ಪಕ್ಷದಲ್ಲಿ ಬೆಳೆದು, ಪಕ್ಷವನ್ನು ಬಲಪಡಿಸಬೇಕು : ಹರತಾಳು ಹಾಲಪ್ಪ

Written by Mahesha Hindlemane

Published on:

ಹೊಸನಗರ : ಪ್ರತಿಯೊಬ್ಬರು ಪಕ್ಷದಲ್ಲಿ ದುಡಿಯುತ್ತಿದ್ದೇವೆ ಎಂದ ಮಾತ್ರಕ್ಕೆ ಯಾರಿಗೂ ಹೆದರುವ ಅವಶ್ಯಕತೆಯಿಲ್ಲ. ಶಾಲು ಹಾಕಿಕೊಂಡು ಓಡಾಟ ನಡೆಸಿದರೆ ಒಂದೆರಡು ದಿನ ನಿಮ್ಮನ್ನೂ ನೋಡಿ ನಗುತ್ತಾರೆ ನಂತರ ಎಲ್ಲರೂ ಸರಿ ಹೋಗುತ್ತಾರೆ. ನೀವು ಪಕ್ಷಕ್ಕಾಗಿ ದುಡಿಯುತ್ತಿದ್ದೀರಿ ಎಂದಾಗ ನಿಮ್ಮನ್ನು ಗುರುತಿಸುವವರ ಸಂಖ್ಯೆ ಹೆಚ್ಚಾಗುತ್ತದೆ. ಪಕ್ಷದಲ್ಲಿ ಬೆಳೆದ ಮೇಲೆ ನೀವು ಬೆಳೆಯುತ್ತೀರಿ ಬೆಳೆಯುವಾಗ ನಮ್ಮ ಬಿಜೆಪಿ ಪಕ್ಷವನ್ನು ಬೆಳೆಸಲು ಪ್ರಯತ್ನಿಸಿ ಎಂದು ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ಬಿಜೆಪಿ ಕಛೇರಿಯಲ್ಲಿ ತಾಲ್ಲೂಕು ಒಬಿಸಿ ಮೋರ್ಚಾ ಪದಗ್ರಹಣ ಸಮಾರಂಭ ಹಾಗೂ ಮಂಡಲದ ಕಾರ್ಯಕಾರಣಿ ಸಭೆಯನ್ನು ನಡೆಸಲಾಗಿದ್ದು ಈ ಕಾಯಕ್ರಮದಲ್ಲಿ ಮಾತನಾಡಿದ ಅವರು, ಸಂಘಟನೆಯನ್ನು ಇನ್ನೂ ಸಂಘಟಿಸಬೇಕು. ಕೇಂದ್ರ ಸರ್ಕಾರದ ಕ್ರಮಗಳನ್ನು ಜನರಿಗೆ ನೇರವಾಗಿ ಮುಟ್ಟುತ್ತಿದೆಯೇ ಎಂದು ಮನೆ-ಮನೆಗೆ ಭೇಟಿ ನೀಡಿ ವಿಚಾರಿಸಬೇಕು. ಬಡವರ ಕೆಲಸಗಳಿಗೆ ಸ್ಪಂದಿಸಬೇಕು. ಇನ್ನೂ ಒಂದೂವರೆ ವರ್ಷದಲ್ಲಿ ವಿಧಾನಸಭೆ ಚುನಾವಣೆ ಬರುತ್ತಿದೆ ಅಷ್ಟರೊಳಗೆ ಗ್ರಾಮ ಪಂಚಾಯತಿ, ತಾಲ್ಲೂಕು, ಜಿಲ್ಲಾ ಪಂಚಾಯತಿ ಚುನಾವಣೆಗಳು ಬರಲಿದ್ದು ಬಿಜೆಪಿ ಕಾರ್ಯಕರ್ತರು ಇಂದಿನಿಂದಲೇ ಮನೆ-ಮನೆಗಳಿಗೆ ಭೇಟಿ ನೀಡುವುದರ ಜೊತೆಗೆ ಬಡವರ ದಲಿತರ ಹಾಗೂ ಹಿಂದುಳಿದ ಪಂಗಡಗಳ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕೆಂದು ಕರೆ ನೀಡಿದರು.

ಬಿಜೆಪಿ ಹೊಸನಗರ ಮಂಡಲದ ವತಿಯಿಂದ ನಡೆದ ಒಬಿಸಿ ಮೋರ್ಚಾ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಘೋಷಣೆ ನಡೆಯಿತು.

ಈ ಸಮಾರಂಭದಲ್ಲಿ ಮಂಡಲ ಅಧ್ಯಕ್ಷ ಎನ್. ಸತೀಶ್‌, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಎಂ. ಎನ್. ಸುಧಾಕರ್, ಮಂಡಲ ಅಧ್ಯಕ್ಷ ರಾಜೇಶ್‌ ಬುಕ್ಕಿವರೆ, ಜಿಲ್ಲಾ ಒಬಿಸಿ ಸಹಪ್ರಭಾರಿ ಮಹೇಶ್‌ ಹುಲ್ಮಾರ್‌, ಜಿಲ್ಲಾ ಒಬಿಸಿ ಪ್ರಧಾನ ಕಾರ್ಯದರ್ಶಿ ಲೋಕೇಶ್‌, ಹಿರಿಯ ಮುಖಂಡರದ ಗಣಪತಿ ಬೆಳಗೋಡು, ಎನ್‌.ಆರ್‌ ದೇವಾನಂದ, ಎ.ವಿ. ಮಲ್ಲಿಕಾರ್ಜುನ, ಆರ್.ಟಿ. ಗೋಪಾಲ್‌, ಬಿ. ಯುವರಾಜ್‌, ಸುರೇಶ್‌ ಸಿಂಗ್, ಎಂ.ಬಿ. ಮಂಜುನಾಥ್, ಮೆಣಸೆ ಆನಂದ್, ನಾಗಾರ್ಜುನ ಸ್ವಾಮಿ, ರಾಘವೇಂದ್ರ ಕಲ್ಕೊಪ್ಪ, ಒಬಿಸಿ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ರೇಖಾ ಮಹೇಶ, ಜಿಲ್ಲಾ ಒಬಿಸಿ ರೇಖಾ ರವಿ, ಪದಾಧಿಕಾರಿಗಳಾದ ಕಾಪಿ ಮಹೇಶ್‌, ಸೋಮಶೇಖರ್‌ ಅರುಗೋಡಿ, ಗಣಪತಿ, ಯೋಗೇಂದ್ರ ಕತ್ರಿಕೊಪ್ಪ, ಮಂಜುನಾಥ್ ಸಂಜೀವ, ಮಂಡಾನಿ ಮೋಹನ್, ಚಾಲುಕ್ಯ ಬಸವರಾಜ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Comment