HOSANAGARA | ಹೊಸನಗರದಿಂದ ಭಟ್ಕಳಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ (Bus) ಕಂದಕಕ್ಕೆ ಬಿದ್ದು ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾದ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಹೊಸನಗರ ತಾಲೂಕಿನ ಸಮಗೋಡು ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಬೆಂಗಳೂರಿನಿಂದ ಭಟ್ಕಳ ಕಡೆ ಸಾಗುತ್ತಿದ್ದ ಬಸ್ ಎದುರಿನಿಂದ ಬರುತ್ತಿದ್ದ ನಿಟ್ಟೂರು ಬ್ಯಾಂಕ್‌ಗೆ ಹಣ ಹಾಕಿ ವಾಪಾಸ್ ಆಗುತ್ತಿದ್ದ ಬ್ಯಾಂಕ್ ಸಿಎಂಎಸ್ ವಾಹನಕ್ಕೆ ಸೈಡ್ ಕೊಡುವ ವೇಳೆ ಬಪ್ಪನಮನೆ – ಸಮಗೋಡು ನಡುವಿನ ಗಾಜನೂರು ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ.

ಬಸ್‌ನಲ್ಲಿ ಮಕ್ಕಳು, ವಿದ್ಯಾರ್ಥಿಗಳು ಸೇರಿ ಸುಮಾರು 60 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದ್ದು ಸುಮಾರು 40 ಅಡಿ ಆಳದ ಕಂದಕಕ್ಕೆ ಬಸ್ ಉರುಳಿದ್ದು ಮಾವಿನ ಮರವೊಂದು ತಡೆದು ತಲೆ ಕೆಳಗಾಗಿ ಬಿದ್ದಿದೆ. ಮರ ಇಲ್ಲದಿದ್ದರೆ ಸುಮಾರು 100 ಅಡಿ ಆಳ ಇರುವ ಹೊಳೆಗೆ ಬಸ್ ಬೀಳುತ್ತಿತ್ತು ಎಂದು ಹೇಳಲಾಗಿದೆ.

ಗಾಯಾಳುಗಳನ್ನು ಕೂಡಲೇ ನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಬಸ್‌ನ ಚಾಲಕ ದಯಾನಂದ ಕನ್ನೋಳಿ, ಕಂಡಕ್ಟರ್ ಕಲ್ಲೇಶ್ ಗೆ ಸಣ್ಣ-ಪುಟ್ಟ ಪೆಟ್ಟಾಗಿದೆ. ಬ್ಯಾಂಕ್ ಸಿಎಂಎಸ್ ವಾಹನದ ಮುಂಭಾಗ ಜಖಂಗೊಂಡಿದೆ. ವಾಹನದಲ್ಲಿ ಚಾಲಕ ಮಂಜುನಾಥ್, ಗನ್ ಮ್ಯಾನ್ ತಿಪ್ಪೇಶಿ, ಕಸ್ಟೋಡಿಯನ್ ನಾಗಪ್ರಸನ್ನ, ಶಿವಕುಮಾರ್ ಇದ್ದು, ಚಾಲಕನ ತಲೆಗೆ ಸ್ವಲ್ಪ ಗಾಯಗಳಾಗಿದೆ.
ಅದೇ ಮಾರ್ಗದಲ್ಲಿ ಸಾಗುತ್ತಿದ್ದ ಎಎಸ್‌ಐ ಮಂಜುನಾಥ್ ಬಸ್ ಕೆಳಗೆ ಬಿದ್ದಿರುವುದು ಕಂಡು ಕೂಡಲೇ ಠಾಣೆ ಮಾಹಿತಿ ತಿಳಿಸಿದ್ದಾರೆ. ಸ್ಥಳೀಯರ ಸಹಕಾರದಿಂದ ಮಗುಚಿ ಬಿದ್ದ ಬಸ್‌ನೊಳಗೆ ಸಿಲುಕಿದ್ದ ಪ್ರಯಾಣಿಕರನ್ನು ಹೊರಗೆ ಕರೆತರಲಾಯಿತು.

ನಗರ ಪಿಎಸ್‌ಐ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡರು. ಪೊಲೀಸ್ ಇಲಾಖೆಯ ವೆಂಕಟೇಶ್, ಶಾಂತಪ್ಪ, ಸುಜಯ್ ಸೇರಿದಂತೆ ಹಲವರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.