಂಡು ಬಂದ ಭತ್ತದ ಬೆಳೆ ಬೆಳೆಯುವಂತಾಗಿದ್ದೇವೆ.
– ಈರಣ್ಣ, ಕೆಂಪಮ್ಮ, ರಾಜೇಂದ್ರ, ಹೂವಪ್ಪ, ಕೃಷಿಕರು

ಹುರುಳಿ ಸಾರು, ನಾಟಿಕೋಳಿ ಪಲ್ಯ ಸವಿದ ಕಾರ್ಮಿಕರು :

ಮಧ್ಯಾಹ್ನದ ವೇಳೆ ಮನೆಯಲ್ಲಿಯೇ ಸಿದ್ದಪಡಿಸಿದ್ದ ಮಲೆನಾಡು ಸೊಗಡಿನ ಅಪರೂಪದ ಆಹಾರ ಪದಾರ್ಥಗಳಾದ ಹುರುಳಿ ಸಾರು, ನಾಟಿ ಕೋಳಿಪಲ್ಯ, ಮಾವಿನಮಿಡಿ ಉಪ್ಪಿನಕಾಯಿ ಹಾಗೂ ಅಣಬೆ ಪಲ್ಯದ ಸವಿರುಚಿಯನ್ನು ಸವಿದರು.

Leave a Comment