ಯೋಷಿತಾ‌ ಎಸ್ ಸೊನಲೆಗೆ ಮೂರು ಚಿನ್ನದ ಪದಕ ; ಎಂ.ಎ. ಆಂಗ್ಲ ವಿಭಾಗದಲ್ಲಿ ಪ್ರಥಮ‌ ರ‍್ಯಾಂಕ್, ಕುವೆಂಪು ವಿವಿ 34ನೇ ಘಟಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ

Written by malnadtimes.com

Published on:

ಹೊಸನಗರ ; ಪಟ್ಟಣದ ಕುವೆಂಪು ವಿದ್ಯಾಸಂಸ್ಥೆಯ ಮುಖ್ಯಸ್ಥ, ನಗರ ಪದವಿಪೂರ್ವ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ, ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ. ಸೊನಲೆ ಶ್ರೀನಿವಾಸ್ ಅವರ ಪ್ರಥಮ ಪುತ್ರಿ ಯೋಷಿತಾ ಎಸ್ ಸೊನಲೆ ಅವರು ಪ್ರಸಕ್ತ ಸಾಲಿನ ಕುವೆಂಪು ವಿಶ್ವ ವಿದ್ಯಾಲಯದ ಆಂಗ್ಲ ಭಾಷಾ ಎಂ.ಎ ಪದವಿಯಲ್ಲಿ ಪ್ರಥಮ ರ‍್ಯಾಂಕ್ ಪಡೆದು, ಮೂರು ಚಿನ್ನದ ಪದಕಕ್ಕೆ ಭಾಜನರಾಗಿದ್ದರು. 

WhatsApp Group Join Now
Telegram Group Join Now
Instagram Group Join Now

ಇಂದು ಕುವೆಂಪು ವಿವಿಯ 34ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಚಿನ್ನದ ಪದಕದ ಜೊತೆಯಲ್ಲಿ ಪದವಿ ಪ್ರದಾನ ಮಾಡಿದರು.

ಮೂಲತಃ ಸೊನಲೆ ಗ್ರಾಮದ ಯೋಷಿತ, ತಂದೆ ಡಾ.ಸೊನಲೆ‌ ಶ್ರೀನಿವಾಸ್ ಹಾಗು ತಾಯಿ ವೇದಾ ದಂಪತಿಗಳ ಮೊದಲ ಪುತ್ರಿ. ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಕುವೆಂಪು ವಿದ್ಯಾಸಂಸ್ಥೆಯಲ್ಲಿ ಪೂರೈಸಿದ ಬಳಿಕ, ಪದವಿಯನ್ನು ಶಿವಮೊಗ್ಗದ ಕಮಲಾ ನೆಹರು ಕಾಲೇಜಿನಲ್ಲಿ ಪ್ರಥಮ ರ‍್ಯಾಂಕ್ ನೊಂದಿಗೆ ಪೂರ್ಣಗೊಳಿಸಿದ್ದು ವಿಶೇಷ.

ಪ್ರಸಕ್ತ ಶಿವಮೊಗ್ಗದ ಶ್ರೀ  ಅಶೋಕ್ ಪೈ ಪದವಿ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇವರ ಸಾಧನೆಗೆ ಪ್ರಶಂಸೆಯ ಮಹಾಪೂರವೇ ಹರಿದುಬಂದಿದೆ.

Leave a Comment