RIPPONPETE ; ದೀಪಾವಳಿ ಹಬ್ಬದ ಅಂಗವಾಗಿ ರಿಪ್ಪನ್ಪೇಟೆಯ ವಾರದ ಸಂತೆ ಇಂದು ನಡೆದಿದ್ದು ಗಗನಕ್ಕೇರಿದ ತರಕಾರಿ, ಹೂ, ಹಣ್ಣು ಮತ್ತು ದಿನಸಿಗಳ ಬೆಲೆಯ ನಡುವೆಯೂ ಭರ್ಜರಿ ವಹಿವಾಟು ನಡೆಯಿತು.
ಹಬ್ಬದ ಅಂಗವಾಗಿ ಜಾನುವಾರುಗಳ ಕೊರಳಿಗೆ ಗಂಟೆ, ಕಣ್ಣಿ ಮತ್ತು ಹಗ್ಗ ಸೇರಿದಂತೆ ಬೂರೆ ಕುಂಬಗಳು, ಮಣ್ಣಿನ ಹಣತೆ, ತರಕಾರಿ ಸಿಹಿಕುಂಬಳ, ಸೊಪ್ಪಿನ ವ್ಯಾಪಾರ ದುಬಾರಿ ದರದಲ್ಲೂ ಬಲು ಜೋರಾಗಿ ನಡೆಯಿತು.

ದೀಪಾವಳಿ ನೋನಿ ಹಿನ್ನೆಲೆಯಲ್ಲಿ ಕೋಳಿ, ಕುರಿ ಮತ್ತು ಬಿದರಿನ ಬುಟ್ಟಿ, ಹಣ್ಣು, ಹೂ, ತೆಂಗಿನಕಾಯಿ ವ್ಯಾಪಾರ ಸಹ ಭರ್ಜರಿಯಾಗಿ ನಡೆಯಿತು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.