ಹೊಂಬುಜದಲ್ಲಿ 3ನೇ ದಿನದ ಇಂದ್ರಧ್ವಜ ಮಹಾಮಂಡಲ ವಿಧಾನ | ಜೈನಾಗಮ ಆರಾಧನೆಯಿಂದ ಧರ್ಮನಿಷ್ಠೆ ಉದ್ದೀಪನ ; ಸೋಂದಾ ಶ್ರೀಗಳು

Written by malnadtimes.com

Published on:

RIPPONPETE ; ಅತಿಶಯ ಶ್ರೀಕ್ಷೇತ್ರದಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸಲ್ಪಟ್ಟ ಇಂದ್ರಧ್ವಜ ಮಹಾಮಂಡಲ ವಿಧಾನವು ಜೈನಾಗಮ ಆರಾಧನಾ ಪವಿತ್ರ ವಿಧಿಯಾಗಿದೆ ಎಂದು ಸೋಂದಾ ಶ್ರೀ ಜೈನ ಮಠದ ಪೀಠಾಧೀಶರಾಗಿರುವ ಪರಮಪೂಜ್ಯ ಸ್ವಸ್ತಿಶ್ರೀ ಅಕಲಂಕಕೇಸರಿ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಆರಾಧನಾ ವಿಧಿಯ ಸ್ತ್ರೋತ್ರಗಳನ್ನು ಉಲ್ಲೇಖಿಸಿದರು.

WhatsApp Group Join Now
Telegram Group Join Now
Instagram Group Join Now

ಪೂಜಾ ವಿಧಿಯಲ್ಲಿ ಭಾಗಿಯಾಗಿರುವ ಶ್ರಾವಕ-ಶ್ರಾವಕಿಯರಿಗೆ ಸುಸ್ಪಷ್ಟವಾಗಿ ಆಧ್ಯಾತ್ಮಿಕ ಮರ್ಮವನ್ನು ತಿಳಿಯುವಂತೆ ವಿಧಾನದ ಕುರಿತು ತಿಳಿ ಹೇಳಿದರು.

ತ್ರಿಕರಣ ಪೂರ್ವಕ ಭಕ್ತಿಯಿಂದ ಪ್ರಸನ್ನ ಚಿತ್ತರಾಗುವಿರಿ ಎಂದು ಶುಭಾಶೀರ್ವಾದದಿಂದ ಹರಸಿದರು. ಆರ್ಯಿಕಾರತ್ನ ಶ್ರೀ 105 ಶಿವಮತಿ ಮಾತಾಜಿ, ಆರ್ಯಿಕಾ ಶ್ರೀ 105 ಪದ್ಮಶ್ರೀ ಮಾತಾಜಿಯವರು ಪೂಜಾ ವಿಧಿ ಬೋಧಿಸಿದರು.

ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಮಾರ್ಗದರ್ಶನದಲ್ಲಿ 112 ಧ್ವಜಗಳನ್ನು ಸ್ಥಾಪಿಸಲಾಯಿತು.

ಪ್ರಾತಃಕಾಲ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ನಿತ್ಯ ಪೂಜೆ ಸಮರ್ಪಿಸಲಾಯಿತು. ರಾತ್ರಿ ಆರತಿ ಕಾರ್ಯಕ್ರಮದಲ್ಲಿ ಊರ ಪರವೂರ ಶ್ರಾವಕ-ಶ್ರಾವಿಕೆಯರು ಪಾಲ್ಗೊಂಡರು. ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.


ತುರ್ತು ಸಂದರ್ಭಗಳಲ್ಲಿ ಮಕ್ಕಳ ಸಹಾಯವಾಣಿ ಬಳಸಿ ; ನ್ಯಾ.ಸಂತೋಷ್‌ಕುಮಾರ್

HOSANAGARA ; ಮಕ್ಕಳಿಗೆ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಬಗ್ಗೆ ಸೂಕ್ತ ಅರಿವು ಇರಬೇಕು. ತುರ್ತು ಸಂದರ್ಭಗಳಲ್ಲಿ ಮಕ್ಕಳ ಸಹಾಯವಾಣಿ ಬಳಕೆ ಮಾಡಬಹುದು ಎಂದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ, ಹಿರಿಯ ವ್ಯವಹಾರ ನ್ಯಾಯಾಧೀಶ ಎಂ.ಎಸ್.ಸಂತೋಷ್ ಕುಮಾರ್‌ ತಿಳಿಸಿದರು.

ಇಲ್ಲಿನ ಗುರೂಜಿ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಸಂವಿಧಾನಾತ್ಮಕವಾಗಿ ಮಕ್ಕಳಿಗಾಗಿ ಇರುವ ವಿಶೇಷ ಹಕ್ಕುಗಳ ಕುರಿತು ಮಕ್ಕಳಿಗೆ ಹಾಗೂ ಪೋಷಕರಿಗೆ ಅರಿವಿರಬೇಕು. ಮಕ್ಕಳಿಗೆ ತಮ್ಮ ಹಕ್ಕುಗಳ ಮಾಹಿತಿ ನೀಡುವ ಜೊತೆಗೆ ಕರ್ತವ್ಯಗಳನ್ನು ತಪ್ಪದೇ ಪಾಲಿಸುವ ಕುರಿತು ಜಾಗೃತಿ ಮೂಡಿಸುವ ಕೆಲಸ ಆಗಬೇಕು
ದೇಶದ ಒಳಿತಿಗಾಗಿ ಸಲ್ಲಿಸುವ ಸೇವೆ ನಮ್ಮ ಜೀವನದ ಭಾಗವಾಗಬೇಕು. ಟಿವಿ ಹಾಗೂ ಮೊಬೈಲ್ ಬಳಕೆ ಮಕ್ಕಳ ಹಕ್ಕುಗಳ ವ್ಯಾಪ್ತಿಯಲ್ಲಿ ಬರುವುದಿಲ್ಲ. ಪೋಷಕರು ಅನುಮತಿ ನೀಡಿದಲ್ಲಿ ಮಾತ್ರ ಬಳಸಬಹುದಾಗಿದೆ ಎಂದು ಮಕ್ಕಳಿಗೆ ಅವರು ತಿಳಿಸಿದರು.

ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುದೇಶ್ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಶಾಂತಮೂರ್ತಿ, ಸಂತೋಷ ಕಾಮತ್, ಶೇಷಾಚಲ ಜಿ ನಾಯ್ಕ್, ಪರಮೇಶ್ವರ, ರೇಣುಕೇಶ್ ಮತ್ತಿತರರು ಇದ್ದರು.

ಪ್ರಾಚಾರ‍್ಯೆ ಭವಾನಿ ಸ್ವಾಗತಿಸಿ ಶಿಕ್ಷಕಿಯರಾದ ಸುನಿತಾ ಹಾಗೂ ಸುಷ್ಮಾ ಕಾರ್ಯಕ್ರಮ ನಿರ್ವಹಿಸಿದರು.

Leave a Comment