RIPPONPETE ; ದಲಿತ ವಿರೋಧಿ ಮುನಿರತ್ನರವರ ಶಾಸಕ ಸ್ಥಾನವನ್ನು ಈ ಕೊಡಲೇ ವಜಾಗೊಳಿಸುವಂತೆ ಆಗ್ರಹಿಸಿ ರಿಪ್ಪನ್ಪೇಟೆಯಲ್ಲಿ ಒಕ್ಕಲಿಗ ಸಂಘದವರು ಪ್ರತಿಭಟನಾ ಮೆರವಣಿಗೆ ನಡೆಸಿ ನಾಡಕಛೇರಿ ಉಪತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಒಕ್ಕಲಿಗರ ಸಂಘದ ಆಡಳಿತ ಮಂಡಳಿ ಮತ್ತು ಒಕ್ಕಲಿಗ ಮಹಿಳಾ ಸಮಾಜದ ಮಹಿಳೆಯರು ಸೇರಿದಂತೆ ಸಮಾಜದ ಮುಖಂಡರಾದ ಕಲ್ಲೂರು ಕೆ.ಸಿ.ತೇಜಮೂರ್ತಿ, ಕೆರೆಹಳ್ಳಿ ರವೀಂದ್ರ, ಕಲ್ಲೂರು ಮಂಜುನಾಥ, ಷಣ್ಮುಖಪ್ಪ ಬೈರಾಪುರ, ಪರಮೇಶ್, ಡ್ರೈವರ್ ಮಹೇಶ್ ಕೋಟೆತಾರಿಗ, ಹೆಚ್.ಎನ್. ಉಮೇಶ್, ಪ್ರಕಾಶ್ ಹಾಲುಗುಡ್ಡೆ, ವೇದಾವತಿ, ವಾಣಿ ಗೋವಿಂದಪ್ಪ, ಸುಮಂಗಳ, ಹರೀಶ್ ಹಾಲುಗುಡ್ಡೆ, ಬೈರಾಪುರ ರಾಘವೇಂದ್ರ, ಸವಿತಾರವಿ, ಶಿಲ್ಪ ರಾಜೇಶ್, ಚಿಂತು ಹಾಲುಗುಡ್ಡೆ ವನಜಾಕ್ಷಿ ಲೋಕಪ್ಪಗೌಡ, ರಾಮಚಂದ್ರಗೌಡ, ಷಣ್ಮುಖಪ್ಪ ವರದೇಗೌಡ, ಕೃಷ್ಣಮೂರ್ತಿ ಗರ್ತಿಕೆರೆ ಇನ್ನಿತರ ನೂರಾರು ಒಕ್ಕಲಿಗ ಸಮಾಜದ ಮಹಿಳೆಯರು ಮುಖಂಡರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸರ್ಕಾರಿ ಶಾಲೆ ಮಕ್ಕಳಿಗೆ ಕುರ್ಚಿಗಳ ವಿತರಣೆ
RIPPONPETE ; ಇಲ್ಲಿನ ವಂದನಾ ಟೆಕ್ಸ್ ಟೈಲ್ಸ್ ರೊ.ತಾನಾರಾಮ್ ಪಟೇಲ್ ಇವರು ರೋಟರಿ ಕ್ಲಬ್ ಮೂಲಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್.ಕೆ.ಜಿ ಮತ್ತು ಯು.ಕೆ.ಜಿ. ಇನ್ನಿತರ ತರಗತಿಯ ಮಕ್ಕಳಿಗೆ ಛೇರ್ಗಳನ್ನು ಕೊಡುಗೆಯಾಗಿ ನೀಡಲಾಗಿದ್ದು ಅದನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಕುರ್ಚಿಗಳ ವಿತರಣಾ ಸಮಾರಂಭದ ಅಧ್ಯಕ್ಷಯನ್ನು ರೋಟರಿ ಕ್ಲಬ್ ಅಧ್ಯಕ್ಷ ಶುಂಠಿ ರಾಮಚಂದ್ರ ವಹಿಸಿದ್ದರು.
ಮುಖ್ಯ ಆತಿಥಿಗಳಾಗಿ ಜಿಲ್ಲಾ ರೋಟರಿ ಗೌರನ್ನರ್ ಸಿಎ ದೇವ ಆನಂದ ಜಿಲ್ಲಾ ಅಸಿಸ್ಟಂಟ್ ಗೌರನ್ನರ್ ಹೆಚ್.ಎಂ.ಸುರೇಶ್, ಜೆ.ರಾಧಾಕೃಷ್ಣ, ಗಣೇಶ್ ಎನ್.ಕಾಮತ್, ಹೆಚ್.ಎಂ.ವರ್ತೇಶ್, ನಿವೃತ್ತ ಶಿಕ್ಷಕ ರಾಧಾಕೃಷ್ಣ, ಎಂ.ಬಿ.ಮಂಜುನಾಥ, ಬಿ.ಎನ್.ಆಶೋಕ, ಶಿವಕುಮಾರ್ ಶೆಟ್ಟಿ, ರವೀಂದ್ರ ಬಲ್ಲಾಳ, ಡಾಕಪ್ಪ, ರೋಟರಿ ಕ್ಲಬ್ ಕಾರ್ಯದರ್ಶಿ ಸಬಾಸ್ಟಿನ್ ಮ್ಯಾಥೂಸ್, ಇನ್ನಿತರ ರೋಟರಿ ಕ್ಲಬ್ ಸದಸ್ಯರು ಹಾಜರಿದ್ದರು.