ಪೊಲೀಸ್ ಠಾಣೆ ಕಟ್ಟಡದ ಮೇಲೆ ಹತ್ತಿ ಆತ್ಮಹತ್ಯೆಗೆ ಯತ್ನ ; ಮಹಿಳೆಯನ್ನು ಕಾಪಾಡಿದ ಮಾಡಿದ ಪೊಲೀಸರು !

0 43

ಮೂಡಿಗೆರೆ: ಒಂದು ವರ್ಷದ ಹಿಂದೆ ನಡೆದ ಸಹೋದರಿಯರಿಬ್ಬರ ಕಲಹ ಬೀದಿಗೆ ಬಂದು ಪೊಲೀಸ್ ಠಾಣೆ ಕಟ್ಟಡದ ಮೇಲಿನಿಂದ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪಟ್ಟಣದಲ್ಲಿ ನಡೆದಿದೆ.


ಕಳೆದ ವರ್ಷ ಶಿಲ್ಪ ಹಾಗೂ ಆಕೆಯ ಸಹೋದರಿ ನಡುವೆ ಜಗಳವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಶಿಲ್ಪ ವಿರುದ್ಧವೇ ಕೇಸ್ ದಾಖಲಾಗಿತ್ತು. ಕಳೆದ ಒಂದು ವರ್ಷದಿಂದ ಶಿಲ್ಪ ಕೋರ್ಟ್‌ಗೆ ಹಾಜರಾಗಿರಲಿಲ್ಲ. ಪರಿಣಾಮ ಕೋರ್ಟ್‌ನಿಂದ ಸಮನ್ಸ್ ಜಾರಿಯಾಗಿತ್ತು. ಕೋರ್ಟ್‌ನಿಂದ ನೀಡಿದ ಸಮನ್ಸ್ ಹಿಡಿದುಕೊಂಡು ಮೂಡಿಗೆರೆ ಪೊಲೀಸ್ ಠಾಣೆ ಏರಿ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೆದರಿಸಿದ್ದಾಳೆ. ನಂತರ ಪೊಲೀಸ್ ಠಾಣಾ ಸಿಬ್ಬಂದಿ ಠಾಣೆ ಮಹಡಿ ಏರಿ ತಡೆದು ಕೆಳಗಿಳಿಸಿದ್ದಾರೆ. ಬಳಿಕ ಚಿಕ್ಕಮಗಳೂರಿನ ಆಕೆಯ ಮನೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ.

ಶಿಲ್ಪನ ಹಿರಿಯ ಸಹೋದರಿಯ ಮನೆ ಮೂಡಿಗೆರೆ. ಹೀಗಾಗಿ ಆಕೆ ಇಲ್ಲಿ ಬಂದು ಹೈಡ್ರಾಮ ಸೃಷ್ಟಿಸಿದ್ದಾಳೆ.
ಇಬ್ಬರು ಸಹೋದರಿಯ ನಡುವೆ ಜಗಳವಾಗಿತ್ತು. ಅಕ್ಕ ಮತ್ತು ಬಾವ ತನಗೆ ಬೈದು ಹೊಡೆದಿದ್ದಾರೆ ಎಂದು ದೂರು ನೀಡಲು ಮೂಡಿಗೆರೆ ಪೊಲೀಸ್ ಠಾಣೆಗೆ ಬಂದಿದ್ದಳು. ಈ ವೇಳೆ ಠಾಣೆಯ ಮಹಿಳಾ ಸಿಬ್ಬಂದಿ ಸುಜಾತ ಎನ್ನುವವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸಮವಸ್ತ್ರ ಹರಿದು ಎಳೆದಾಡಿದ್ದಳಂತೆ. ಹೀಗಾಗಿ ಠಾಣಾ ಸಿಬ್ಬಂದಿ ಸುಜಾತ 29-05-2022ರಂದು ಆಕೆಯ ವಿರುದ್ಧ ದೂರ ದಾಖಲಿಸಿದರು.

ಈ ಸಂಬಂಧ ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಕಳೆದ ಒಂದು ವರ್ಷದಿಂದ ಶಿಲ್ಪ ಕೋರ್ಟ್‌ಗೆ ಹಾಜರಾಗಿರಲಿಲ್ಲ. ಪರಿಣಾಮ ಕೋರ್ಟ್‌ನಿಂದ ಸಮನ್ಸ್ ಜಾರಿಯಾಗಿತ್ತು. ಕೋರ್ಟ್‌ನಿಂದ ನೀಡಿದ ಸಮನ್ಸ್ ಹಿಡಿದುಕೊಂಡು ಬಂದು ಮೂಡಿಗೆರೆ ಪೊಲೀಸ್ ಠಾಣೆಯ ಮೇಲೇರಿ ಅಲ್ಲಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೆದರಿಸಿದ್ದಾಳೆ.
ಸ್ಥಳೀಯರ ಮಾಹಿತಿ ಪ್ರಕಾರ ಶಿಲ್ಪ (28) ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ.

Leave A Reply

Your email address will not be published.