ಮೂಡಿಗೆರೆ : ತಾಲ್ಲೂಕಿನ ಬಾಳೆಹಳ್ಳಿ ಗ್ರಾಮದಲ್ಲಿ ಕೂಲಿ ಹಣದ ವಿಚಾರವಾಗಿ ತೋಟದ ಮಾಲೀಕ ಮತ್ತು ಕಾರ್ಮಿಕರ ನಡುವೆ ಜಗಳ ಉಂಟಾಗಿ, ಮಾಲೀಕನ ಬಂದೂಕಿನಿಂದ ಮಿಸ್ ಫೈರ್ನಿಂದಾಗಿ ಮಗುವಿಗೆ ಗಂಭೀರ ಗಾಯ ಸಂಭವಿಸಿದೆ.
ಘಟನೆ ವಿವರ :
ಬಾಳೆಹಳ್ಳಿ ಗ್ರಾಮದ ತೋಟ ಮಾಲೀಕ ಜಗದೀಶ್ ಗೌಡ ಅವರ ತೋಟದಲ್ಲಿ ಅಸ್ಸಾಂ ಮೂಲದ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕಾರ್ಮಿಕರು ದಿನಕ್ಕೆ 400 ರೂಪಾಯಿ ಕೂಲಿ ನೀಡಬೇಕೆಂದು ಆಗ್ರಹಿಸಿದಾಗ, ಜಗದೀಶ್ ಗೌಡ ಪ್ರಸ್ತಾವಿಸಿದ 350 ರೂಪಾಯಿ ಮಾತ್ರ ಈಗ ನೀಡುತ್ತೇನೆ, ಉಳಿದ 50 ರೂಪಾಯಿಯನ್ನು ನಂತರ ಕೊಡುತ್ತೇನೆ ಎಂದು ತಿಳಿಸಿದ್ದಾರೆ.
ಈ ವಾಗ್ವಾದಕ್ಕೆ ಕಾರ್ಮಿಕರು ಒಪ್ಪದೇ, “ಈಗಲೇ 400 ರೂಪಾಯಿ ನೀಡಬೇಕು ಇಲ್ಲದಿದ್ದರೆ ಕೆಲಸ ಮಾಡುವುದಿಲ್ಲ” ಎಂದು ಹೇಳಿ ಸ್ಥಳವನ್ನು ತೊರೆದಿದ್ದಾರೆ. ಈ ಸಂದರ್ಭದಲ್ಲಿ ಮಾತುಕತೆ ತಾರಕ್ಕಕೇರಿದ್ದು, ಕಾರ್ಮಿಕರು ಮಾಲೀಕನ ಮೇಲೆ ಹಲ್ಲೆಗೆ ಯತ್ನಿಸಿದರಂತೆ.
ಮಗುವಿನ ತಲೆ ಹೊಕ್ಕಿದ ಗುಂಡು !
ಸ್ಥಿತಿಗತಿಗಳು ನಿಯಂತ್ರಣಕ್ಕೆ ಬರುವಾಗ, ತೋಟ ಮಾಲೀಕ ಜಗದೀಶ್ ಗೌಡ ಅವರು ಕಾರ್ಮಿಕರನ್ನು ಭಯಪಡಿಸಲು ತಮ್ಮ ಬಂದೂಕಿನಿಂದ ಗುಂಡು ಹಾರಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಮಿಸ್ ಫೈರ್ ಸಂಭವಿಸಿ, ಆ ಸ್ಥಳದಲ್ಲಿದ್ದ ಮಗುವಿನ ತಲೆಗೆ ಗುಂಡು ತಗುಲಿ ಗಂಭೀರ ಗಾಯಗಳಾಗಿವೆ.
ತಕ್ಷಣ ಗಾಯಗೊಂಡ ಮಗುವನ್ನು ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಆದರೆ ಸ್ಥಿತಿ ಗಂಭೀರವಾಗಿದ್ದರಿಂದ, ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಪ್ರಕರಣ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





