Anna Bhagya: ಅನ್ನಭಾಗ್ಯ ಯೋಜನೆಯಂತೆ ಇನ್ನು ಮುಂದೆ ರಾಜ್ಯ ಸರ್ಕಾರದಿಂದ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಬದಲು ಹಣ ವನ್ನ ನೀಡಲಾಗುತ್ತಿರುವುದು ಬಹುತೇಕ ನಿಲ್ಲಲಿದೆ. ಸರ್ಕಾರ ಹಣದ ಬದಲು ಅಕ್ಕಿ ನೀಡಲು ಚಿಂತಿಸಿದೆ.
ಅಕ್ಕಿ ನೀಡಲು ಕೇಂದ್ರ ಒಪ್ಪಿದೆ
ಈ ಕುರಿತು ದೆಹಲಿಯಲ್ಲಿ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ, ಮಾತನಾಡಿ ”ಅನ್ನಭಾಗ್ಯ ( anna bagya )ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸರಕಾರಕ್ಕೆ ಅಕ್ಕಿ ಮಾರಾಟ ಮಾಡಲು ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ. ಅಗತ್ಯ ಅಕ್ಕಿ ನೀಡುತ್ತೇವೆ ಎಂದು ಸಚಿವರು ತಿಳಿಸಿದರು. ಕೇಂದ್ರವು ಅಕ್ಕಿಯನ್ನ ನೀಡಲು ಪ್ರಾರಂಭಿಸಿದಾಗ, ನಾವು ಅವರಿಗೆ ಸಂಪೂರ್ಣ 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಅವರು ಹೇಳಿದರು.
ಅಕ್ಕಿಯನ್ನು 28 ರೂಪಾಯಿಗೆ ನೀಡುವುದಾಗಿ ಒಪ್ಪಂದ
ಭಾರತೀಯ ಆಹಾರ ನಿಗಮ (ಎಫ್ಸಿಐ) ಇಂದಿನ ಬೆಲೆಯಲ್ಲಿ 34 ರೂ. ಇದೀಗ ಕೇಂದ್ರ ಸರ್ಕಾರ 28 ರೂಪಾಯಿಗೆ ಅಕ್ಕಿ ನೀಡಲು ನಿರ್ಧರಿಸಿದೆ. ಆದಷ್ಟು ಬೇಗ ಸಚಿವ ಪ್ರಹಾದ್ ಜೋಶಿ ಅವರೊಂದಿಗೆ ಮಾತನಾಡಿ ನಮ್ಮ ರಾಜ್ಯಕ್ಕೆ ಬೇಕಾದ ಅಕ್ಕಿಯನ್ನು ಕೊಡಿಸಬೇಕು. ಉಳಿದ 5 ಕೆ.ಜಿ ಅಕ್ಕಿಯನ್ನು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೆವು ಆದರೆ ಕೇಂದ್ರ ಸರ್ಕಾರ ನೀಡಿರಲಿಲ್ಲ. ಈ ಬಾರಿ ಅಕ್ಕಿ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಅದನ್ನು ಸ್ವಾಗತಿಸುತ್ತೇನೆ ಎಂದು ಹೇಳಿದರು.
Read More
Farmer Loan Waiver :ರೈತರಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ, ಇಂತಹ ರೈತರ ಸಾಲ ಮನ್ನಾ
Baal Aadhaar Card : 5 ವರ್ಷದೊಳಗಿನ ಮಕ್ಕಳಿಗೆ ಮಾಡಿಸಬೇಕು ಬಾಲ ಆಧಾರ್ ಇಲ್ಲಿದೆ ಮಾಹಿತಿ