SHIVAMOGGA | ‘ಪ್ರೀತಿ ಮಾಡಬಾರದು, ಮಾಡಿದರೆ ಜಗಕ್ಕೆ ಹೆದರಬಾರದು’ ಅಂತಾ ಹಂಸಲೇಖ ಅವರ ಹಾಡಿದೆ. ಅದರಂತೆ ಪ್ರೇಮಿಗಳಿಬ್ಬರು ಪ್ರೀತಿ ಮಾಡಿದ್ದಾರೆ, ಇದೀಗ ಈ ಪ್ರೇಮಿಗಳಿಬ್ಬರಿಗೆ ಜಾತಿ ಅಡ್ಡಿಯಾಗಿ ಭಯದಲ್ಲೇ ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು, ಕೈಕೈ ಹಿಡಿದು ಓಡಾಡುತ್ತಿರುವ ನವಜೋಡಿ, ಪ್ರೀತಿ ಮಾಡಿ ಹೊಸ ಜೀವನಕ್ಕೆ ಕಾಲಿಡಬೇಕೆಂದುಕೊಂಡಿದ್ದ ಇವರಿಗೆ ಇದೀಗ ಜಾತಿ ಅಡ್ಡಿಯಾಗಿದೆ.
ಶಿವಮೊಗ್ಗ ನಗರದ ನವುಲೆ ನಿವಾಸಿಗಳಾದ ಲೇಖನ ಹಾಗೂ ಬಸವರಾಜ್ ಕಳೆದ ಎರಡು ವರ್ಷದಿಂದ ಪ್ರೀತಿ ಮಾಡಿದ್ದರು. ಇದೀಗ ಪ್ರೀತಿ ಮಾಡಿದ ಪರಸ್ಪರ ಒಪ್ಪಿಗೆ ಮೇರೆಗೆ ಕಳೆದ ನಾಲ್ಕು ದಿನದ ಹಿಂದೆ ಮದುವೆಯಾಗಿದ್ದಾರೆ. ಇದೀಗ ಹುಡುಗಿ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿ ಜೀವ ಬೆದರಿಕೆ ಹಾಕಿದ್ದಾರೆಂದು ಪ್ರೇಮಿಗಳು ಆರೋಪ ಮಾಡಿದ್ದು ಠಾಣೆ ಮೆಟ್ಟಿಲೇರಿ ನಮಗೆ ರಕ್ಷಣೆ ನೀಡಿ ಎಂದು ವಿನೋಬನಗರದ ಪೊಲೀಸರ ಮೊರೆ ಹೋಗಿದ್ದಾರೆ.
ಇನ್ನು ಈ ಜೋಡಿಗೆ ಯುವಕನ ಕಡೆಯವರು ಒಪ್ಪಿಗೆ ಸೂಚಿಸಿದ್ದು ಯುವಕ ಯುವತಿಯ ಬೆನ್ನಿಗೆ ನಿಂತಿದ್ದಾರೆ. ಇನ್ನ ಪ್ರೀತಿ ಮಾಡಿ ಮದುವೆಯಾದ ನವಜೋಡಿ ಭಯದಲ್ಲೇ ಬದುಕಿದ್ದು ಪೊಲೀಸರು ನಮಗೆ ರಕ್ಷಣೆ ನೀಡಬೇಕು, ನಮಗೆ ಏನಾದರು ಆದರೆ ನಮ್ಮ ಮನೆಯವರೇ ಕಾರಣ ಎಂದು ಯುವತಿ ಆರೋಪ ಮಾಡಿದ್ದಾರೆ. ನಾವು ಪರಸ್ಪರ ಪ್ರೀತಿಸಿ ಇದೀಗ ಮದುವೆಯಾಗಿ ಹೊಸ ಜೀವನಕಟ್ಟಿಕೊಂಡಿದ್ದೇವೆ, ನಮಗೆ ಬದುಕಲು ಬಿಡಿ ಎಂದು ನವಜೋಡಿ ಆಗ್ರಹ ಮಾಡಿದೆ.
ಒಟ್ಟಾರೆ, ಪ್ರೀತಿ ಮಾಡಿ ಮದುವೆಯಾದ ಹೊಸ ಜೋಡಿಗೆ ಇದೀಗ ಜಾತಿ ಅಡ್ಡಿ ಬಂದಿರೋದು ನಿಜಕ್ಕೂ ವಿಪರ್ಯಾಸವೇ ಸರಿ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.